Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2022ನೆಯ ಸಾಲಿನ ‘ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಪತ್ರಕರ್ತೆ ಹಾಗೂ ಲೇಖಕಿ ಶ್ರೀಮತಿ ಶೋಭಾ ಹೆಚ್.ಜಿ. ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಹಿರಿಯ ಸಾಹಿತಿ ಶ್ರೀಮತಿ ಎ. ಪಂಕಜ ಅವರು ಸ್ಥಾಪಿಸಿರುವ ‘ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ’ಯು 10,೦೦೦ (ಹತ್ತು ಸಾವಿರ)ರೂ. ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ. 35 ವರ್ಷ ಮೇಲ್ಪಟ್ಟ ಮಹಿಳಾ ಸಾಹಿತಿಗಳಿಗೆ ಮೀಸಲಿರುವ ಈ ಪ್ರಶಸ್ತಿಯನ್ನು ಇದುವರೆಗೆ 9 ಜನ ಮಹಿಳಾ ಸಾಹಿತಿಗಳಿಗೆ ಪ್ರಧಾನ ಮಾಡಲಾಗಿದೆ. ಈ ಬಾರಿ ನೀಡಲಾಗುತ್ತಿರುವ 2022ನೆಯ ಸಾಲಿನ ‘ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ’ಗಾಗಿ ಶೋಭಾ ಹೆಚ್.ಜಿ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ತಿಳಿಸಿದ್ದಾರೆ. ದತ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ…
ಬೆಂಗಳೂರು: ಎಸ್.ಎನ್. ಪಂಜಾಜೆ ಎಂದೆ ಪ್ರಸಿದ್ಧರಾಗಿದ್ದ ಪಂಜಾಜೆ ಸೂರ್ಯನಾರಾಯಣ ಭಟ್ (71) ಇವರು 22-05-2023ರಂದು ಇಹಲೋಕ ಯಾತ್ರೆ ಮುಗಿಸಿದರು. ತಾವೇ ಸ್ಥಾಪಿಸಿದ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ (ರಿ.) ಬೆಂಗಳೂರು ಮೂಲಕ 15 ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡೆಸಿದ್ದರು. ನಾಡಿನ ರಾಜಧಾನಿಯಲ್ಲಿದ್ದು ಯಕ್ಷಗಾನದ ಕಲಿಕೆ, ಪ್ರಸಾರ, ಪ್ರದರ್ಶನ ಮತ್ತು ಚಿಂತನೆಗೆ ಸಂಬಂಧಿಸಿ ಅವರು ಮಾಡಿದ ಕೆಲಸ ದಾಖಲಾರ್ಹವಾದುದು. ಕರ್ನಾಟಕದ ಯಕ್ಷಗಾನ ಪ್ರದೇಶಗಳಲ್ಲದೆ, ಅನ್ಯ ಜಿಲ್ಲೆಗಳಲ್ಲಿ ಹಾಗೂ ಮುಂಬೈಯಲ್ಲಿ ಸಮ್ಮೇಳನವನ್ನು ವಿಶಿಷ್ಟವಾಗಿ ನಡೆಸಿದ ಖ್ಯಾತಿಗೆ ಭಾಜನರಾಗಿದ್ದಾರೆ. ಪ್ರತೀ ಸಮ್ಮೇಳನದಲ್ಲೂ ಯಕ್ಷಗಾನ ಹಿರಿಯ ಸಾಧಕರಿಗೆ ಸಮ್ಮೇಳನಾಧ್ಯಕ್ಷ ಪಟ್ಟ ನೀಡಿ, ಹಲವರನ್ನು ಗೌರವಿಸುತ್ತಾ ಸಂತೋಷ ಪಟ್ಟಿದ್ದರು. ಹತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ನಮ್ಮ ಸಂಸ್ಥೆಗೆ ಪ್ರಶಸ್ತಿ ನೀಡಿ ಗೌರವಿಸಿದ್ದರು. ಉಡುಪಿಯಲ್ಲಿ ಜರಗಿದ ಪ್ರಥಮ ಕರ್ನಾಟಕ ಯಕ್ಷಗಾನ ಸಮ್ಮೇಳನದಲ್ಲಿ ಅವರನ್ನು ಸಮ್ಮೇಳನದ ಪ್ರಶಸ್ತಿ ನೀಡಿ ಪುರಸ್ಕರಿಸಿದ ನೆನಪು ಹಸಿರಾಗಿದೆ. ಅವರು ಪತ್ನಿ, ಪುತ್ರ ಮತ್ತು ಅಸಂಖ್ಯಾತ ಯಕ್ಷಗಾನ ಪ್ರೇಮಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ…
ಕಿನ್ನಿಗೋಳಿ : ತಾಳಿಪಾಡಿಗುತ್ತುವಿನಲ್ಲಿ ದಿನಾಂಕ 06-05-2023ರಂದು ಕಟೀಲು ಮೇಳದ 29ನೇ ವರ್ಷದ ಬಯಲಾಟ ಸಂದರ್ಭ ಕಟೀಲು ಮೇಳದ ಹಿರಿಯ ಕಲಾವಿದ ಅಮ್ಮುಂಜೆ ಮೋಹನ್ ಕುಮಾರ್ ಅವರನ್ನು ಚಿನ್ನದ ಪದಕ ಹಾಗೂ ಗೌರವಧನ ನೀಡಿ ಗೌರವಿಸಲಾಯಿತು. ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ದಿನೇಶ್ ಭಂಡ್ರಿಯಾಲ್ ತಾಳಿಪಾಡಿಗುತ್ತು, ಮುಂಬಯಿ ಉದ್ಯಮಿ ರಾಮಚಂದ್ರ ಎನ್. ಶೆಟ್ಟಿ, ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚರಣ್ ಜೆ. ಶೆಟ್ಟಿ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಅಶ್ವಿನ್ ಶೇಖ ಕುಡುಂಬೂರು, ಮುಂಬಯಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಸಂಘಟಕ ಧನಪಾಲ ಶೆಟ್ಟಿ ತಾಳಿಪಾಡಿಗುತ್ತು, ಸಾರಿಕಾ ಧನಪಾಲ ಶೆಟ್ಟಿ ಉಪಸ್ಥಿತರಿದ್ದರು. ಶರತ್ ಸ್ವಾಗತಿಸಿ, ನಿರೂಪಿಸಿದರು.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2021,2022 ಹಾಗೂ 2023 ನೇ ಸಾಲಿನ ʻಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿʼ ಕನ್ನಡ ನಾಟಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ.ಮಹೇಶ ಜೋಶಿ ತಿಳಿಸಿದ್ದಾರೆ. ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿ ಕನ್ನಡ ರಂಗಭೂಮಿಯಲ್ಲಿ ದುಡಿಯುತ್ತಿರುವ ಕಲಾವಿದರೊಬ್ಬರಿಗೆ ಪ್ರತಿ ವರ್ಷ ಗುರುತಿಸಿ ಪ್ರಸ್ತುತ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ. ಈ ಪ್ರಶಸ್ತಿಯು 5000(ಐದು ಸಾವಿರ)ರೂ. ನಗದು ಹಾಗೂ ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ನಾಟಕ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ರಂಗ ಕಲಾವಿದರನ್ನು ಗುರುತಿಸಿ ಅವರ ಪ್ರತಿಭೆಯನ್ನು ಹಾಗೂ ಅವರ ಸಾಧನೆಗಳನ್ನು ಗಮನಿಸಿ ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಇದುವರೆಗೆ…
ಮಂಗಳೂರು : ಯಕ್ಷ ಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು ಇದರ ‘ಯಕ್ಷ ಧ್ರುವ ಪಟ್ಲ ಸಂಭ್ರಮ 2023’ ದಿನಾಂಕ 28-05-2023 ಆದಿತ್ಯವಾರ ಮಂಗಳೂರಿನ ಅಡ್ಯಾರ್ ಗಾರ್ಡನ್ ಇಲ್ಲಿ ನಡೆಯಲಿರುವುದು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಅರ್ಥದಾರಿ ಮತ್ತು ವೇಷಧಾರಿಯಾದ ಪ್ರೊ. ಎಮ್.ಎಲ್. ಸಾಮಗರವರಿಗೆ ‘ಯಕ್ಷ ಧ್ರುವ ಪಟ್ಲ ಪ್ರಶಸ್ತಿ 2023’ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಬ್ಬರ ತಾಳ, ಯಕ್ಷಗಾನ ಸಪ್ತಸ್ವರ, ಯಕ್ಷಗಾನ ತಾಳಮದ್ದಳೆ, ಮಹಿಳಾ ಯಕ್ಷಗಾನ ಜರಗಲಿರುವುದು. ಕರಾವಳಿಯ ಪ್ರತಿಷ್ಠಿತ ಆಹ್ವಾನಿತ ಕಲಾ ತಂಡಗಳಿಂದ ‘ಯಕ್ಷ ಧ್ರುವ ಕಲಾ ವೈಭವ’ ಅಪೂರ್ವ ಪ್ರತಿಭೆಗಳ ಚಾರಿತ್ರಿಕ ಸ್ಪರ್ಧೆ ನಡೆಯಲಿದೆ.
ಬೆಂಗಳೂರು : ಈ ಹೊತ್ತಿಗೆ ಟ್ರಸ್ಟ್ ನ ದಶಮಾನೋತ್ಸವದ ಅಂಗವಾಗಿ, ‘ಸಾಹಿತ್ಯ ಅಕಾಡೆಮಿ ನವದೆಹಲಿ’ಯವರ ಸಹಯೋಗದೊಂದಿಗೆ ನಡೆಸಿದ, ‘ಮಧುರ ಚೆನ್ನರ ಕಾವ್ಯ ಮಾಧುರ್ಯ’ – ಕವನ ವಾಚನ ಮತ್ತು ವಿಶ್ಲೇಷಣೆಯ ಕಾರ್ಯಕ್ರಮ ದಿನಾಂಕ 14-05-2023ರಂದು ಜಯನಗರದ ಸಿರಿಸಂಪಿಗೆಯಲ್ಲಿ ನಡೆಯಿತು. ”ಭಾವ, ಭಾಷೆ, ಲಯ ಮುಂತಾದವುಗಳಿಂದ ಅತ್ಯುತ್ತಮ ಕನ್ನಡ ಕವನಗಳನ್ನು ನೀಡಿದ, ಹೊಸಗನ್ನಡ ಕಾವ್ಯಕ್ಕೆ ಜಾನಪದ ಸತ್ವವನ್ನು ತುಂಬಿ ಆತ್ಮಚಿಂತನೆಯ ಅನುಭಾವ ಮಾರ್ಗದಲ್ಲಿ ಅದನ್ನು ನಡೆಸಿಕೊಂಡು ಹೋಗಿ ಕೃತಕೃತ್ಯರಾದ ಮಧುರಚೆನ್ನರು ಎಂದಿಗೂ ಮಾಸದಂತಹುದು” ಅನ್ನುವ ಚನ್ನವೀರ ಕಣವಿಯವರ ವಿಮರ್ಶೆಯಂತೆ ಇಂದು ಮಧುರ ಚೆನ್ನರ ಕವನ ವಾಚನ ಹಾಗೂ ವಿಶ್ಲೇಷಣೆಯನ್ನ, ಕಾವ್ಯ ಮಾಧುರ್ಯವನ್ನು ಪ್ರೊ. ಜಿ. ಅಶ್ವತ್ಥನಾರಾಯಣ, ಸುಮಾ ಅನಿಲ್, ದಾದಾಪೀರ ಜೈಮುನ್, ರೇಣುಕಾ ಕೋಡಗಂಟಿ, ಚೈತ್ರಾ ಶಿವಯೋಗಿಮಠ, ಪ್ರವೀಣ್ ಕುಮಾರ್ ಜಿ. ಹಾಗೂ ಈ ಹೊತ್ತಿಗೆಯ ಸಂಸ್ಥಾಪಕಿ, ರೂವಾರಿ ಜಯಲಕ್ಷ್ಮಿ ಪಾಟೀಲ್ ರವರು ನೀಡಿದರು. ಪ್ರೊ. ಜಿ. ಅಶ್ವತ್ಥನಾರಾಯಣ ಅವರು ಮಾತನಾಡಿ, ಮಧುರ ಚೆನ್ನರ ಅನ್ವರ್ಥನಾಮದಂತೆ ‘ಅವರ ಬದುಕು ಮಧುರ, ಅವರ ಸಾಹಿತ್ಯ/ಕಾವ್ಯ…
ಧರ್ಮಸ್ಥಳ : ಸ್ಪೂರ್ತಿದಾಯಕ ಮತ್ತು ಕಲಿಕೆಗೆ ಅವಕಾಶ ಮಾಡಿಕೊಡುವ ಕರುಂಬಿತ್ತಿಲ್ ಶಿಬಿರ ಮೇ ತಿಂಗಳಲ್ಲಿ 24ರಿಂದ 28ರವರೆಗೆ ಧರ್ಮಸ್ಥಳ ನಿಡ್ಲೆಯಲ್ಲಿರುವ ಕರುಂಬಿತ್ತಿಲ್ ಮನೆಯಲ್ಲಿ ನಡೆಯಲಿದೆ. ನಾದಯೋಗಿ ಪ್ರೊ. ವಿ.ವಿ. ಸುಬ್ರಮಣ್ಯಂ, ಡಾ. ರಾಜ್ ಕುಮಾರ್ ಭಾರತಿ, ಕಲೈಮಾಮಣಿ ಉನ್ನಿಕೃಷ್ಣನ್, ಸಂಗೀತ ಚೂಡಾಮಣಿ ಅಭಿಷೇಕ್ ರಘುರಾಮ್ ಮತ್ತು ಇತರ ಅನೇಕ ಪ್ರಮುಖ ಸಂಗೀತಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿರುವರು. ಬೋಧನೆಗಳು, ಸಂಗೀತ ಕಛೇರಿಗಳು, ಸಂಗೀತ ಚಟುವಟಿಕೆಗಳು, ಲಯ, ಯಕ್ಷಗಾನ ಇತ್ಯಾದಿಗಳೊಂದಿಗೆ ಶಿಬಿರಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿರುವ ಅನೇಕ ಕಲಿಕೆಗಳೇ ಈ ಶಿಬಿರದ ವೈಶಿಷ್ಟ್ಯಗಳು. ಸಂಗೀತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಮತ್ತು ಸಂಗೀತಾಸಕ್ತ ವಿದ್ಯಾರ್ಥಿಗಳು ಪೂರ್ಣವಾಗಿ 5 ದಿನಗಳೂ ಶಿಬಿರದಲ್ಲಿ ಭಾಗವಹಿಸಿ ಅನುಭವ ಪಡೆದುಕೊಳ್ಳುವುದಕ್ಕಾಗಿ ನಿಮ್ಮನ್ನು ಈ ಶಿಬಿರ ಸ್ವಾಗತಿಸುತ್ತಿದೆ. ಉಚಿತ ಪ್ರವೇಶ ಗೂಗಲ್ ಫಾರ್ಮ್ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು. ಶ್ರೀ ವಿಠಲ್ ರಾಮಮೂರ್ತಿ ಮತ್ತು ಕರುಂಬಿತ್ತಿಲ್ ಕುಟುಂಬ ತಮ್ಮನ್ನು ಈ ಶಿಬಿರಕ್ಕೆ ಆದರದಿಂದ ಸ್ವಾಗತಿಸುತ್ತಿದೆ. ಶ್ರೀ ವಿಠಲ್ ರಾಮಮೂರ್ತಿ 9444021850, ಕೃತಿ ಭಟ್ 9632694549, ವಿಜಯಶ್ರೀ ವಿಠಲ್ : 9940089448 ವಿಶ್ವಾಸ್…
ಮೂಡಬಿದ್ರೆ : ದೇಶದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಂಗಭೂಮಿಯಲ್ಲಿ (ಅಭಿನಯ, ಸಂಗೀತ, ತಾಂತ್ರಿಕತೆ)ಯಲ್ಲಿ ಆಸಕ್ತಿಯಿದ್ದು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉಚಿತ ಪಿ.ಯು.ಸಿ. ಹಾಗೂ ಡಿಗ್ರಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಡಾ. ಜೀವನ್ ರಾಂ ಸುಳ್ಯ – 9448215946 ಇವರನ್ನು ಮೇ 25ರ ಒಳಗೆ ಸಂಪರ್ಕಿಸಬಹುದು.
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಹಾಗೂ ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯ, ಮಂಗಳೂರು ಇಲ್ಲಿ 2023-24ನೇ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಾರಂಭವಾಗಿದೆ. 2 ವರ್ಷ ಫೌಂಡೇಶನ್ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪಾಸಾಗಿರಬೇಕು ಹಾಗೂ 4 ವರ್ಷ ದೃಶ್ಯಕಲಾ ಪದವಿಗೆ (ಬ್ಯಾಚುರಲ್ ಆಫ್ ವಿಜ್ಯೂವಲ್ ಆರ್ಟ್ಸ್) 8 ಸೆಮಿಸ್ಟರ್ ಗೆ ಪಿ.ಯು.ಸಿ ಅಥವಾ ತತ್ಸಮಾನ ಪಾಸಾಗಿರಬೇಕು. ಇದರ ಜೊತೆಗೆ ಬಿವಿಎ ಪದವಿ ಶಿಕ್ಷಣ – ಅನ್ವಯಿಕ ಕಲೆ ಹಾಗೂ ಬಿವಿಎ ಪದವಿ ಶಿಕ್ಷಣ – ಚಿತ್ರಕಲೆ ಪದವಿಗಳು ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ನಾಗರಾಜು ಪ್ರಾಂಶುಪಾಲರು : 0824 – 2492106 ಮೊಬೈಲ್ : 9945069973 8147339778, 9901751271
‘ಕಲೆ’ ಎಂಬ ಬಹು ಸುಂದರ ಪುಷ್ಪದ ವಿವಿಧ ಎಸಳುಗಳಂತೆ ಇಂದು ಅನೇಕ ಪ್ರತಿಭಾವಂತ ಕಲಾವಿದರು ನಮ್ಮ ಮುಂದಿದ್ದಾರೆ. ಸದಾ ಸುಗಂಧವನ್ನು ಬೀರುತ್ತಾ, ಕಲಾರಸಿಕರಿಗೆ ನೀಡುವ ಮನೋರಂಜನೆ ಹಾಗೂ ಕಲಾಸೌಂದರ್ಯದ ಪ್ರಸ್ತುತಿಯಲ್ಲಿ ನಮ್ಮ ಕಲಾವಿದರು ಎಂದೆಂದಿಗೂ ಹಿಂದೆ ಬಿದ್ದಿಲ್ಲ. ಸಂಗೀತಗಾರರೇ ಇರಲಿ, ನೃತ್ಯ-ನಾಟಕ ಕಲಾವಿದರೇ ಇರಲಿ ಅಥವಾ ವಾದನ ಕಲಾವಿದರೇ ಆಗಿರಲಿ ಶತ-ಶತಮಾನಗಳಿಂದ ತಮ್ಮ ಪೂರ್ವಿಕರಿಂದ ತಮಗೆ ದಕ್ಕಿರುವ ಈ ದೈವಿಕ ಕಲೆಯನ್ನು, ಯಾವುದೇ ಹೆಚ್ಚಿನ ಫಲಾಪೇಕ್ಷೆಗಳಿಲ್ಲದೇ ಮುಂದಿನ ಜನಾಂಗಕ್ಕೆ ಧಾರೆ ಎರೆದುಕೊಂಡು ಬಂದಿದ್ದಾರೆ. ಶಾಸ್ತ್ರೀಯ ಕಲಾವಿದರೇ ಇರಲಿ ಅಥವಾ ಜಾನಪದ ಕಲಾವಿದರುಗಳೇ ಆಗಿರಲಿ, ಭರತ ಖಂಡದ ಸುಸಂಸ್ಕೃತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ, ಬೀಳುವವರೂ ಅಲ್ಲ. ಜನರಿಗೆ ಕಲೆಯ ಬಗೆಗೆ ಭಕ್ತಿ, ಶಿಸ್ತು, ಆನಂದ, ಗೌರವ ಇತ್ಯಾದಿ ಮೂಡಿಸುವಲ್ಲಿ ಬಹುಮುಖ್ಯ ಪಾತ್ರವಿರುವುದು ಕಲಾವಿದರದ್ದೇ. ನಾನು ಮಾಡುತ್ತಿದ್ದ ಅರ್ಥಶಾಸ್ತ್ರ ಉಪನ್ಯಾಸಕ ವೃತ್ತಿಯನ್ನು ಬಿಟ್ಟು, ಪೂರ್ಣ ಪ್ರಮಾಣದ ಕಲಾವಿದನಾಗುತ್ತೇನೆಂದು ಮನೆಯಲ್ಲಿ ತಿಳಿಸಿದಾಗ ಅಜ್ಜನಿಂದ ಬಂದ ಮೊದಲ ಪ್ರಶ್ನೆಗಳು- “ವೃತ್ತಿಯನ್ನು ಬಿಟ್ಟು ಕೂತರೆ…