Author: roovari

ಇತ್ತೀಚಿಗೆ ನಮ್ಮನ್ನು ಅಗಲಿದ ಸಾಹಿತಿ, ಕಲಾವಿದ ಶಿಮುಂಜೆ ಪರಾರಿ ಅವರ ಸಾಂಸ್ಕೃತಿಕ ಪರಿಚಾರಿಕೆ ಗುರುತರವಾದುದು.ಶ್ರಮ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ಅವರು ತಮ್ಮನ್ನು ತಾವು ರೂಪಿಸಿಕೊಂಡು ಮುಂಬೈನ ತುಳು ಕನ್ನಡಿಗರಿಗೆ ಮಾದರಿಯಾಗಿದ್ದ ಕ್ರಿಯಾಶೀಲ ಚೇತನ.ಸದ್ದುಗದ್ದಲವಿಲ್ಲದೇ ಅವರು ಮಾಡಿದ ಸಾಹಿತ್ಯ ಕೃಷಿಯೂ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ.ಶಿಮುಂಜೆ ಅವರ ಜೀವನ ಯಾನದ ಕಿರು ಲೇಖನ ಇಲ್ಲಿದೆ. ಮುಂಬಯಿ ಕನ್ನಡಿಗರಿಗೆ ಶಿಮುಂಜೆ ಪರಾರಿ (1940-2024)ಅವರು ಚಿರಪರಿಚಿತರಾಗಿದ್ದರು.ಅವರು ನಾಟಕಕಾರರಾಗಿ, ಅಧ್ಯಾಪಕರಾಗಿ, ಅನುವಾದಕರಾಗಿ, ನಟರಾಗಿ, ಆಧುನಿಕ ವಚನಕಾರರಾಗಿ, ಸ್ನೇಹಸೇತುವಾಗಿ ಮುಂಬಯಿಯ ಸಾಂಸ್ಕೃತಿಕ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರು. ಅವರದು ಬಹುಮುಖ ಪ್ರತಿಭೆ ಹಾಗೂ ಬಹು ಭಾಷಿಕ ಸಂವೇದನೆ.ಕನ್ನಡ, ತುಳು, ಹಿಂದಿ,ಮರಾಠಿ, ಗುಜರಾತಿ ಮೊದಲಾದ ಭಾಷೆಗಳಲ್ಲಿ ನಿರರ್ಗಳ ವ್ಯವಹಾರ, ಸಾಹಿತ್ಯ ರಚನೆ, ಆದಾನ ಪ್ರದಾನ. ಹಾಗೆಯೇ ‘ಅವಳ ತೊಡಿಗೆ ಇವಳಿಗಿಟ್ಟು’ ನೋಡುವ ಪ್ರಯೋಗಶೀಲ ಮನಸ್ಸು.ಶಿಮುಂಜೆ ಅವರು ತುಳು ಭಾಷೆಯಲ್ಲಿ ಸಾವಿರಾರು ಚುಟುಕುಗಳನ್ನು ಬರೆದ ಸರದಾರ. ರಂಗದ ಮೇಲೆ ಬಣ್ಣ ಹಚ್ಚಿ ಕುಣಿದು ಬೆಳ್ಳಿ ತೆರೆಯಲ್ಲೂ ಮಿಂಚಿ ಸೈ ಸೈ ಎನಿಸಿಕೊಂಡ ಅಪೂರ್ವ…

Read More

ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ಭಾಗವತರು ಸಾಂಸ್ಕೃತಿಕ ಸಂಘಟನೆ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ತೃತೀಯ ಕವಿಗೋಷ್ಠಿ ಜನಸಾಮಾನ್ಯರ ದನಿಯಾಗಲಿ ಕಾವ್ಯ ರಾಜಧಾನಿ ಬೆಂಗಳೂರಿನಿಂದ ತೊಗರಿನಾಡು ಕಲಬುರಗಿ ಕಡೆಗೆ ‘ಕಾವ್ಯದೀವಟಿಗೆಯ ಪಯಣ’ವು ದಿನಾಂಕ 28 ಸೆಪ್ಟೆಂಬರ್ 2024ರಂದು ಇಳಿ ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ ಕರ್ನಾಟಕ ನಾಟಕ ಅಕಾಡೆಮಿ ಚಾವಡಿಯಲ್ಲಿ ನಡೆಯಲಿದೆ. ಬೆಂಗಳೂರು ಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಲಕ್ಷ್ಮೀಪತಿ ಕೋಲಾರ ವಹಿಸಲಿದ್ದು, ಕವಿ ಡಾ. ಬಂಜಗೆರೆ ಜಯಪ್ರಕಾಶ್ ಉದ್ಘಾಟನೆಯನ್ನು ಮಾಡಲಿದ್ದಾರೆ. ನಾಡಿನ ಖ್ಯಾತ ಕವಿಗಳು ಕವಿತಾ ವಾಚನ ಮತ್ತು ಗೀತ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ಬೆಂಗಳೂರು ಹಾಗೂ ಕಲಬುರಗಿಯ ನಾವಿಕರಾಗಿ ಕೆ. ರೇವಣ್ಣ ಹಾಗೂ ಮಹಿಪಾಲ ರೆಡ್ಡಿ ಮುನ್ನೂರು ಅವರು ಯಾನವನ್ನು ಮುನ್ನೆಡೆಸಲಿದ್ದಾರೆ.

Read More

ಮಂಗಳೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಮತ್ತು ಗಮಕ ಕಲಾ ಪರಿಷತ್ತು ಮಂಗಳೂರು ತಾಲೂಕು ಆಯೋಜಿಸಿದ ‘ಮನೆಮನೆ ಗಮಕ’ ಇದರ 24ನೇ ಪಲ್ಲವ ಕಾರ್ಯಕ್ರಮವು ದಿನಾಂಕ 25 ಸೆಪ್ಟೆಂಬರ್ 2024ರ ಬುಧವಾರದಂದು ಸಂಜೆ 5.00 ಗಂಟೆಗೆ ಸರಿಯಾಗಿ ಉಳ್ಳಾಲ ತಾಲ್ಲೂಕು ಬೀರಿ ಸಮೀಪದ ಕವಿ ಶ್ರೀಶಂಕರ ಶರ್ಮಾ ಕುಳಮರ್ವ ಇವರ ಮನೆ “ಹವಿಷಾ” ದಲ್ಲಿ ನಡೆಯಲಿದೆ. ಕವಿ ಶಂಕರ ಶರ್ಮ ಕುಳಮರ್ವ ರಚಿಸಿದ “ಉತ್ತರ ಕಾಂಡ ಕಾವ್ಯಧಾರ” ಕಾವ್ಯದ ‘ರಾಮ ನಿರ್ಯಾಣ’ ಭಾಗವನ್ನು ಕವಿಯ ಮುಂದೆಯೇ ವಾಚನ, ವ್ಯಾಖ್ಯಾನ ನಡೆಯಲಿರುವುದು. ಅಂದು ಶ್ರೀ ಸುರೇಶ್ ರಾವ್ ಅತ್ತೂರು ವಾಚಿಸಲಿದ್ದು, ಶ್ರೀ ಸರ್ಪಂಗಳ ಈಶ್ವರ ಭಟ್ ವ್ಯಾಖ್ಯಾನಿಸಲಿದ್ದಾರೆ. : ಈ ಕಾರ್ಯಕ್ರಮಕ್ಕೆ ಕವಿ ಶ್ರೀ ಶಂಕರ ಶರ್ಮ ಮತ್ತು ಮಗಳು ಶೀಲಾಶಂಕರಿ, ಬಂಧು ಬಾಂಧವರು, ಗಮಕ ಕಲಾಪರಿಷತ್ತು ಮಂಗಳೂರು ಇದರ ಅಧ್ಯಕ್ಷರು ಮತ್ತು ಸದಸ್ಯರು ಸರ್ವರಿಗೂ ಸ್ವಾಗತ ಬಯಸಿದ್ದಾರೆ.

Read More

ಬೆಂಗಳೂರು : ಶ್ರೀ ಪಂಚಮುಖಿ ವಿನಾಯಕ ಗೆಳೆಯರ ಬಳಗ ಇದರ ವತಿಯಿಂದ 3ನೇ ವರ್ಷದ ಅತ್ತಿಬೆಲೆ ಗಣೇಶ ಉತ್ಸವ ಪ್ರಯುಕ್ತ ಶಕ್ತಿ ಶ್ರೀ ಗಣಪತಿ ಯಕ್ಷಗಾನ ಬೆಂಗಳೂರು ಇವರಿಂದ ‘ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನವು ದಿನಾಂಕ 26 ಸೆಪ್ಟೆಂಬರ್ 2024ರಂದು ಬೆಂಗಳೂರಿನ ಆನೇಕಲ್ ತಾಲೂಕು ಅತ್ತಿಬೆಲೆ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ಶ್ರೀ ಸುಬ್ರಾಯ ಹೆಬ್ಬಾರ್ ಹಾಗೂ ಶ್ರೀ ಕಾರ್ತಿಕ ಧಾರೇಶ್ವರ ಮತ್ತು ಮುಮ್ಮೇಳದಲ್ಲಿ ಶ್ರೀಕೃಷ್ಣ ಕುಮಾರ, ಶ್ರೇಯಾ ಶರವೂರ, ಶ್ರೀ ಸುಧಾಕರ ಜೈನ ಹೊಸಬೆಟ್ಟು ಗುತ್ತು, ಶ್ರೀ ಗಣೇಶ ಹಳದಿಪುರ, ಕೌಸ್ತುಭ ಉಡುಪ, ಸುಪ್ರಿತಾ ಹಳದಿಪುರ, ವಿಭಾ ದೇವಾಡಿಗ ಇವರುಗಳು ಸಹಕರಿಸಲಿರುವರು.

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ವತಿಯಿಂದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವಂತೆ ಸುಮಾರು ರೂ.13 ಸಾವಿರ ಮೊತ್ತದ ಪುಸ್ತಕಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಇವರಿಗೆ ದಿನಾಂಕ 21 ಸೆಪ್ಟೆಂಬರ್ 2024ರಂದು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕ.ಸಾ.ಪ. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ. ಇವರು ಪುಸ್ತಕಗಳನ್ನು ಹತ್ತಾಂತರಿಸಿದ್ದು, ಖ್ಯಾತ ಸಾಹಿತಿ ಕು.ಗೋ ರವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸಾಹಿತಿ ಸುಧಾ ಅಡುಕಳ, ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಮನೆಯೇ ಗ್ರಂಥಾಲಯ ಅಭಿಯಾನ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು, ಸಾಮಾಜಿಕ ಜಾಲತಾಣ ಪ್ರಮುಖ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ವಸಂತ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಮಲಯಾಳಂ ಭಾಷೆ ಮತ್ತು ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಸಾಹಿತಿಗಳಲ್ಲಿ ತಗಳಿ ಶಿವಶಂಕರ ಪಿಳ್ಳೈಯವರೂ ಒಬ್ಬರು. ಅವರು ತಮ್ಮ ಕೃತಿಗಳಲ್ಲಿ ಸಾಮಾಜಿಕ ಅಸಮಾನತೆ, ಅನಾಚಾರಗಳನ್ನು ಚಿತ್ರಿಸಿದರು. ಕೆಳಸ್ತರದವರು, ಬೆಸ್ತರು ಮತ್ತು ರೈತಾಪಿ ವರ್ಗದವರ ಶ್ರಮಜೀವನವನ್ನು ತೋರಿಸಿದರು. ಮಲಯಾಳಂ ಸಾಹಿತ್ಯದಲ್ಲಿ ದೀನ ದಲಿತರ ಬದುಕನ್ನು ಮೊದಲ ಬಾರಿಗೆ ದಾಖಲಿಸಿದ ತಗಳಿ ಶಿವಶಂಕರ ಪಿಳ್ಳೈಯವರು ನಗರ ಸಭೆಯ ಕೆಲಸಗಳ ಮೂಲಕ ನಗರದ ದುರ್ವಾಸನೆಯನ್ನು ನಿವಾರಿಸುವ ಜಾಡಮಾಲಿಗಳ ಬಗ್ಗೆ ಬರೆದ ‘ತೋಟಿಯುಡೆ ಮಗನ್’ (1947) ಎಂಬ ಕಾದಂಬರಿಯಲ್ಲಿ ಅಧಿಕಾರಶಾಹಿಯು ಜಾಡಮಾಲಿಗಳನ್ನು ನಿರಂತರವಾಗಿ ಶೋಷಿಸುವ ಚಿತ್ರಣವಿದೆ. ಮೂರು ತಲೆಮಾರುಗಳಿಗೆ ಸೇರಿದ ಜಾಡಮಾಲಿಗಳ ಬದುಕಿನ ಏರುಪೇರುಗಳನ್ನು ಚಿತ್ರಿಸುತ್ತಾ ದುಡಿಯುವ ಜನರ ನಿಕೃಷ್ಟ ಬದುಕನ್ನು ಅನಾವರಣಗೊಳಿಸಿದ್ದಾರೆ. ದುಡಿಯುವ ಜನರಿಗೆ ವ್ಯವಸ್ಥೆಯು ಬದುಕುವ ಅವಕಾಶವನ್ನು ಕೊಡದೆ, ನಿಕೃಷ್ಟವಾಗಿ ಕಾಣುವ ರೀತಿಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ತರಾದ ಡಾ. ಮೋಹನ ಕುಂಟಾರರು ಈ ಕೃತಿಯನ್ನು ‘ತೋಟಿಯ ಮಗ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೊದಲ ತಲೆಮಾರಿಗೆ ಸೇರಿದ…

Read More

ಬೆಳ್ತಂಗಡಿ: ಶ್ರೀ ಮದವೂರ ವಿಘ್ನೇಶ ಕಲಾಸಂಘ, ಗೇರುಕಟ್ಟೆ ಬೆಳ್ತಂಗಡಿ ಇವರ ಸದಸ್ಯರಿಂದ ಉಜಿರೆಯ ಈ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಸಂಕಷ್ಟಿಯ ಪ್ರಯುಕ್ತ “ಶರಸೇತು ಬಂಧನ” ಎಂಬ ತಾಳಮದ್ದಳೆಯು ದಿನಾಂಕ 21 ಸೆಪ್ಟೆಂಬರ್ 2024 ರಂದು ನಡೆಯಿತು . ಹಿಮ್ಮೇಳದಲ್ಲಿ ಕುಮಾರಿ ನಂದನ ಮಾಲೆಂಕಿ , ಕಾರ್ತಿಕ್ ಬಳ್ಳಮಂಜ, ರತನ್ ಗುಡಿಗಾರ್ ಹಾಗೂ ಆದಿತ್ಯ ಹೊಳ್ಳ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ಬಾಸಮೆ ನಾರಾಯಣ ಭಟ್, ಶ್ರೀರಾಮಕೃಷ್ಣ ಭಟ್ ಬಳಂಜ ಹಾಗೂ ಶ್ರೀಮತಿ ಕೆ. ಆರ್. ಸುವರ್ಣ ಕುಮಾರಿ ಪಾಲ್ಗೊಂಡರು. ಆಡಳಿತ ಮೊಕ್ತೇಸರ ಶ್ರೀ ಶರತ್ ಕೃಷ್ಣ ಪಡ್ವಟ್ನಾಯ , ಕೊಯ್ಯುರು ಅಶೋಕ ಭಾಂಗಿನ್ನಾಯ, ಡಾ. ಪ್ರಸನ್ನಕುಮಾರ್ ಐತಾಳ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು . ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯರು ಕಲಾವಿದರಿಗೆ ಶಾಲು ಹೊಂದಿಸಿ ಗೌರವಿಸಿದರು .

Read More

ಮಂಗಳೂರು : ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವದ ಅಂಗವಾಗಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನವು ಅಂಚೆ ಕಾರ್ಡಿನಲ್ಲಿ ಡಾ. ಕೋಟ ಶಿವರಾಮ ಕಾರಂತರ ಚಿತ್ರ ರಚನಾ ಸ್ಪರ್ಧೆಯನ್ನು ಆಯೋಜಿಸಿದೆ. ಇದು ರಾಜ್ಯ ಮಟ್ಟದ ಸ್ಪರ್ಧೆಯಾಗಿದ್ದು, ಎಸ್.ಎಸ್.ಎಲ್.ಸಿ. ವರೆಗಿನ ವಿಭಾಗ ಮತ್ತು ಮುಕ್ತ ವಿಭಾಗ ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪೆನ್ಸಿಲ್‌ನಿಂದ ಕಪ್ಪು ಬಿಳುಪು ಚಿತ್ರವನ್ನು ಪೋಸ್ಟ್ ಕಾರ್ಡ್‌ನಲ್ಲಿ ರಚಿಸಿ, ಸ್ವ-ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಸ್ಪರ್ಧಾ ವಿಭಾಗವನ್ನು ನಮೂದಿಸಿ ದಿನಾಂಕ 06 ಅಕ್ಟೋಬ‌ರ್ 2024ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸುವುದು.. ಜಾನ್‌ಚಂದ್ರನ್, ಸಂಚಾಲಕರು ಅಂಚೆ ಕಾರ್ಡಿನಲ್ಲಿ ಚಿತ್ರರಚನಾ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ. ಮಹಾತ್ಮ ಗಾಂಧಿ ರಸ್ತೆ, ಮಂಗಳೂರು-3 ವಿಜೇತರಿಗೆ ಬಹುಮಾನವನ್ನು 10 ಅಕ್ಟೋಬರ್ 2024ರಂದು ಮಂಗಳೂರಿನಲ್ಲಿ ಜರಗಲಿರುವ ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವದ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಸಂಯೋಜಕರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Read More

ಬೆಂಗಳೂರು : ಕಾವ್ಯ, ಸಣ್ಣಕಥೆ, ವಿಮರ್ಶೆ ಇತ್ಯಾದಿ ಪ್ರಕಾರಗಳ ಬರಹಗಳನ್ನು ಆಯಾ ವರ್ಷ ಸಂಪಾದಿಸಿ ಪ್ರಕಟಿಸುವುದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆವರ್ತಕ ಯೋಜನೆ. 2023ನೇ ಸಾಲಿನ ಸಣ್ಣಕಥೆಗಳನ್ನು ಸಂಪಾದಿಸುವ ಅವಕಾಶ ನನ್ನದು. 2023ನೇ ವರ್ಷದ ಜನವರಿಯಿಂದ ಡಿಸೆಂಬರ್‌ ವರೆಗೆ ನಾಡಿನ ವಿವಿಧ ಪತ್ರಿಕೆ (ದೈನಿಕ, ಸಾಪ್ತಾಹಿಕ, ಪಾಕ್ಷಿಕ, ಮಾಸಿಕ, ದ್ವೈ/ತ್ರೈಮಾಸಿಕ, ವಾರ್ಷಿಕ ಇತ್ಯಾದಿ)ಗಳಲ್ಲಿ ಪ್ರಕಟವಾದ ಸಣ್ಣಕಥೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ನಾಡಿನ ಬರಹಗಾರರಲ್ಲಿ ಕೋರಿಕೆ. ವಿಳಾಸ : ಚಾಂದಿನಿ, ನಂಜುಂಡೇಶ್ವರ ನಿಲಯ, ಹೌಸ್ ನಂಬ್ರ 3, ಎ ಬ್ಲಾಕ್, 5ನೇ ಕ್ರಾಸ್, ಚಿಕ್ಕಣ್ಣ ಲೇಔಟ್, ಮಹಾದೇವಪುರ ಪೋಸ್ಟ್, ಬೆಂಗಳೂರು – 560948 ಸಂಪರ್ಕ ಸಂಖ್ಯೆ 9945472263, ಇ-ಮೇಲ್ : [email protected]

Read More

ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು, ಕವಿತಾ ಕುಟೀರ (ರಿ.) ಪೆರಡಾಲ ಮತ್ತು ನವಜೀವನ ಹೈಸ್ಕೂಲ್ ಪೆರಡಾಲ ಕಾಸರಗೋಡು ಇದರ ಹಿರಿಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕವಿ ಕಯ್ಯಾರ ಸ್ಮೃತಿ ‘ಐಕ್ಯವೇಮಂತ್ರ’ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 28 ಸೆಪ್ಟೆಂಬರ್ 2024ರಂದು ಅಪರಾಹ್ನ 2-45 ಗಂಟೆಗೆ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲಿನಲ್ಲಿ ಹಮ್ಮಿಕೊಳ್ಳಲಾಗಿದೆ. ಮಾನ್ಯ ಸಭಾಪತಿಗಳಾದ ಯು.ಟಿ. ಖಾದರ್ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ ಇವರು ಕವನ ಸಂಕಲನದ ಬಗ್ಗೆ ಮಾತನಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಲಲಿತಕಲಾ ಅಧ್ಯಯನ ಕೇಂದ್ರದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Read More