Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಪರಪು ಹಳೆ ವಿದ್ಯಾರ್ಥಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ‘ಪಗೆಲಿಡೀ ಪದ್ರಾಡ್ ಮುಡಿ’ಯ ಸಮಾರೋಪ ಸಮಾರಂಭವು ದಿನಾಂಕ 20 ಜುಲೈ 2025ರ ಆದಿತ್ಯವಾರದಂದು ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿರುವ ಶ್ರೀ ಅಚ್ಚುತ ಗಟ್ಟಿ “ತುಳುವರು ತುಳು ಸಂಸ್ಕೃತಿಯನ್ನು ಮರೆಯುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ. ತುಳುಭಾಷೆ, ತುಳು ಸಂಸ್ಕೃತಿ, ತುಳು ಸಂಸ್ಕಾರಗಳನ್ನು ಉಳಿಸುವಲ್ಲಿ ನಮ್ಮೆಲ್ಲರ ಜಬಾಬ್ದಾರಿಯಿದೆ. ಮಕ್ಕಳಿಗೆ ದೈವಾರಾಧನೆ, ಕೃಷಿಗೆ ಸಂಬoಧಿಸಿದ ಪರಿಕರಗಳನ್ನು ಪರಿಚಯಿಸುವ ಅಗತ್ಯವಿದೆ. ಮೌಲ್ಯಾಧಾರಿತ ಶಿಕ್ಷಣದ ಮೂಲ️ಕ ಮಕ್ಕಳು ತುಳು ಸಂಸ್ಕೃತಿಯನ್ನು ಅರಿಯಬೇಕಾಗಿದೆ” ಎಂದು ನುಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಸಂಯೋಜಕರಾದ ಡಾ. ಮಾಧವ ಎಂ.ಕೆ. “ತುಳು ಸಂಸ್ಕೃತಿ, ಸಂಸ್ಕಾರ ಮನೆಯಿಂದಲೇ ಆರಂಭವಾಗಬೇಕು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅವರಿಗೆ ಎಳವೆಯಲ್ಲಿಯೇ ಸಂಸ್ಕಾರಗಳನ್ನು…
ಕಾಸರಗೋಡು : ತುಳುವ ಮಹಾಸಭೆ ಕಾಸರಗೋಡು ತಾಲೂಕು ಇದರ ವತಿಯಿಂದ ಮಂದಾರ ರಾಮಾಯಣ ಸುಗಿಪು ದುನಿಪು ಕಾರ್ಯಕ್ರಮವನ್ನು ದಿನಾಂಕ 01 ಆಗಸ್ಟ್ 2025ರಂದು ಬೆಳಗ್ಗೆ 9-30 ಗಂಟೆಗೆ ಕಾಸರಗೋಡು ಕಾರ್ಮಾರು ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರಿಂದ ದುನಿಪು ಹಾಗೂ ಪ್ರಶಾಂತ ರೈ ಪುತ್ತೂರು ಮತ್ತು ರಚನಾ ಚಿತ್ಗಲ್ ಇವರಿಂದ ಸುಗಿಪು ಹಾಗೂ ಲವಕುಮಾರ್ ಐಲ ಮದ್ದಲೆಯಲ್ಲಿ ಸಹಕರಿಸಲಿದ್ದಾರೆ. ತುಳುವರ್ಲ್ಡ್ ಫೌಂಡೇಶನ್ ಕಟೀಲ್ ಇವರ ಸಂಯೋಜನೆ ಹಾಗೂ ಮಂಗಳೂರು ಮಂದಾರ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಡಾ. ರಾಜೇಶ್ ಭಟ್ ಮಂದಾರ ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
ಶೈಲಜಾ ಉಡಚಣ ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧರಾದವರು ಮಹಾಂತಮ್ಮ ಹಸಮ್ ಕಲ್. ಬರಹಗಾರ್ತಿಯಾಗಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವ ಇವರು 1935 ಜುಲೈ 26ರಂದು ರಾಯಚೂರಿನಲ್ಲಿ ಜನಿಸಿದರು. ನಿಜಾಮರ ಆಡಳಿತದ ಕಾಲವದು. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅವಕಾಶ ಇಲ್ಲದ ಕಾಲಘಟ್ಟದಲ್ಲಿ, ನಿಜಾಮರ ಆಕ್ರಮಣಶೀಲ ಭಯಾನಕ ಪರಿಸ್ಥಿತಿಗಳ ಮಧ್ಯೆಯೂ ಏಳನೇ ತರಗತಿಯವರಿಗೆ ಕನ್ನಡ ಮಾಧ್ಯಮದಲ್ಲಿ ಓದಿದ ನಂತರ ಅಧ್ಯಯನಶೀಲ ಮನೋಧರ್ಮದ ಶೈಲಜಾ ಬಿ.ಎ., ಬಿ.ಎಡ್. ಮತ್ತು ಎಂ.ಎ. ಪದವಿಗಳನ್ನು ಖಾಸಗಿಯಾಗಿ ಓದಿ ಪಡೆದುಕೊಂಡರು. 1958ರಲ್ಲಿ ಗುಲ್ಬರ್ಗ ಕಾಲೇಜಿಗೆ ಉಪನ್ಯಾಸಕಿಯಾಗಿ ಸೇರುವ ಮೂಲಕ ವ್ಯಕ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಗುಲ್ಬರ್ಗ ಸರ್ಕಾರಿ ಕಾಲೇಜು, ಮೈಸೂರು ಮತ್ತು ಬೆಂಗಳೂರಿನ ಮಹಾರಾಣಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ 1991ರಲ್ಲಿ ನಿವೃತ್ತಿ ಹೊಂದಿದರು. ಶೈಲಜಾ ಉಡಚಣ ಅವರು 9ನೇ ತರಗತಿಯ ಎಳವೆಯಲ್ಲಿಯೇ ಸ್ಥಳೀಯ ಪತ್ರಿಕೆಗಳಿಗೆ ಹಲವಾರು ಪದ್ಯಗಳನ್ನು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದರು. 1972ರಲ್ಲಿ ಇವರ ಮೊದಲ ಕವನ ಸಂಕಲನ ‘ಒಂದು ಗಳಿಗೆ’ ಪ್ರಕಟವಾಯಿತು. ಆ ನಂತರ ಹಿಂದಿರುಗಿ ನೋಡದ ಇವರು…
ಕಾರ್ಕಳ : ಕಾರ್ಕಳ ತಾಲೂಕು ಕ.ಸಾ.ಪ. ವತಿಯಿಂದ ಹೋಟೆಲ್ ಪ್ರಕಾಶ ಸಂಭ್ರಮ ಸಭಾಂಗಣದಲ್ಲಿ ದಿನಾಂಕ 24 ಜುಲೈ 2025ರಂದು ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕಾಧ್ಯಕ್ಷರಾದ, ಕುಂದಾಪ್ರ ಕನ್ನಡದ ಪ್ರಬಲ ಪ್ರವರ್ತಕರಾದ ಸಾಹಿತಿ ಐರೋಡಿ ಶಂಕರನಾರಾಯಣ ಹೆಬ್ಬಾರ್ “ಕುಂದಾಪ್ರ ಕನ್ನಡವು ಸುಂದರ ಕನ್ನಡ ಭಾಷೆಯ ಅವಿಭಾಜ್ಯ ಅಂಗ. ಇತರ ಪ್ರಾದೇಶಿಕ ಆಡು ಕನ್ನಡದಂತೆ ಕುಂದಾಪ್ರ ಕನ್ನಡ ಇದೆ. ಆದರೆ ಇದರ ಜೋರು, ರಾಪು, ಜಾಪು, ತನಿ, ಒಯ್ಲು, ಹೊಯ್ಲು ಮತ್ತು ರಭಸ ಅತ್ಯಂತ ವಿಶಿಷ್ಟ. ಮಾತಾಡದೇ ಮಾತಾಡದೇ ಅದೆಷ್ಟೋ ಭಾಷೆಗಳು ಕಳೆದು ಹೋಗಿವೆ. ಕುಂದಾಪ್ರ ಕನ್ನಡ ಹಾಗಾಗದಿರಬೇಕಾದರೆ ತಮ್ಮ ಮಕ್ಕಳು ಎಲ್ಲೇ ಇರಲಿ, ಮನೆಯಲ್ಲಾದರೂ ಇದರಲ್ಲೇ ಮಾತಾಡುವಂತೆ ಕುಂದಗನ್ನಡದ ಹೆತ್ತವರು ಆಸಕ್ತಿ ಹೊಂದಬೇಕು. ಆಗ ಮಾತ್ರ ಈ ಸತ್ವಯುತ ಶಕ್ತಿಶಾಲಿ ಭಾಷೆ ಉಳಿದು ಬೆಳೆಯಲು ಸಾಧ್ಯ. ಎಲ್ಲ ಪ್ರಾದೇಶಿಕ ಆಡುಗನ್ನಡಗಳೂ ಶ್ರೇಷ್ಠವೇ. ಕುಂದಾಪ್ರ ಕನ್ನಡವೇ…
ಚಿಂತನಶೀಲ ಹಾಗೂ ಸ್ತ್ರೀವಾದಿ ಬರಹಗಾರರಾದ ಡಾ. ಎಸ್. ವಿ. ಪ್ರಭಾವತಿಯವರು ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಹೊಸಹೊಳಲು ಎಂಬ ಪುಟ್ಟ ಗ್ರಾಮದಲ್ಲಿ 1950 ಜುಲೈ 25ರಂದು ಜನಿಸಿದರು. ಬಹಳ ದೊಡ್ಡ ನಿವೇಶನದಲ್ಲಿದ್ದ ಮನೆಯಲ್ಲಿ 50 ಮಂದಿ ಇದ್ದ ತುಂಬು ಕುಟುಂಬದಲ್ಲಿ ಬೆಳೆದವರು. ತಂದೆ ವೆಂಕಟಸುಬ್ಬಯ್ಯ ಪೋಸ್ಟ್ ಮಾಸ್ಟರ್ ಆಗಿದ್ದರು. ತಾಯಿ ರತ್ನಮ್ಮ. ಮೈಸೂರಿನ ಲಕ್ಷ್ಮಿಪುರಂ ಸರ್ಕಾರಿ ಶಾಲೆಯಲ್ಲಿ ಇವರ ಬಾಲ್ಯದ ವಿದ್ಯಾಭ್ಯಾಸ ನಡೆಯಿತು. ಮಂಡ್ಯದ ಸೈಂಟ್ ಜೋಸೆಫ್ ಕಾನ್ವೆಂಟ್ ಸ್ಕೂಲ್ ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ, ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಬಿ. ಎ. ಮತ್ತು ಮಾನಸಗಂಗೋತ್ರಿಯಲ್ಲಿ ಎಮ್. ಎ. ಪದವಿಯನ್ನು ಪಡೆದರು. ಹೊಸಹೊಳಲಿನಲ್ಲಿರುವಾಗ ಚಿಕ್ಕಪ್ಪನವರು ಮಂಡ್ಯ ಮೈಸೂರಿಗೆ ಹೋದಾಗ ತಿಂಡಿಯ ಜೊತೆಗೆ ತರುತ್ತಿದ್ದ ಅ. ನ. ಕೃ., ತ. ರಾ. ಸು., ನಿರಂಜನ ಮತ್ತು ಉಷಾದೇವಿ ಇವರ ಪುಸ್ತಕಗಳನ್ನು ಓದುತ್ತಲೇ ಅತಿಯಾಗಿ ಓದುವ ಹವ್ಯಾಸ ಬೆಳೆಸಿಕೊಂಡರು. ಅವರು ಬರೆದ ಮೊದಲ ಕಥೆ “ಜಂಬದ ಫಲ”. ಆದರೆ ಅವರು ನಿಜವಾಗಿ ಬರೆಯಲು…
ಬೆಂಗಳೂರು : ‘ಅಂತರಂಗ ಬಹಿರಂಗ’ ಬೆಂಗಳೂರು ಪ್ರಸ್ತುತ ಪಡಿಸುವ 2 ಹಾಸ್ಯ ನಾಟಕಗಳ ಪ್ರದರ್ಶನವೂ ದಿನಾಂಕ 27 ಜುಲೈ 2025ರ ಭಾನುವಾರದಂದು ಬೆಂಗಳೂರಿನ ಬಸವನಗುಡಿಯ ಎನ್. ಆರ್. ಕಾಲೋನಿಯಲ್ಲಿರುವ ಡಾ. ಸಿ. ಆರ್. ಅಶ್ವಥ್ ಕಲಾಭವನದಲ್ಲಿ ನಡೆಯಲಿದೆ. ಸಂಜೆ ಘಂಟೆ 4.00ಕ್ಕೆ ಭೀಷ್ಮ ರಾಮಯ್ಯ ರಚನೆ ಮತ್ತು ನಿರ್ದೇಶನದ ‘ಬಾಯ್ಬಡ್ಕಿ’ ನಾಟಕ ಪ್ರದರ್ಶನಗೊಳ್ಳಲಿದ್ದು, ಸಂಜೆ ಘಂಟೆ 7.00 ಕ್ಕೆ ನಾಗವೇಣಿ ರಂಗನ್ ರಚಿಸಿ, ವನಿತಾ ರಂಗಾಯಣ ನಿರ್ದೇಶಿಸಿರುವ ‘ಬಾಯ್ ತುಂಬಾ ನಕ್ಬಿಡಿ’ ನಾಟಕ ಪ್ರದರ್ಶನಗಳ್ಳಲಿದೆ. ನಾಟಕಕ್ಕೆ ಪ್ರವೇಶ ಶುಲ್ಕವಿದ್ದು, ಬುಕ್ ಮೈ ಶೋ ಅಥವಾ 8660547776 ಸಂಖ್ಯೆಗೆ ಕರೆಮಾಡಿ ತಮ್ಮ ಆಸನಗಳನ್ನು ಕಾಯ್ಡಿರಿಸಬಹುದು.
ಹರಿಹರ : ಪ್ರೇರಣ ಸಾಹಿತ್ಯ ಪರಿಷತ್ತು ಹರಿಹರ, ದಾವಣಗೆರೆ ಜಿಲ್ಲೆ ಇವರು ‘ಕನ್ನಡ ನುಡಿ ರತ್ನ’ ರಾಜ್ಯ ಮಟ್ಟದ ಕವನ ಸಂಕಲನಕ್ಕಾಗಿ ನಾಡಿನ ಕವಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಿದ್ದು, ಆಸಕ್ತ ಕವಿಗಳು 16 ಸಾಲುಗಳಿಗೆ ಮೀರದಂತೆ ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಸ್ವರಚಿತ ಒಂದು ಕವನವನ್ನು ಕಳುಹಿಸಬಹುದು. ಆಯ್ಕೆಯಾದ ಕವಿಗಳ ಕವನಗಳನ್ನು ‘ಪ್ರೇರಣ ಕನ್ನಡ ನುಡಿ ರತ್ನ’ ಸಂಕಲನದಲ್ಲಿ ಕವಿಗಳ ಭಾವಚಿತ್ರ ಹಾಗೂ ಪರಿಚಯದೊಂದಿಗೆ ಪ್ರಕಟಿಸಲಾಗುವುದು. ಆಯ್ಕೆಯಾದ ಕವಿಗಳಿಗೆ ನವೆಂಬರ್ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗುವ ಅದ್ದೂರಿ ರಾಜ್ಯ ಮಟ್ಟದ ಕವಿ ಸಮ್ಮೇಳನಲ್ಲಿ ಕವನ ವಾಚನಕ್ಕೆ ಅವಕಾಶ ನೀಡಲಾಗುವುದು ಹಾಗೂ ಕವಿ ಸಮ್ಮೇಳನಕ್ಕೆ ಆಯ್ಕೆಯಾಗುವ ಕವಿಗಳಿಗೆ ‘ಪ್ರೇರಣ ಕನ್ನಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆಸಕ್ತ ಕವಿಗಳು ದಿನಾಂಕ 25 ಆಗಸ್ಟ್ 2025ರ ಒಳಗಾಗಿ ತಮ್ಮ ಸ್ವರಚಿತ ಕವನವನ್ನು 9731395908 ಈ ಸಂಖ್ಯೆಗೆ ಕಳುಹಿಸಬಹುದು. ಆಯ್ಕೆಯಾದ ಕವಿಗಳಿಗೆ ಮಾತ್ರ ತಿಳಿಸಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಸಂಸ್ಥೆಯ ತೀರ್ಮಾನವೇ ಅಂತಿಮ.
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಂದಳಿಕೆಯ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ‘ತುಳು ಪರ್ಬ ಮತ್ತು ತುಳು ಕವಿ ಗೋಷ್ಠಿ’ ಕಾರ್ಯಕ್ರಮವು ದಿನಾಂಕ 27 ಜುಲೈ 2025ರಂದು ಬೆಳಿಗ್ಗೆ ಘಂಟೆ 11.00ರಿಂದ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರವನ್ನು ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಬಿ. ಜನಾರ್ದನ ಭಟ್ ಉದ್ಘಾಟಿಸಲಿದ್ದಾರೆ. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಪೂಜಾರಿ, ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ ಉಪಸ್ಥಿತರಿರುವರು. ಉದ್ಘಾಟನ ಕಾರ್ಯಕ್ರಮದ ಬಳಿಕ ತುಳು ಕವಿಗೋಷ್ಠಿ ನಡೆಯಲಿದ್ದು, ವಾಸಂತಿ ಅಂಬಲಪಾಡಿ, ಹರಿಪ್ರಸಾದ್ ನಂದಳಿಕೆ, ದೀಪಿಕಾ ಉಡುಪಿ, ಸುಲೋಚನಾ ಪಚ್ಚಿನಡ್ಕ, ಶ್ರೀ ಮುದ್ರಾಡಿ ಇವರು ಕವಿಗೋಷ್ಠಿಯಲ್ಲಿ ಭಾಗವಹಿಸಲಿರುವರು.
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ ಮತ್ತು ಆರ್ಟ್ ಕೆನರಾ ಟ್ರಸ್ಟ್ ಇದರ ಸಹಯೋಗದೊಂದಿಗೆ ಸಾಂಸ್ಕೃತಿಕ ಸಂವಾದವನ್ನು ದಿನಾಂಕ 26 ಜುಲೈ 2025ರಂದು ಸಂಜೆ 5-30 ಗಂಟೆಗೆ ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ‘ರಾಮ ಭೀಮ ಸೋಮ’ ಆಧುನಿಕ ಕರ್ನಾಟಕದ ಸಾಂಸ್ಕೃತಿಕ ಸಂಶೋಧನೆಗಳು : ಶ್ರೀಕರ್ ರಾಘವನ್ ಇವರ ಹೊಸ ಪುಸ್ತಕದ ಕುರಿತು ಲೇಖಕರೊಂದಿಗೆ ಸಂವಾದ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸುಭಾಸ್ ಬಸು 87623 68048 ಮತ್ತು ದೀಕ್ಷಿತ್ ಆರ್. ಪೈ 90376 33977 ಇವರನ್ನು ಸಂಪರ್ಕಿಸಿರಿ.
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿಯು ದಿನಾಂಕ 24 ಜುಲೈ 2025ರ ಗುರುವಾರ 2025-26ನೇ ಸಾಲಿನ ‘ಜೀವಮಾನ ಸಾಧನೆ ಗೌರವ ಪ್ರಶಸ್ತಿ’, ‘ವಾರ್ಷಿಕ ಪ್ರಶಸ್ತಿ’ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ದಕ್ಷಿಣ ಕನ್ನಡ ಮೂಲದ ಹೆಸರಾಂತ ರಂಗವಿನ್ಯಾಸಕ ಶಶಿಧರ ಅಡಪ, ರಂಗಭೂಮಿ ಸಾಧಕ ಗದಗ ಮೂಲದ ಮಾಲತೇಶ ಬಡಿಗೇರ, ರಂಗ ಸಂಘಟಕ ಬೆಂಗಳೂರಿನ ಟಿ. ರಘು, ರಂಗ ವಿಮರ್ಶಕ ಜಿ. ಎನ್. ಮೋಹನ್ ಇವರು ಆಯ್ಕೆ ಆಗಿದ್ದಾರೆ. ಪ್ರಶಸ್ತಿ ತಲಾ 50 ಸಾವಿರ ರೂಪಾಯಿ ನಗದು ಹೊಂದಿದೆ. ಅಕಾಡೆಮಿ ಅಧ್ಯಕ್ಷ ರಾದ ಕೆ. ವಿ.ನಾಗರಾಜ ಮೂರ್ತಿ ಮಾತನಾಡಿ “ಜೀವಮಾನ ಸಾಧನೆ ಗೌರವ ಪ್ರಶಸ್ತಿ, ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿ ಸಹಿತ ಒಟ್ಟು 33 ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ವಾರ್ಷಿಕ ಗೌರವ ಪ್ರಶಸ್ತಿ 25 ಸಾವಿರ ರೂಪಾಯಿ ಮತ್ತು ದತ್ತಿ ಪ್ರಶಸ್ತಿ 15 ಸಾವಿರ ರೂಪಾಯಿ ಮತ್ತು ಸ್ಮರಣ ಫಲಕವನ್ನು ಒಳಗೊಂಡಿದೆ. ಶೀಘ್ರದಲ್ಲೇ…