Author: roovari

ದೇರಳಕಟ್ಟೆ : ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಕಣಚೂರು ಮಹಿಳಾ ಪಿ.ಯು.ಕಾಲೇಜ್ ಇವುಗಳ ಜಂಟಿ ಆಶ್ರಯದಲ್ಲಿ ಕಣಚೂರು ಪಿಯು ಕಾಲೇಜು ಆಡಿಟೋರಿಯಂನಲ್ಲಿ ದಿನಾಂಕ 27-07-2023 ಗುರುವಾರ ನಡೆದ ಅಬ್ಬಕ್ಕಳ ಮುನ್ನೆಲೆಗೆ ಬಾರದ ವಿಚಾರಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಜಯರಾಮ್ ಶೆಟ್ಟಿಯವರು ಮಾತನಾಡುತ್ತಾ “ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ಪೈಕಿ ಅಬ್ಬಕ್ಕಳು ಉಳ್ಳಾಲ ಭಾಗದಲ್ಲಿ ಹೋರಾಟ ಮಾಡಿದ ಮಹಿಳೆ. ಅಬ್ಬಕ್ಕಳ ಸೇನೆಯಲ್ಲಿ ಜಾಸ್ತಿಯಾಗಿ ಮುಸ್ಲಿಮರು, ಕ್ರೈಸ್ತರು ಮತ್ತು ಹಿಂದುಗಳು ಇದ್ದರು. ಅವರು ಪೋರ್ಚುಗೀಸರ ವಿರುದ್ಧ ಹೋರಾಟದ ಜೊತೆ ಅಸಹಕಾರ ಚಳವಳಿ ಮಾಡಿದ್ದಾರೆ. ಮೂರು ಜನ ಅಬ್ಬಕ್ಕಳ ಪೈಕಿ ಹೋರಾಟ ಮಾಡಿ ಪ್ರಾಣ ಬಿಟ್ಟದ್ದು ಎರಡನೆಯವಳು. ಈ ಹೋರಾಟದ ಇತಿಹಾಸದ ಅಧ್ಯಯನ ಮಾಡಬೇಕಾಗಿದೆ” ಎಂದು ಹೇಳಿದರು. ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕ‌ರ್ ಉಳ್ಳಾಲ ‘ಅಬ್ಬಕ್ಕಳ ಮುನ್ನೆಲೆಗೆ ಬಾರದ ವಿಚಾರ’ಗಳ ಕುರಿತು ವಿಶೇಷ ಉಪನ್ಯಾಸ ನೀಡಿ “ವಾಸ್ಕೋಡಿಗಾಮ ದೇಶಕ್ಕೆ ಪ್ರಥಮವಾಗಿ…

Read More

ಮಾಲತಿ ವೆಂಕಟೇಶ್:- 29.05.1972 ನಾರಾಯಣ ನಾವಡ ಹಾಗೂ ಲಕ್ಷ್ಮೀ ಇವರ ಮಗಳಾಗಿ ಮಾಲತಿ ವೆಂಕಟೇಶ್ ಜನನ. ಪದವಿ, ನರ್ಸರಿ ಶಿಕ್ಷಣ ಹಾಗೂ ಕಂಪ್ಯೂಟರ್ ಕೋರ್ಸ್ ಇವರ ವಿದ್ಯಾಭ್ಯಾಸ. ಊರಿನಲ್ಲಿ ಆಗಾಗ ಕಟೀಲು ಮೇಳಗಳ ಯಕ್ಷಗಾನವನ್ನು ನೋಡಿ, ಅದರಲ್ಲೂ ಸಂಪಾಜೆ ಶೀನಪ್ಪ ರೈಗಳ ರಕ್ತಬೀಜ, ಪೆರುವಾಯಿ ನಾರಾಯಣ ಶೆಟ್ಟರ ಕಿರೀಟ ವೇಷವನ್ನು ನೋಡಿ ತುಂಬಾ ಆಕರ್ಷಿತಳಾಗಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. 1989ರಲ್ಲಿ ಗಿರೀಶ್ ನಾವಡ ಮತ್ತು ಶಂಕರನಾರಾಯಣ ಮೈರ್ಪಾಡಿ ಇವರಲ್ಲಿ ಯಕ್ಷಗಾನ ಹೆಜ್ಜೆಗಳನ್ನು ಕಲಿತು ಪ್ರಪ್ರಥಮವಾಗಿ “ವೀರ ಬಬ್ರುವಾಹನ” ಪ್ರಸಂಗದ ಅರ್ಜುನ ಪಾತ್ರವನ್ನು ಮಾಡಿದ್ದರು, ಈ ಪಾತ್ರವನ್ನು ನೋಡಿದ ಗುರುಗಳು ನನಗೆ ಕಿರೀಟ ವೇಷಗಳನ್ನು ಮಾಡುವುದಕ್ಕೆ ಉತ್ತೇಜನ ನೀಡಿದರು  ಎನ್ನುತ್ತಾರೆ ಮಾಲತಿ ವೆಂಕಟೇಶ್. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಮಾಹಿತಿ ಹಾಗೂ ಅರ್ಥಗಾರಿಕೆಯ ಬಗ್ಗೆ ಗುರುಗಳಲ್ಲಿ ಅಥವಾ ನಿರ್ದೇಶಕರಲ್ಲಿ ತಿಳಿದುಕೊಂಡು, ಭಾಗವತರಲ್ಲಿ ಪದ್ಯ ಮತ್ತು ತಾಳ ಇವುಗಳನ್ನು ಕೇಳಿಕೊಂಡು ರಂಗ ಪ್ರವೇಶ ಮಾಡುವುದು ರೂಢಿ ಎಂದು ಹೇಳುತ್ತಾರೆ ಮಾಲತಿ ವೆಂಕಟೇಶ್. ದಕ್ಷಯಜ್ಞದ…

Read More

ಮಂಗಳೂರು : ಮಂಗಳೂರಿನ ಫರಂಗಿಪೇಟೆಯ ಅರ್ಕುಳದಲ್ಲಿರುವ ಡಾ. ತುಂಗ ಅವರ ಮನಸ್ವಿನಿ ಆಸ್ಪತ್ರೆಯ ವಠಾರದಲ್ಲಿ ‘ಕುಡ್ಲಗಿಪ್ ಕುಂದಾಪ್ರದರ್ ವಾಟ್ಸಾಪ್ ಬಳಗ’ ಆಯೋಜಿಸಿದ‌ ‘ವಿಶ್ವ ಕುಂದಾಪುರ ಕನ್ನಡ ದಿನಾಚರಣೆ’ಯ ಅಂಗವಾಗಿ ದಿನಾಂಕ 23-07-2023ರಂದು ‘ಕುಂದಾಪ್ರ ಹಬ್ಬ’ವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಗಳಾದ ಡಾ. ಮೊಳಹಳ್ಳಿ ಶಾಂತರಾಮ ಶೆಟ್ಟಿಯವರು “ದಿನಕ್ಕೆ ಕಡಿಮೆ ಎಂದರೂ ಹನ್ನೆರಡು ಗಂಟೆ ಕೆಲಸ ಮಾಡುವ ಶ್ರಮಜೀವಿಗಳೆಂದರೆ ಅದು ಕುಂದಾಪುರದವರು. ಪಂಚನದಿಗಳು ಹರಿಯುವ ನಾಡಾದ ಕುಂದಾಪುರದಿಂದ ಬಂದ ಜನರು ಕುಂದಾಪ್ರ ಹಬ್ಬವನ್ನು ಮಂಗಳೂರಿನಲ್ಲಿ ಆಚರಿಸುತ್ತಿದ್ದಾರೆ ಎಂದರೆ ಅದು ಕೇವಲ ಇಲ್ಲಿರುವ ಎಲ್ಲಾ ಕುಂದಾಪ್ರದವರನ್ನು ಒಟ್ಟುಗೂಡಿಸುವ ಉದ್ದೇಶವೇ ಹೊರತು ಇನ್ನಾವುದೇ ಸ್ವಾರ್ಥ ಇಲ್ಲ” ಎಂಬ ಸಂದೇಶ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಿಟಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಮಂಗಳೂರು ಇದರ ಅಧ್ಯಕ್ಷರಾದ ಡಾ. ಕೈಲ್ಕೆರೆ ಭಾಸ್ಕರ ಶೆಟ್ಟಿಯವರು “ನೆರೆಯಲ್ಲಿ ಇಲ್ಲಾ ರಾತ್ರಿಯಲ್ಲಿ ಎಲ್ಲೇ ಆಗಲಿ ನಂಬಬಹುದಾದ ಜನರೆಂದರೆ…

Read More

ಬೈಂದೂರು : ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಕುಂದ ಅಧ್ಯಯನ ಕೇಂದ್ರ ಹಾಗೂ ಕುಂದಾಪ್ರ ಡಾಟ್ ಕಾಂ ಸಂಯುಕ್ತ ಆಶ್ರಯದಲ್ಲಿ ಬೈಂದೂರು ರೋಟರಿ ಕ್ಲಬ್, ಜೆಸಿಐ ಬೈಂದೂರು ಸಿಟಿ, ಜೆಸಿಐ ಉಪ್ಪುಂದ, ಲಯನ್ಸ್ ಕ್ಲಬ್ ಬೈಂದೂರು – ಉಪ್ಪುಂದ, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಬೈಂದೂರು ಹಾಗೂ ಉಪ್ಪುಂದ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ದಿನಾಂಕ 18-07-2023 ಮಂಗಳವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಯು. ಚಂದ್ರಶೇಖರ ಹೊಳ್ಳರಿಗೆ ಉಳುಮೆಯ ನೊಗ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಅವರು ಮಾತನಾಡುತ್ತಾ “ಭಾಷೆ ಬಳಕೆಯ ಜೊತೆಗೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾದ್ದು ಬಹುಮುಖ್ಯ. ಕುಂದಾಪ್ರ ಕನ್ನಡ ಭಾಷೆಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಹಾಗೆಯೇ ಪ್ರದೇಶವಾರು ಮತ್ತು ಸಮುದಾಯವಾರು ಭಿನ್ನತೆಯೂ ಇದೆ. ಇದನ್ನು ದಾಖಲಿಸುವ ಕೆಲಸ ಮಾಡಬೇಕಿದೆ. ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಇದ್ದರಷ್ಟೇ ಸಾಲದು. ಅದು ಇನ್ನಷ್ಟು ವಿಸ್ತಾರಗೊಳ್ಳಬೇಕು. ಅಧ್ಯಯನ, ದಾಖಲೀಕರಣ ನಡೆದಾಗಲೇ…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭ ಗೊಂಡಿದ್ದ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 31-07-2023ರ ಸೋಮವಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ವಿದುಷಿ ರಾಧಿಕಾ ಶೆಟ್ಟಿ ಇವರ ಶಿಷ್ಯೆಯಾದ ಮಂಗಳೂರಿನ ಅದಿತಿ ಲಕ್ಷ್ಮೀ ಭಟ್. ನೃತ್ಯ ಪ್ರದರ್ಶನ ನೀಡಲಿದ್ದು, ಈ ಕಾರ್ಯಕ್ರಮವು ಸಂಜೆ ಗಂಟೆ 6.25 ರಿಂದ ನಡೆಯಲಿದೆ. ಡಾ.ಕಿರಣ್ ಕುಮಾರ್ ಬಿ.ಎಸ್ ಮತ್ತು ಡಾ.ಚೈತ್ರ ಲಕ್ಷ್ಮೀ ಬಿ. ಇವರ ಪುತ್ರಿಯಾದ ಅದಿತಿ ಲಕ್ಷ್ಮೀ ಭಟ್ ತನ್ನ 6ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಪ್ರಾರಂಭಿಸಿ, ಕರ್ನಾಟಕ, ಕೇರಳ, ತಮಿಳುನಾಡು, ಕೊಲ್ಲೂರು ಮತ್ತು ಕೊಚ್ಚಿನ್ ಹೀಗೆ ವಿವಿಧ ಪ್ರತಿಷ್ಟಿತ ವೇದಿಕೆಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾಳೆ. ವಿವಿಧ ಕಲಾ ಪ್ರಕಾರಗಳ ಬಗ್ಗೆಯೂ ಅಪಾರ ಒಲವು ಹೊಂದಿರುವ ಈಕೆ ಅದಕ್ಕಾಗಿ ಬಹಳಷ್ಟು ಶ್ರಮವಹಿಸಿ ಅಭ್ಯಾಸ ಮಾಡುವ ಉತ್ಸಾಹ ಹೊಂದಿದ್ದಾಳೆ. ಭರತನಾಟ್ಯದ ಜೊತೆಗೆ ಬೆಂಗಳೂರಿನ ಅನುಪಮಾ ಮಂಜುನಾಥ್ ಇವರಿಂದ ಕರ್ನಾಟಕ…

Read More

ಅಡ್ಯನಡ್ಕ : ಜನತಾ ಹಿರಿಯ ಪ್ರಾಥಮಿಕ ಶಾಲೆ ಅಡ್ಯನಡ್ಕದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದ ವತಿಯಿಂದ ಜರುಗಿದ ‘ಸಾಹಿತ್ಯ ಸಂಭ್ರಮ – 2’ ಮಕ್ಕಳ ಶಿಬಿರದ ಉದ್ಘಾಟನೆಯು ದಿನಾಂಕ 22-07-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬಂಟ್ಟಾಳ ತಾಲೂಕು ಘಟಕದ ಗೌರವಾಧ್ಯಕ್ಷರಾದ ಶ್ರೀ ಎಸ್. ಬಾಲಕೃಷ್ಣ ಕಾರಂತ ಎರುಂಬು ಇವರು ಮಾತನಾಡುತ್ತಾ “ಕೇವಲ ಪಠ್ಯಗಳು ಮಕ್ಕಳನ್ನು ಪರಿಪೂರ್ಣರನ್ನಾಗಿ ಮಾಡಲಾರವು. ಹೊಡೆತದಿಂದ ಎಚ್ಚರಿಸುವ ಬದಲು ಸಾಹಿತ್ಯದ ಮೂಲಕ ಮಕ್ಕಳನ್ನು ಜಾಗೃತಗೊಳಿಸಬೇಕು. ಸಾಹಿತ್ಯವು ಜಡತ್ವವನ್ನು ದೂರ ಮಾಡಬಲ್ಲದು” ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಉದ್ಘಾಟನೆಯನ್ನು ಶ್ರೀ ಭಾಸ್ಕರ ಅಡ್ವಳ ನೆರವೇರಿಸಿದರು. ಮಕ್ಕಳಿಗೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಚುಟುಕು ಸಾಹಿತ್ಯ ರಚನೆಯ ತರಬೇತಿಯನ್ನು ಶ್ರೀ ಜಯಾನಂದ ಪೆರಾಜೆ ನಡೆಸಿಕೊಟ್ಟರು. ಭಾಸ್ಕರ ಅಡ್ವಳರು ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿದರು. ಬಂಟ್ಟಾಳ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಕಲಾ ಕಾರಂತ್ ಉಪಸ್ಥಿತರಿದ್ದರು. ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು…

Read More

ಕಾರ್ಕಳ : ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಆಯೋಜಿಸಿದ ‘ಸಾಹಿತ್ಯ-ಸಾಂಗತ್ಯ’ ಸರಣಿ ಕಾರ್ಯಕ್ರಮ -7 ದಿನಾಂಕ 17-07-2023ರಂದು ಕಾಲೇಜಿನ ನೇಸರ ಸಭಾಂಗಣದಲ್ಲಿ ನಡೆಯಿತು. ಉಪನ್ಯಾಸಕರಾಗಿ ಆಗಮಿಸಿದ ಕಳಸಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀ ಎಚ್‌.ಎಂ.ನಾಗರಾಜ ರಾವ್‌ ಕಲ್ಕಟ್ಟೆ ಮಾತನಾಡುತ್ತಾ “ಯಶಸ್ಸಿಗಾಗಿ ನಿರೀಕ್ಷೆಗಳಿರುತ್ತವೆ. ನಿರೀಕ್ಷೆಯೇ ಪ್ರಧಾನವಾಗಬಾರದು. ಪ್ರತೀ ಸಲವೂ ಪ್ರಯತ್ನ ಪಡುವ ಮೂಲಕ ಯಶಸ್ಸು ಗಳಿಸಲು ಸಾಧ್ಯವಿದೆ. ಅಪಾರ ಪ್ರಯತ್ನಕ್ಕೆ ಅಪರಿಮಿತ ಫಲವಿದೆ. ಭಾಷೆ ಎಂಬುದು ಜ್ಞಾನದ ವಾಹಿನಿ. ಅದು ಜ್ಞಾನವೇ ಆಗಿರಬೇಕಿಲ್ಲ. ಸಂವಹನದಲ್ಲೂ ಸಾಹಿತ್ಯವಿದೆ. ಅದು ಹೃದಯದ ಭಾಷೆಯೇ ಆದಾಗ ಸರಳ ಸಾಹಿತ್ಯವಾಗುತ್ತದೆ. ಯಾವ ಮಾಧ್ಯಮದಲ್ಲಿ ಕಲಿತರೂ ಜ್ಞಾನಕ್ಕಾಗಿ ಕಲಿಯಬೇಕೇ ಹೊರತು ಹೊಟ್ಟೆಪಾಡಿಗಲ್ಲ. ಹಾಗೆಯೇ ಸಾಹಿತ್ಯವೆಂದರೆ ಮನಸ್ಸಿನ ತುಡಿತಗಳನ್ನು ಪ್ರತಿಬಿಂಬಿಸುವ ಮಾಧ್ಯಮ. ಸಂತೋಷಕ್ಕಾಗಿ ಸಾಹಿತ್ಯ ಓದಬೇಕು” ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಶ್ರೀ ಎಚ್‌.ಎಂ. ನಾಗರಾಜ ರಾವ್‌ ಕಲ್ಕಟ್ಟೆಯವರನ್ನು ಕಾಲೇಜಿನ ಪರವಾಗಿ ಗೌರವಿಸಲಾಯಿತು.   ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಸಂಸ್ಥಾಪಕರಾದ ಶ್ರೀ ಅಶ್ವತ್‌ ಎಸ್‌.ಎಲ್,…

Read More

ಶ್ರೀಲಂಕಾ: ಉಳ್ಳಾಲ ನಾಟ್ಯನಿಕೇತನದ ನಿರ್ದೇಶಕಿ, ನೃತ್ಯಗುರು, ಕರ್ನಾಟಕ ಕಲಾಶ್ರೀ ಪುರಸ್ಕೃತ ವಿದುಷಿ ರಾಜಶ್ರೀ ಉಳ್ಳಾಲ್ ನಿರ್ದೇಶನದಲ್ಲಿ ಶ್ರೀಲಂಕಾದ ಜಾಫ್ನಾದಲ್ಲಿ ನಡೆದ ಭರತನಾಟ್ಯ, ಸ್ಯಾಕ್ಸೋಫೋನ್ ಮತ್ತು ಮೃದಂಗ ನಾದವೈಭವಂ ಕಾರ್ಯಕ್ರಮವು ದಿನಾಂಕ 23-07-2023ರಂದು ನಡೆದಿದ್ದು, ಹಿರಿಯ ಕಲಾವಿದೆಯರ ತಂಡ ಭರತನಾಟ್ಯ ಪ್ರದರ್ಶನ ನೀಡಿದೆ. ನಾಟ್ಯ ನಿಕೇತನದ ವಿದುಷಿ ರಾಜಶ್ರೀ ಉಳ್ಳಾಲ್, ವಗ್ಗ ನಾಟ್ಯ ನಿಕೇತನದ ವಿನುತಾ ಪ್ರವೀಣ್ ಗಟ್ಟಿ, ಪುತ್ತೂರು ನೃತ್ಯೋಪಾಸನಾ ಕಲಾ ಕೇಂದ್ರದ ನೃತ್ಯಗುರು ಶಾಲಿನಿ ಆತ್ಮಭೂಷಣ್, ಚಂದ್ರಿಕಾ, ಕವಿತಾ ಯಶ್‌ಪಾಲ್, ಡಾ.ಪ್ರಿಯಾ ದಿಲ್‌ರಾಜ್ ಆಳ್ವ, ಮತ್ತು ದಿವ್ಯಾ ಸಂದೀಪ್‌ ನೃತ್ಯ ಪ್ರದರ್ಶನ ನೀಡಿದರು. ಹಾಗೂ ಕಲಾರತ್ನ ಜಯರಾಮ ಮಂಗಳೂರು, ಯುವ ಕಲಾಮಣಿ ಪುತ್ತೂರು ನಿಕ್ಷಿತ್ ಬೆಂಗಳೂರು, ಡಾ.ಎರ್ಲಾಲೈ ಶಿವಶಕ್ತಿನಾಥನ್, ಡಾ.ಟಿ.ಎನ್‌.ರಘುನಾಥನ್ ಇವರಿಂದ ಸ್ಯಾಕ್ರೋಫೋನ್ ಮತ್ತು ಮೃದಂಗ ನಾದವೈಭವಂ ನಡೆಯಿತು. ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕೃಷ್ಣಪ್ಪ ಮನೋಹ‌ರ್ ಸಹಕರಿಸಿದರು. ಜಾಫ್ನಾದ ಚುನ್ನಕಂ ಎಂಬಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲಾಕಲಿ ವೆಸ್ಟ್ ಶ್ರೀವಿನಯಾಗರ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಹಯೋಗ ನೀಡಿತು.

Read More

ಮೈಸೂರು : ಸಂಚಲನ ಮೈಸೂರು ಪ್ರಸ್ತುತಪಡಿಸುವ ಬಿ.ಎಂ.ಶ್ರೀ ರಚಿಸಿ ಡಾ.ಪಿ.ವಿ.ನಾರಾಯಣ ಹೊಸ ಕನ್ನಡಕ್ಕೆ ಅನುವಾದಿಸಿದ ‘ಅಶ್ವತ್ಥಾಮನ್’ ನಾಟಕದ ಪ್ರದರ್ಶನವು ದಿನಾಂಕ 05-08-2023 ರಂದು ಮೈಸೂರಿನ ರಂಗಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ನಡೆಯಲಿದೆ. ಶಶಿಧರ ಅಡಪರ ರಂಗವಿನ್ಯಾಸವಿರುವ ಈ ನಾಟಕದ ರಂಗ ನಿರ್ವಹಣೆ ಮಹೇಶ್.ಸಿ ಇವರದ್ದು. ಹೆಚ್.ಕೆ.ವಿಶ್ವನಾಥ ರಂಗ ಪರಿಕರಗಳನ್ನು ಸಜ್ಜು ಗೊಳಿಸಿದ್ದು, ಕೃಷ್ಣ ಚೈತನ್ಯರ ಸಹಕಾರದೊಂದಿಗೆ ಧನಂಜಯ ಆರ್.ಸಿ ಈ ನಾಟಕಕ್ಕೆ ಸಂಗೀತ ನೀಡಲಿದ್ದಾರೆ. ಮಾನಸ ಮುಸ್ತಫಾ ವಸ್ತ್ರ ವಿನ್ಯಾಸ ಮಾಡಿದ್ದು, ಪ್ರತಿಭಾ ನಂದಕುಮಾರ ಪ್ರಸಾಧನ, ಮಧು ಮಳವಳ್ಳಿಯವರ ಪರಿಕಲ್ಪನೆ,ವಿನ್ಯಾಸ,ನಿರ್ದೇಶನ ಹಾಗೂ ಬೆಳಕಿನ ವಿನ್ಯಾಸವಿರುವ ಈ ನಾಟಕಕ್ಕೆ ಉಮಾಶ್ರೀ ಮಧುಮಳವಳ್ಳಿಯವರು ಸಹ ನಿರ್ದೇಶಕರಾಗಿ ಸಹಕರಿಸಿದ್ದಾರೆ. ‘ಅಶ್ವತ್ಥಾಮನ್’ ಗ್ರೀಕ್ ನ ಬರಹಗಾರ ಸಾಫೋಕ್ಲೀಸ್‍ನ ‘ಏಜಾಕ್ಸ್’ ಅಥವಾ ‘ಅಯಾಸ್’ ನಾಟಕದ ಕನ್ನಡ ರೂಪಾಂತರವೇ ‘ಅಶ್ವತ್ಥಾಮನ್’ ನಾಟಕ. ಪಾತ್ರಗಳು ಹಾಗೂ ಸನ್ನಿವೇಶಗಳ ಹೊರ ಆವರಣದ ಮಟ್ಟಿಗೆ ಇದು ನಿಜ. ಆದರೆ ನಾಟಕದ ಸತ್ತ್ವ ಅನುವಾದವೇ. ಪೌರುಷ-ಸ್ವಾಭಿಮಾನಗಳು ಒಂದು ಮಿತಿಯಲ್ಲಿದ್ದರೆ ಅವುಗಳ ಬಗ್ಗೆ ನಮ್ಮ ಸಂಪ್ರದಾಯ ಗೌರವಿಸುತ್ತದೆಯೇ…

Read More

ಬೆಂಗಳೂರು: ಬೆಂಗಳೂರಿನ ರಂಗತಂತ್ರ ಅರ್ಪಿಸುವ ಟಿ.ಪಿ.ಕೈಲಾಸಂ ಇವರ ‘ಬಂಡ್ವಾಳ್ವಲ್ಲದ ಬಡಾಯಿ’ ನಾಟಕವು ದಿನಾಂಕ 29-07-2023 ರಂದು ಹಾಗೂ ಬಿ.ಆರ್. ಲಕ್ಷ್ಮಣರಾವ್ ಇವರ ‘ನನಗ್ಯಾಕೋ ಡೌಟು’ ನಾಟಕದ ಪ್ರದರ್ಶನವು ದಿನಾಂಕ 30-07-2023 ರಂದು ಬೆಂಗಳೂರಿನ ಬಸವನಗುಡಿಯ ವಾಡಿಯ ಸಭಾಂಗಣದಲ್ಲಿ ನಡೆಯಲಿದೆ. ‘ಬಂಡ್ವಾಳ್ವಲ್ಲದ ಬಡಾಯಿ’ ಉದ್ದಿನ ಮಣಿ, ಕಂಪೇರಿಟಿವ್ ಕೊಲೊರೊಲಿಗೆ, ಶ್ಯಾಡೋ ಆಫ್ ದ ಸನ್ comparative colorology, shadow of the sun, comparative colorology, shadow of the sun ಮುಂತಾದ ವಿಶಿಷ್ಟ ಪದ ಪ್ರಯೋಗಗಳು ಪ್ರಹಸನ ಪಿತಾಮಹ ಎಂದು ಖ್ಯಾತರಾಗಿರುವ ಟಿ.ಪಿ.ಕೈಲಾಸಂ ಅವರ ಟ್ರೇಡ್ ಮಾರ್ಕ್ ಎಂದರೆ ಉತ್ಪ್ರೇಕ್ಷೆಯಲ್ಲ. ವ್ಯವಸ್ಥೆಯನ್ನು ವ್ಯಂಗ್ಯ ಮಾಡಿ, ನಗುವಿನ ಬುಗ್ಗೆ ಹರಿಸುವ ಬಗೆ ಕೈಲಾಸಂರವರಿಗೆ ಸುಲಭವಾಗಿ ಕರಗತ. ಅದಕ್ಕೆ ಅಲ್ಲವೇ ಇವರನ್ನು tipycal ass ಅನ್ನುವುದು. ಇಂತಹ ಕೈಲಾಸಂರವರು 1945ರಲ್ಲಿ, ಒಬ್ಬ ಲಾಯರ್ ತನ್ನ ಬದುಕನ್ನ ಹೇಗೆಲ್ಲಾ ನಡೆಸಬಹುದು ಮತ್ತು ಅಂದಿನ ಸಾಮಾಜಿಕ ಸ್ಥಿತಿಗತಿಗಳು ಹೇಗಿದ್ದವು ಎಂಬುದನ್ನ ಉಡಾಫೆ ಮತ್ತು ವ್ಯಂಗ್ಯದ ಮೂಲಕ ಅದ್ಬುತವಾಗಿ…

Read More