ಬೆಂಗಳೂರು : ಬೆಂಗಳೂರಿನ ವಸಂತ ಆರ್ಟ್ ಆಯೋಜಿಸಿದ ಸಮೂಹ ಚಿತ್ರಕಲಾ ಪ್ರದರ್ಶನ ‘ಕಲರ್ಸ್ ಬ್ರಿಜ್’ ದಿನಾಂಕ 16-02-2024 ರಿಂದ 20-02-2024ರ ವರೆಗೆ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸಿಟ್ಯೂಟ್ ಆಪ್ ವರ್ಲ್ಡ್ ಕಲ್ಟರ್ ಸಭಾಂಗಣದಲ್ಲಿ ನಡೆಯಿತು.
ದಿನಾಂಕ 16-02-2024 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ಯೋಜನಾ ಮತ್ತು ಆಸ್ತಿ ನಿರ್ವಹಣಾ ಕೇಂದ್ರದ ಮುಖ್ಯ ಇಂಜಿನಿಯರ್ ಆಗಿರುವ ಪ್ರದೀಪ್ ಮಿತ್ರ ಮಂಜುನಾಥ್ ಪ್ರದರ್ಶನವನ್ನು ಉದ್ಘಾಟಿಸಿ ಕಲಾವಿದರಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೋದಿ ಸಂಸ್ಥೆಯ ನಿರ್ದೇಶಕರಾದ ಶಿವಾನಂದ ಬಸವಂತಪ್ಪ ಹಾಗೂ ಉದ್ಯಮಿಯಾದ ಕೋಲಿ ಶೆಟ್ಟಿ ಉಪಸ್ಥಿತರಿದ್ದರು.
ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು ಹದಿನೆಂಟು ಚಿತ್ರಕಲಾವಿದರು ತಮ್ಮ ಕೈ ಚಳಕದಿಂದ ತಯಾರಿಸಿದ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡವು.