Author: roovari

ಮಡಿಕೇರಿ : ವಿದ್ಯಾರ್ಥಿಗಳು ಸಾಹಿತ್ಯ ಅಧ್ಯಯನದ ಮುಖಾಂತರ ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಲಿ ಎಂಬ ಉದ್ದೇಶದಿಂದ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ರಾಷ್ಟ್ರಕವಿ, ವಿಶ್ವ ಮಾನವ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಕಾರದೊಂದಿಗೆ ದಿನಾಂಕ 30-12-2023ರಂದು ಕುಶಾಲನಗರ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಕುವೆಂಪು ಅವರ ಸಾಹಿತ್ಯ, ನಾಡು, ನುಡಿ, ಕಲೆ ವಿಷಯದ ಮೇಲೆ ರಸಪ್ರಶ್ನೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ, ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಮತ್ತು ಫಲಕ ನೀಡಲಾಗುವುದು. ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರಿಂದ ಗುರುತಿನ ಪತ್ರ ತರಬೇಕು. ಒಂದು ಕಾಲೇಜಿನಿಂದ ತಲಾ ಮೂರು ವಿದ್ಯಾರ್ಥಿಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ. ಸ್ಪರ್ಧಿಗಳು ದಿನಾಂಕ 28-12-2023ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಬಳಗದ ಅಧ್ಯಕ್ಷ ಲೋಕೇಶ್‌ ಸಾಗರ್ 9980988123, ಸಂಚಾಲಕ ನಾಗೇಗೌಡ 9448072619 ಅವರನ್ನು ಸಂಪರ್ಕಿಸಬಹುದು.

Read More

ಉಡುಪಿ : ಉಡುಪಿ ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ರಂಗಭೂಮಿ (ರಿ.) ಉಡುಪಿ ದಿ. ನಿ.ಬೀ ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಆಯೋಜಿಸುವ ‘ಅಂಬಲಪಾಡಿ ನಾಟಕೋತ್ಸವ-2023’ (ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನ) ವು ದಿನಾಂಕ 31-12-2023ರ ಆದಿತ್ಯವಾರ ಮತ್ತು ದಿನಾಂಕ 01-01-2024ರ ಸೋಮವಾರ ಪ್ರತಿದಿನ ಸಂಜೆ ಘಂಟೆ 6.00ಕ್ಕೆ ಅಂಬಲಪಾಡಿ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ನಡೆಯಲಿದೆ. ದಿನಾಂಕ 31-12 2023ರ ಆದಿತ್ಯವಾರವಾರ ಸಂಜೆ ನಡೆಯಲಿರುವ ಉದ್ಘಾಟಣಾ ಸಮಾರಂಭದಲ್ಲಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬೀ. ವಿಜಯ ಬಲ್ಲಾಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ರಂಗಭೂಮಿ (ರಿ.) ಉಡುಪಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬ್ರಹ್ಮಾವರದಲ್ಲಿ ಟ್ಯಾಕ್ಸ್ ಕನ್ಸಲ್ಟೆಂಟ್ ಆಗಿರುವಂಥ ಶ್ರೀ ಬಿ. ಯಂ. ಭಟ್, ಉಡುಪಿಯ ಎ.ಜೆ. ಅಸೋಸಿಯೇಟ್ಸ್ ಇದರ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ ಆಗಿರುವಂಥ ಶ್ರೀ ಎಂ. ಗೋಪಾಲ ಭಟ್…

Read More

ಧಾರವಾಡ : ಕನ್ನಡದ ಹರಿಕಾರ ಯುಗದ ಮಹತ್ವದ ಲೇಖಕರಾದ ಆನಂದಕಂದ (1900-1982) ಅವರ 125ನೇ ಜಯಂತಿಯ ಅಂಗವಾಗಿ ಅವರ ಸಾಹಿತ್ಯವನ್ನು ಕುರಿತ ಲೇಖನಗಳನ್ನು ಸಂಪಾದಿಸಿ ಪ್ರಕಟಿಸುವ ಉದ್ದೇಶದಿಂದ ಅವರ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಜಾನಪದ, ಸಂಶೋಧನೆ ಮತ್ತು ಪತ್ರಿಕೋದ್ಯಮದ ಕುರಿತ ಲೇಖನಗಳನ್ನು ಆಹ್ವಾನಿಸಲಾಗಿದೆ. ಯುವ ವಿಮರ್ಶಕರಾದ ಶ್ರೀ ವಿಕಾಸ ಹೊಸಮನಿ ಮತ್ತು ಡಾ. ಸುಭಾಷ್ ಪಟ್ಟಾಜೆ ಅವರ ಸಂಪಾದಕತ್ವದಲ್ಲಿ ಈ ಕೃತಿಯು 2024ರಲ್ಲಿ ಹೊರಬರಲಿದ್ದು, ಕನ್ನಡದ ಲೇಖಕ/ಕಿಯರು, ಸಂಶೋಧನಾರ್ಥಿಗಳು ಮತ್ತು ಉದಯೋನ್ಮುಖ ಪ್ರತಿಭೆಗಳು ತಮ್ಮ ಲೇಖನಗಳನ್ನು 31-03-2024ರ ಮುಂಚಿತವಾಗಿ ಕಳುಹಿಸಬಹುದು. ಆಯ್ಕೆಯಲ್ಲಿ ಸಂಪಾದಕರ ತೀರ್ಮಾನವೇ ಅಂತಿಮ. ಹೆಚ್ಚಿನ ಮಾಹಿತಿಗಾಗಿ ವಿಕಾಸ ಹೊಸಮನಿ – 9110687473, ಡಾ. ಸುಭಾಷ್ ಪಟ್ಟಾಜೆ – 9645081966

Read More

ಚೆನ್ನರಾಯಪಟ್ಟಣ : ಚೆನ್ನರಾಯಪಟ್ಟಣದ ಪ್ರತಿಮಾ ಹೆಜ್ಜೆ ಕಲಾ ಸಂಘಟನೆಯು ನೂತನವಾಗಿ ನಿರ್ಮಿಸಿದ ‘ರಂಗ ಲೋಕ’ ರಂಗ ಮಂದಿರದ ಉದ್ಘಾಟನಾ ಸಮಾರಂಭವು ದಿನಾಂಕ 21-12-2023 ರಂದು ಚೆನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ರಾಘವೇಂದ್ರ ಸಾ ಮಿಲ್ ರಸ್ತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಿದ್ದ ಕತ್ತರಿಘಟ್ಟ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಸದಾ ನಿಮ್ಮೊಂದಿಗಿರುತ್ತೇವೆ ಎಂದು ಆತ್ಮವಿಶ್ವಾಸ ತುಂಬಿದರು. ರಂಗ ಲೋಕದ ಗ್ರಂಥಾಲಯವನ್ನು ಟೈಮ್ಸ್ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿಯಾದ ಶ್ರೀ ಬಿ.ಕೆ.ಗಂಗಾಧರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶ್ರೀಮತಿ ಸಿ.ಕೆ.ಕುಸುಮ ರಾಣಿ ‘ರಂಗ ಲೋಕ’ ಉದ್ಘಾಟಿಸಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಚನ್ನರಾಯಪಟ್ಟಣದ ಕಿರುತೆರೆ, ಹಿರಿತೆರೆ ಹಾಗೂ ರಂಗಭೂಮಿ ನಟರಾದ ಶ್ರೀ ನಾಗರಾಜ್ ಕೋಟೆ “ಚನ್ನರಾಯಪಟ್ಟಣದಲ್ಲಿ ಒಂದು ರಂಗ ಮಂದಿರದ ಅವಶ್ಯಕತೆ ಇತ್ತು. ಅದನ್ನು ಪ್ರತಿಮಾ ಟ್ರಸ್ಟ್ ಸಾಧ್ಯವಾಗಿಸಿರುವುದು ತುಂಬಾ ಖುಷಿ ತಂದಿದೆ.” ಎಂದರು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ…

Read More

ಮಂಗಳೂರು : ತುಳು ಕೂಟದ ಹತ್ತು ಸಮಾರಂಭಗಳ ಸರಣಿಯ ‘ಬಂಗಾರ್ ಪರ್ಬೊ’ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 30-12-23ನೇ ಶನಿವಾರ ಬೆಳಿಗ್ಗೆ ಘಂಟೆ 10.00 ಕ್ಕೆ ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ಪ.ಪೂ.ಕಾಲೇಜಿನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ದಯಾಕರ ಕುಳಾಯಿಯವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದು, ತುಳುಕೂಟದ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕರ ಅಸೋಸಿಯೇಶನ್ಸ್ ನ ಅಧ್ಯಕ್ಷ ರಾದ ಶ್ರೀ ಶ್ರೀಕಾಂತ ಶೆಟ್ಟಿ ಬಾಳ, ಜಾನಪದ ವಿದ್ವಾಂಸ ಡಾ. ಗಣೇಶ್ ಅಮಿನ್ ಸಂಕಮಾರ್, ಶ್ರೀ ಚಂದ್ರಶೇಖರ ಸನಿಲ್., ಶ್ರೀ ರಾಜಾರಾಮ್ ಸಾಲ್ಯಾನ್ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪ್ರೌಢ ಶಾಲೆ ಮತ್ತು ಪ.ಪೂ. ವಿದ್ಯಾರ್ಥಿಗಳಿಗಾಗಿ ತುಳುವರ ವಾದ್ಯ ವಾದನಗಳ ಸ್ಪರ್ಧೆ ನಡೆಯಲಿದೆ. ಎಂದು ಕೂಟದ ಪ್ರ.ಕಾರ್ಯದರ್ಶಿ ವರ್ಕಾಡಿ ಶ್ರೀ ರವಿ ಅಲೆವೂರಾಯ ತಿಳಿಸಿದ್ದಾರೆ.

Read More

ವಿದ್ಯಾಗಿರಿ (ಮೂಡುಬಿದಿರೆ):  ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’29ನೇ ಆಳ್ವಾಸ್ ವಿರಾಸತ್’ ಅಂಗವಾಗಿ ಕೃಷಿಸಿರಿ ಆವರಣದಲ್ಲಿ ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ನಡೆದ ನಾಲ್ಕು ದಿನಗಳ ಪ್ರದರ್ಶನ ಹಾಗೂ ಮಹಾಮೇಳವನ್ನು ದಿನಾಂಕ 11-12-2023ರ ಗುರುವಾರದಂದು ಭಾರತ್ ಸ್ಕೌಟ್ಸ್-ಗೈಡ್ಸ್ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ. ಜಿ. ಆರ್. ಸಿಂಧ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಲಕ್ಷಾಂತರ ಮಕ್ಕಳನ್ನು ಸತ್ಪ್ರಜೆ ಮಾಡುವ ಆಳ್ವಾಸ್ ವಿರಾಸತ್, ವಿವಿಧ ಮೇಳಗಳ ಮೂಲಕ ಎಲ್ಲರ ಹೃದಯದ ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ. ಆಳ್ವಾಸ್ ವಿರಾಸತ್ ಇಂದು ರಾಜ್ಯದಾದ್ಯಂತ ಮನೆಮಾತಾಗಿದೆ. ಡಾ.ಎಂ. ಮೋಹನ ಆಳ್ವ ಅವರು ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದ ಅದ್ವಿತೀಯ ನಾಯಕರಾಗಿದ್ದಾರೆ. ಪ್ರತಿ ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಅವರ ಗುಣ ಹಾಗೂ ಶೈಕ್ಷಣಿಕ ಬದಲಾವಣೆಗೆ ತ್ವರಿತವಾಗಿ ಸ್ಪಂದಿಸುವ ರೀತಿ ಅನನ್ಯ. ಸ್ಕೌಟ್ಸ್ ಗೈಡ್ಸ್ ಒಳ್ಳೆಯ ವ್ಯಕ್ತಿಗಳನ್ನು ರೂಪಿಸುವ ಅಂತರ ರಾಷ್ಟ್ರೀಯ ಚಳವಳಿ, 200ದೇಶಗಳಲ್ಲಿದೆ. ಜಾಂಬೂರಿ ನಡೆಸುವ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇವರ ವತಿಯಿಂದ 2023-24ನೇ ತಿಂಗಳ ಸರಣಿ ತಾಳಮದ್ದಳೆ ಕೂಟವು ಪಾರ್ತಿಸುಬ್ಬ ವಿರಚಿತ ‘ಪಾದುಕಾ ಪ್ರದಾನ’ ಎಂಬ ಆಖ್ಯಾನದೊಂದಿಗೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 19-12-2023ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ನೇರಂಕಿ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಜಯರಾಮ ಭಟ್, ಪ್ರೊ. ದಂಬೆ ಈಶ್ವರ ಶಾಸ್ತ್ರೀ ಮತ್ತು ಮಾ. ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ಶ್ರೀಧರ್ ರಾವ್ ಕುಂಬ್ಳೆ (ಶ್ರೀ ರಾಮ), ಗುಂಡ್ಯಡ್ಕ ಈಶ್ವರ ಭಟ್ (ಭರತ), ಶುಭಾ ಅಡಿಗ (ವಸಿಷ್ಠ), ಚಂದ್ರಶೇಖರ ಭಟ್ ಬಡೆಕ್ಕಿಲ (ಲಕ್ಷ್ಮಣ ) ಮತ್ತು ಕಿಶೋರಿ ದುಗ್ಗಪ್ಪ ನಡುಗಲ್ಲು (ಗುಹ) ಸಹಕರಿಸಿದರು. ಸಂಘದ ನಿರ್ದೇಶಕರಾದ ಭಾಸ್ಕರ ಬಾರ್ಯ ಸ್ವಾಗತಿಸಿ, ದುಗ್ಗಪ್ಪ ನಡುಗಲ್ಲು ವಂದಿಸಿದರು.

Read More

ಮಂಗಳೂರು : ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಲಲಿತ ಕಲಾಸಂಘದ ಸಹಕಾರದಲ್ಲಿ ನಡೆದ ಬಾಲ ಪ್ರತಿಭೆಗಳಾದ ಮಾ. ವಿನಮ್ರ ಇಡ್ಕಿದು ಮತ್ತು ಕು. ಅನನ್ಯ ನಾರಾಯಣ್ ಹಾಡಿದ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ‘ಮತ್ತದೇ ಬೇಸರ ಅದೇ ಸಂಜೆ’ ಎಂಬ ದೃಶ್ಯ ಗೀತೆಯನ್ನು ಬಿಡುಗಡೆ ಕಾರ್ಯಕ್ರಮ ದಿನಾಂಕ 09-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ದೃಶ್ಯ ಗೀತೆಯನ್ನು ಬಿಡುಗಡೆ ಮಾಡಿದ ಭಾವಗೀತೆಗಳ ಯುವ ಕವಿ ರವೀಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು “ಕವಿಯ ಕವಿತೆಯನ್ನು ಸಂಗೀತದ ಮೂಲಕ ವಾಚನ ಮಾಡುವ ಕ್ರಮವೇ ಭಾವಗೀತೆ. ಅಲ್ಲಿ ವಾದ್ಯದ ಅಬ್ಬರಗಳಿರುವುದಿಲ್ಲ, ಸಾಹಿತ್ಯವೇ ಪ್ರಧಾನ. ಜನರ ಹೃದಯಕ್ಕೆ ಮುಟ್ಟುವುದೇ ಅದರ ಗುಣ. ಬಾಲ ಪ್ರತಿಭೆಗಳಾದ ವಿನಮ್ರ ಇಡ್ಕಿದು ಮತ್ತು ಅನನ್ಯ ನಾರಾಯಣ್ ಕವಿ ನಿಸಾರ್ ಅಹಮ್ಮದ ಕವಿತೆಯನ್ನು ಹೃದಯಕ್ಕೆ ಮುಟ್ಟುವ ಹಾಗೆ ಮತ್ತೆ ಹಾಡಿರುವುದು ಶ್ಲಾಘನೀಯ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿಯವರು ಮಾತನಾಡಿ “ಬಾಲ ಪ್ರತಿಭೆಗಳಲ್ಲಿರುವ…

Read More

ಮಂಗಳೂರು : ಕನ್ನಡ ವಿಭಾಗ, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇವರ ವತಿಯಿಂದ ದಿನಾಂಕ 28-12-2023ರಂದು ಸಂಜೆ ಗಂಟೆ 5ಕ್ಕೆ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಕೆ.ಎ.ಎಂ. ಅನ್ಸಾರಿ ರಚಿಸಿದ ಅಲೀಕತ್ತ್ ಸಣ್ಣಕತೆಗಳು ಮತ್ತು ‘ಚೆಂಡೆ’ ಕೃತಿಗಳ ಅನಾವರಣ ನಡೆಯಲಿದೆ. ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಹಣಕಾಸು ಅಧಿಕಾರಿಗಳಾದ ರೆ.ಫಾ. ಪ್ರದೀಪ್ ಸಿಕ್ವೇರ ಯಸ್.ಜೆ. ಇವರ ಅಧ್ಯಕ್ಷತೆಯಲ್ಲಿ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ನಾ. ದಾಮೋದರ ಶೆಟ್ಟಿ ಕೃತಿಗಳನ್ನು ಅನಾವರಣಗೊಳಿಸಲಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಡಾ. ಎನ್. ಇಸ್ಮಾಯಿಲ್ ಇವರು ‘ಚೆಂಡೆ’ ಮತ್ತು ಸಹ್ಯಾದ್ರಿ ಕಾಲೇಜಿನ ಪ್ರೊ ಅಕ್ಷಯ ಶೆಟ್ಟಿ ಇವರು ‘ಅಲೀಕತ್ತ್’ ಕೃತಿಗಳ ಪರಿಚಯ ಮಾಡಲಿದ್ದಾರೆ.

Read More

ಹಾಸನ : ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆಯಾದ ಬೆಂಗಳೂರಿನ ರಂಗಕಹಳೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ ಇದರ ಮಾರ್ಗದರ್ಶನದಲ್ಲಿ ‘22ನೇ ಕುವೆಂಪು ನಾಟಕೋತ್ಸವ 2023’ ಕುವೆಂಪು ಜನ್ಮದಿನೋತ್ಸವ, ವಿಚಾರ ಸಂಕಿರಣ, ಸಾಧಕರಿಗೆ ಗೌರವಾರ್ಪಣೆ, ಚಲನಚಿತ್ರ ಪ್ರದರ್ಶನ, ಕುವೆಂಪು ಗೀತಗಾಯನಗಳು ದಿನಾಂಕ 28-12-2023ರಿಂದ 31-12-2023ರವರೆಗೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ದಿನಾಂಕ 28-12-2023ರಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜನಪದ ವಿದ್ವಾಂಸರಾದ ಡಾ. ಹಂಪನಹಳ್ಳಿ ತಿಮ್ಮೇಗೌಡ ಇವರು ವಹಿಸಲಿದ್ದು, ಹಾಸನ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸತ್ಯಭಾಮ ಸಿ. ಇವರು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿ. ಲಕ್ಷ್ಮಣ ಇವರ ನಿರ್ದೇಶನದಲ್ಲಿ ರಂಗಕಹಳೆ ತಂಡದವರಿಂದ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮತ್ತು ಓಹಿಲೇಶ ಎಲ್. ನಿರ್ದೇಶನದಲ್ಲಿ ಗೌರಿಶಂಕರ ಸಾಂಸ್ಕೃತಿಕ ಕ್ರೀಡಾದತ್ತಿ ತಂಡದಿಂದ ‘ಮೋಡಣ್ಣನ ತಮ್ಮ’ ನಾಟಕ ಪ್ರದರ್ಶನ, ದಿನಾಂಕ 29-12-2023ರಂದು ಟಿ.ಎಂ. ಬಾಲಕೃಷ್ಣ ನಿರ್ದೇಶನದ ಬೆಂಗಳೂರಿನ ಬಿ.ಎಂ.ಟಿ.ಸಿ. ಸಾಂಸ್ಕೃತಿಕ ಕಲಾ ಕುಠೀರ ಅಭಿನಯಿಸುವ ‘ಯಮನ…

Read More