Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಕರಾವಳಿ ಲೇಖಕಿಯರ ವಾಚಕಿಯರ ಸಂಘದಲ್ಲಿ ದಿನಾಂಕ 21-05-2023ರಂದು ಅಪರಾಹ್ನ ಗಂಟೆ 2-30ಕ್ಕೆ ಕಾಸರಗೋಡಿನ ಪ್ರಬುದ್ಧ ಲೇಖಕಿ ಶ್ರೀಮತಿ ಶೀಲಾಲಕ್ಷ್ಮೀಯವರ ‘ಸರಸ ಸಮರಸ’ ಕಾದಂಬರಿ ಲೋಕಾರ್ಪಣೆಗೊಳ್ಳಲಿದೆ. ಶ್ರೀಮತಿ ರಶ್ಮಿ ಅರಸ್ ಅವರ ಆಶಯ ಗೀತೆಯೊಂದಿಗೆ ಆರಂಭವಾಗುವ ಈ ಕಾರ್ಯಕ್ರಮವು ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳ್ಯಾರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ಲೇಖಕಿ ಬಿ. ಸತ್ಯವತಿ ಭಟ್ ಕೊಳಚಪ್ಪು ಕೃತಿ ಲೋಕಾರ್ಪಣೆ ಮಾಡುವರು. ಮಂಗಳೂರಿನ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಶೈಲಜಾ ಕೆ. ಲೋಕಾರ್ಪಣೆಗೊಂಡ ಕೃತಿಯ ಪರಿಚಯ ಮಾಡಿಕೊಡುತ್ತಾರೆ. ಕೃತಿಯ ಲೇಖಕಿ ಶೀಲಾಲಕ್ಷ್ಮೀ ಕಾಸರಗೋಡು ಉಪಸ್ಥಿತರಿರುತ್ತಾರೆ. ಸ್ವಾಗತ ಮತ್ತು ಪ್ರಸ್ತಾವನೆ ಶ್ರೀಮತಿ ಆಕೃತಿ ಎಸ್. ಭಟ್ ಮತ್ತು ಶ್ರೀಮತಿ ರೇಖಾ ಶಂಕರ್ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಕ.ಲೇ.ವಾ.ದ ಬಗ್ಗೆ ಎರಡು ಮಾತು : ದ.ಕ. ಜಿಲ್ಲೆ ಮತ್ತು ಕಾಸರಗೋಡಿನ ಲೇಖಕರು ಮತ್ತು ಸಾಹಿತ್ಯಾಸಕ್ತರನ್ನು ಒಳಗೊಂಡ ಒಂದು ಸಂಘಟನೆ ಕರಾವಳಿ ಲೇಖಕಿಯರ ವಾಚಕಿಯರ ಸಂಘ. ಇದು ಸ್ವಂತ…
ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಸಂಕೇತವಾದ ಕಲೆ. ಪಂಡಿತರಿಂದ ತೊಡಗಿ ಪಾಮರರವರೆಗೆ ಪ್ರತಿಯೊಬ್ಬರನ್ನೂ ಆಕರ್ಷಿಸಿ, ಅವರೆಲ್ಲರ ಮನಸೂರೆಗೊಂಡು ರಂಜನೆಯನ್ನು ನೀಡಿದ ಕಲಾಪ್ರಕಾರವು ಯಕ್ಷಗಾನದಂತೆ ಬೇರೊಂದಿಲ್ಲ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತಿ ಮನೆಗಳಲ್ಲೂ ಕಲಾವಿದರೋ, ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವ ಕಲಾಭಿಮಾನಿಗಳೋ, ಕಲಾಪೋಷಕರೋ ಇದ್ದೇ ಇರುತ್ತಾರೆ. ಜನಮಾನಸದಲ್ಲಿ ಯಕ್ಷಗಾನ ಎಂಬ ಅನುಪಮವಾದ ಕಲೆಯು ಈ ತೆರನಾಗಿ, ಭದ್ರವಾಗಿ ನೆಲೆಯೂರಿ ವಿಜೃಂಭಿಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಚಾರ. ಇಂತಹ ಶ್ರೇಷ್ಠ ಕಲೆಯಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಕಲಾವಿದರು ಗಿಳಿಯಾರು ಗೋಪಾಲಕೃಷ್ಣ ಪೈ. 16.01.1961ರಂದು ಶ್ರೀ ಕೆ.ರಾಮನಾಥ ಪೈ ಮತ್ತು ಶ್ರೀಮತಿ ರಾಧಾ ಬಾಯ್ ಇವರ ಮಗನಾಗಿ ಗಿಳಿಯಾರು ಗೋಪಾಲಕೃಷ್ಣ ಪೈ ಜನನ. ಪ್ರಾಥಮಿಕ ಶಿಕ್ಷಣವನ್ನು ಪರಮಹಂಸ ಪ್ರೌಢ ಪ್ರಾಥಮಿಕ ಶಾಲೆ ಬನ್ನಾಡಿ, ಹೈಸ್ಕೂಲ್ ಮತ್ತು ಪಿಯುಸಿ ಶಿಕ್ಷಣವನ್ನು ವಿವೇಕ ಪದವಿಪೂರ್ವ ಕಾಲೇಜು ಕೋಟ ಹಾಗೂ ಬಿಕಾಂ ಪದವಿಯನ್ನು ಭಂಡಾರ್ ಕಾರ್ಸ್ ಕಾಲೇಜು ಕುಂದಾಪುರದಲ್ಲಿ ಪಡೆದರು. ಯಕ್ಷಗಾನದ ಗುರುಗಳು:- ಶ್ರೀ ಗುಂಡ್ಮಿ ಸದಾನಂದ…
ಉಡುಪಿ : ಇಲ್ಲಿನ ಯಕ್ಷಗಾನ ಕಲಾರಂಗ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕರ್ಣಾಟಕ ಬ್ಯಾಂಕ್ ಮಂಗಳೂರು ಇವರ ಸಹಯೋಗದೊಂದಿಗೆ ತಾಳಮದ್ದಲೆ ಸಪ್ತಾಹ -2023 ಹಾಗೂ ತಾಳಮದ್ದಲೆ ಪ್ರಶಸ್ತಿ ಪ್ರದಾನ ಸಮಾರಂಭ ಮೇ 21ರಿಂದ 27ರವರೆಗೆ ನಡೆಯಲಿದೆ. ತಾಳಮದ್ದಲೆ ಸಪ್ತಾಹವನ್ನು ದಿನಾಂಕ ಮೇ 21, 2023 ರವಿವಾರದಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರು ಶ್ರೀ ಯಶಪಾಲ್ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಖ್ಯಾತ ವೈದ್ಯರಾದ ಡಾ. ಕಬ್ಯಾಡಿ ಹರಿರಾಮ ಆಚಾರ್ಯ ಉದ್ಘಾಟಿಸಲಿದ್ದಾರೆ. ಉಡುಪಿ ಎ.ಜಿ.ಎಂ. ಕರ್ನಾಟಕ ಬ್ಯಾಂಕಿನ ಶ್ರೀ ಬಿ. ರಾಜಗೋಪಲ್, ಪರ್ಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ದಿಲೀಪ್ ರಾಜ್ ಹೆಗ್ಡೆ ಹಾಗೂ ಪರ್ಕಳ ಪಾಟೇಲ್ ಕ್ಲೋತ್ ಸ್ಟೋರ್ ಮಾಲಕರಾದ ಶ್ರೀ ಗಣೇಶ ಪಾಟೀಲ್ ಇವರುಗಳು ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಮೇ 21 ಮತ್ತು 22ರಂದು ಪರ್ಕಳ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಅನುಕ್ರಮವಾಗಿ ‘ಭೀಷ್ಮಾರ್ಜುನ’ ಮತ್ತು ‘ಅತಿಕಾಯ ಕಾಳಗ’ ಹಾಗೂ 23 ಮತ್ತು 24ರಂದು ಬನ್ನಂಜೆ…
ಮಂಗಳೂರು : ಬೆಳ್ತಂಗಡಿ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಗರದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದೊಂದಿಗೆ ರಿಷಿ ಕಲಾ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಯಕ್ಷಗಾನ ರಂಗ ಪ್ರವೇಶ ‘ರಿಷಿ ಹೆಜ್ಜೆ – ಗೆಜ್ಜೆ ಸಂಭ್ರಮ 2023’ ಕಾರ್ಯಕ್ರಮ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 14-05-2023 ಭಾನುವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಶ್ರೀ ಸುರೇಂದ್ರ ರಾವ್ “ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ಹೆಜ್ಜೆ-ಗೆಜ್ಜೆ ಸಂಭ್ರಮದಲ್ಲಿ ಮುಂದೆ ಉಜ್ವಲ ಭವಿಷ್ಯವುಳ್ಳ ಮಕ್ಕಳು ಯಕ್ಷಗಾನದಲ್ಲಿ ರಂಗ ಪ್ರವೇಶ ಮಾಡುತ್ತಿದ್ದಾರೆ. ಯಕ್ಷಗಾನ ಇಂದು ದ.ಕ. ಜಿಲ್ಲೆಯಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಇದಕ್ಕೆ ಶ್ರೀ ಕ್ಷೇತ್ರ ಕಟೀಲು ಹಾಗೂ ಯಕ್ಷಗಾನ ಪ್ರೋತ್ಸಾಹಕರು ಕಾರಣ” ಎಂದರು. ಆಶೀರ್ವಚನ ನೀಡಿದ ಕಟೀಲು ದೇವಸ್ಥಾನದ ಅರ್ಚಕ ಸದಾನಂದ ವೆಂಕಟೇಶ ಅಸ್ರಣ್ಣರವರು “ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಸಂಗೀತ, ನೃತ್ಯ, ವಾದನ, ವಾಚಿಕ ಕಲೆಗಳಲ್ಲಿ ನಿಪುಣರಾಗಬೇಕೆಂದಿದ್ದಲ್ಲಿ ಯಕ್ಷಗಾನದಲ್ಲಿ ತೊಡಗಿಕೊಳ್ಳಬೇಕು.…
ಉಡುಪಿ : ಹಿರಿಯ ವಿದ್ವಾಂಸರಾದ ಡಾ. ಎನ್.ಟಿ. ಭಟ್ ಮತ್ತು ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ಮುದ್ದಣ ಪುರಸ್ಕಾರ ಸಮಿತಿ ವತಿಯಿಂದ ದಿನಾಂಕ 15-05-2023ರಂದು ಮಂಜೇಶ್ವರ ತಾಲೂಕು ಕುರುಡಪದವಿನಲ್ಲಿರುವ ಕುರಿಯ ಅವರ ಮನೆಯಲ್ಲಿ ‘ಮುದ್ದಣ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಮುದ್ದಣನ ‘ರಾಮಾಶ್ವಮೇಧ’ ಯಕ್ಷಗಾನ ಪ್ರಸಂಗವನ್ನು ಇಂಗ್ಲಿಷ್ ಗೆ ಅನುವಾದಿಸಿದ ಹಿನ್ನೆಲೆಯಲ್ಲಿ ಡಾ. ಎನ್.ಟಿ. ಭಟ್ ಅವರಿಗೆ ಮತ್ತು ‘ಕುಮಾರವಿಜಯ’ ಪ್ರಸಂಗವನ್ನು ಆಡಿಸಬಲ್ಲ ಹಿನ್ನೆಲೆಯಲ್ಲಿ ಗಣಪತಿ ಶಾಸ್ತ್ರಿಯವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದರು. ಪುರಸ್ಕಾರ ಸಮಿತಿಯ ಮುಖ್ಯಸ್ಥ ನಂದಳಿಕೆ ಬಾಲಚಂದ್ರ ರಾವ್ ಪ್ರಶಸ್ತಿ ಪ್ರದಾನ ಮಾಡಿದರು. ಕುರಿಯ ಗೋಪಾಲಕೃಷ್ಣ ಶಾಸ್ತ್ರಿ, ಶ್ಯಾಮಲಾ ಗಣಪತಿ ಶಾಸ್ತ್ರಿ, ದೇವೇಂದ್ರ ಭಾಗವತ್, ಪೋಷಕರಾದ ವಿಟ್ಲ ಹರೀಶ ಜೋಷಿ, ತ್ರಿಲೋಚನ ಶಾಸ್ತ್ರಿ ಉಪಸ್ಥಿತರಿದ್ದರು.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2019, 2020, 2021 ಹಾಗೂ 2022ನೇ ಸಾಲಿನ ʻಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿʼ ಪ್ರಶಸ್ತಿಯನ್ನು ಜಾನಪದ ಹಾಡುಗಳನ್ನು ಹಾಡುವ ಕಲಾವಿದೆಯರ ಸಾಧನೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು. ಓದು-ಬರಹ ಬಾರದ ನಾಡಿನ ಗ್ರಾಮೀಣ ಪ್ರದೇಶದ ಜಾನಪದ ಕಲಾವಿದೆಗೆ ಅವರ ಪ್ರತಿಭೆಯನ್ನು ಪರಿಗಣಿಸಿ ಅದಕ್ಕನುಗುಣವಾಗಿ ಮೊದಲ ಆದ್ಯತೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ʻಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಳ್ಳಿ ದತ್ತಿʼಯನ್ನು ಹಿರಿಯ ಪತ್ರಕರ್ತ ಹಾಗೂ ಲೇಖಕ ಶ್ರೀ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುತ್ತಾರೆ. ದತ್ತಿ ದಾನಿಗಳ ಮೂಲ ಉದ್ದೇಶದಂತೆ ಓದು ಬರಹ ಬಾರದ ಗ್ರಾಮೀಣ ಭಾಗದ ಜನಪದ ಕಲಾವಿದೆಯರನ್ನು ಗುರುತಿಸಿ ಅವರ ಪ್ರತಿಭೆಯನ್ನು ಹಾಗೂ ಅವರ ಸಾಧನೆಗಳನ್ನು ಗಮನಿಸಿ ʼಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿʼ ಪ್ರಶಸ್ತಿ ಆಯ್ಕೆ ಸಮಿತಿ ಮಾಡಿದೆ. ಇದುವರೆಗೂ ಈ ಪ್ರಶಸ್ತಿಯನ್ನು ಜಾನಪದ…
ಕುರುಡಪದವು : ಕುರಿಯ ವಿಠಲ ಶಾಸ್ತ್ರಿ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ಕುರುಡಪದವು ಇದರ ವತಿಯಿಂದ ಪ್ರತಿ ವರ್ಷವೂ ಜರಗುವಂತೆ ದಿ. ಕುರಿಯ ವಿಠಲ ಶಾಸ್ತ್ರಿ, ದಿ. ನೆಡ್ಲೆ ನರಸಿಂಹ ಭಟ್ ಮತ್ತು ದಿ. ಕರುವೋಳು ದೇರಣ್ಣ ಶೆಟ್ಟಿ ಸಂಸ್ಮರಣ ಕಾರ್ಯಕ್ರಮವು ಗಾನಲಹರಿ, ಸನ್ಮಾನ, ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಮೇ 13ರಂದು ಕುರುಡಪದವು ಪ್ರೌಢಶಾಲೆಯಲ್ಲಿ ಜರಗಿತು. ಸಂಜೆ ಮೂರು ಗಂಟೆಯಿಂದ ಬೊಟ್ಟಿಕೆರೆ ಪರೀಕ್ಷಿತ್ ಪೂಂಜ ಮತ್ತು ಬಳಗದವರಿಂದ ಗಾನ ಲಹರಿ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಬಳಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಂಗಳೂರು ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಯಕ್ಷಗಾನ ಕಲಾವಿದರಾದ ಶ್ರೀಧರ ಐತಾಳ ಪಣಂಬೂರು ಇವರಿಗೆ ಕುರಿಯ ಪ್ರಶಸ್ತಿಯನ್ನೂ, ಬಡಗಿನ ಖ್ಯಾತ ಭಾಗವತರಾದ ರಾಘವೇಂದ್ರ ಮಯ್ಯರಿಗೆ ನೆಡ್ಲೆ ಪ್ರಶಸ್ತಿಯನ್ನೂ, ಸೂರಿಕುಮೇರಿ ಗೋವಿಂದ ಭಟ್ಟರಿಗೆ ಕರುವೋಳು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶ್ರೀದೇವಿ ಪ್ರೌಢಶಾಲೆ ಪುಣಚ ಇದರ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಂಗಮ್ಮ ಹರಿಕೃಷ್ಣ ಶಾಸ್ತ್ರಿ ಸಂಸ್ಮರಣ…
ಬೆಂಗಳೂರು : ಲೇಖಕ ಗುರುಪ್ರಸಾದ್ ಗಂಟಲಗೆರೆಯವರ ‘ಟ್ರಂಕು ತಟ್ಟೆ’ (ಹಾಸ್ಟೆಲ್ ಅನುಭವ ಕಥನ) ಪುಸ್ತಕ ಬಿಡುಗಡೆ ಸಮಾರಂಭ ದಿನಾಂಕ 23-05-2023ರಂದು ಬೆಂಗಳೂರಿನ ಜಂಗಮ ಕಲೆಕ್ಟಿವ್ ನಲ್ಲಿ ನಡೆಯಲಿದೆ. ಪತ್ರಕರ್ತೆ ಹಾಗೂ ಸಿನೆಮಾ ನಿರ್ದೇಶಕಿಯಾದ ಡಿ. ಸುಮನಾ ಕಿತ್ತೂರು ಪುಸ್ತಕ ಬಿಡುಗಡೆಗೊಳಿಸಲಿದ್ದು ಲೇಖಕಿ ಹಾಗೂ ಹೋರಾಟಗಾರ್ತಿಯಾದ ದು. ಸರಸ್ವತಿ ಅಧ್ಯಕ್ಷತೆ ವಹಿಸಲಿರುವರು. ಅಧ್ಯಾಪಕರು ಮತ್ತು ಲೇಖಕರಾದ ವಿ. ಎಲ್. ನರಸಿಂಹ ಮೂರ್ತಿ ಪುಸ್ತಕ ಪರಿಚಯ ಮಾಡಲಿದ್ದಾರೆ. ಲೇಖಕರಾದ ಗುರುಪ್ರಸಾದ್ ಕಂಟಲಗೆರೆ, ಚೈತನ್ಯ ಪ್ರಕಾಶನದ ರಂಗಧಾಮಯ್ಯ ಜೆ.ಸಿ. ಮತ್ತು ಜಂಗಮ ಬಳಗ ಉಪಸ್ಥಿತಲಿರುವರು. ಈ ಕಾರ್ಯಕ್ರಮವನ್ನು ಜಂಗಮ ಕಲೆಕ್ಟಿವ್ ಮತ್ತು ಬೀ ಕಲ್ಚರ್ ತಂಡಗಳು ಜಂಟಿಯಾಗಿ ಆಯೋಜಿಸುತ್ತಿದ್ದಾರೆ.
ಮೈಸೂರು: ನಟನ ಮೈಸೂರು ಇದರ ರೆಪರ್ಟರಿ ತಂಡದ ಪ್ರಯೋಗ ನಾಟಕ ಕಣಿವೆಯ ಹಾಡು 21-05-2023ರ ಸಂಜೆ ನಟನ ರಂಗ ಶಾಲೆಯಲ್ಲಿ ನಡೆಯಲಿದೆ. ಅತೊಲ್ ಫ್ಯೂಗಾರ್ಡ್ ರಚಿಸಿರುವ ಈ ನಾಟಕವನ್ನು ಡಾ. ಮೀರಾ ಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೇಘ ಸಮೀರ ಮತ್ತು ದಿಶಾ ರಮೇಶ್ ನಟಿಸುವ ನಾಟಕಕ್ಕೆ ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಸಂಗೀತ ನೀಡಲಿದ್ದು, ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ನಾಡಿನ ಹೆಸರಾಂತ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರದ್ದು. ನಾಟಕದ ಕುರಿತು: ಮೂಲತಃ ದಕ್ಷಿಣ ಆಫ್ರಿಕಾ ನೆಲದ ಕತೆಯಿದು. ಆದರೆ ಎಲ್ಲ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ ಸಾಧ್ಯತೆ ಇದೆ. ಅಂತಹ ಪ್ರಯತ್ನವಿದು. ಕಣಿವೆಯ ಹಾಡು ಕಣಿವೆ ದಾಟುವ, ಕಣಿವೆಯೊಳಗಿನ ಬದುಕು ತನ್ನ ಹಾಡು ಮುಂದುವರಿಸುವ ಸಂಘರ್ಷದ ಕತೆ ಇದು. ತಮ್ಮದೇ ನೆಲದಲ್ಲಿ ಪರಕೀಯರಾಗುತ್ತ, ಗುಲಾಮರಾಗುತ್ತ ಹೋಗುತ್ತಿರುವ ಮೂಲನಿವಾಸಿಗಳ ಬದುಕನ್ನೂ, ಪುಟ್ಟ ಬೀಜಗಳು ದೊಡ್ಡದಾಗಿ ಕಾಯಿ ಬಿಡುವ ನೆಲದ ಪವಾಡಗಳನ್ನೂ,…
ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ‘ರಮಣ ಮಹರ್ಷಿ ಕಲಿಕಾಕೇಂದ್ರ’ದಲ್ಲಿ ನೃತ್ಯಗುರುಗಳಾಗಿ ಹಾಗೂ ಕಾರ್ಯಕ್ರಮ ನಿರ್ವಾಹಕರಾಗಿರುವ ವಿದ್ವಾನ್ ಶ್ರೀ ಉಜ್ವಲ್ ಜಗದೀಶ್ ಬೆಂಗಳೂರಿನ ಪ್ರಖ್ಯಾತ ನೃತ್ಯಪಟು, ಯುವ ಆಚಾರ್ಯ, ನೃತ್ಯ ಸಂಯೋಜಕ ಹಾಗೂ ಉತ್ತಮ ಸಂಶೋಧಕರು. ಇವರ ನುರಿತ ಗರಡಿಯಲ್ಲಿ ರೂಹುಗೊಂಡಿರುವ ಕಲಾಶಿಲ್ಪ ಕು. ಅಂತರ ಶ್ರೀರಾಮ್ ಬಹುಮುಖ ಪ್ರತಿಭೆಯ ನೃತ್ಯಕಲಾವಿದೆ. ಸೃಜನಶೀಲ ಕಲಾಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಕು. ಅಂತರ, ಗುರು ಉಜ್ವಲ್ ಬಳಿ ಹಲವಾರು ವರ್ಷಗಳ ಬದ್ಧತೆಯ ನೃತ್ಯಾಭ್ಯಾಸ ಮಾಡಿದ ನಂತರ ಆತ್ಮವಿಶ್ವಾಸದಿಂದ ರಂಗಾರೋಹಣ ಮಾಡಿ ತನ್ನ ಏಕವ್ಯಕ್ತಿ ನೃತ್ಯಪ್ರದರ್ಶನ ನೀಡಲು ಸನ್ನದ್ಧಳಾಗಿದ್ದಾಳೆ . ಇದೇ ತಿಂಗಳ 21 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ‘ಅಂತರಂಗಪ್ರವೇಶ’ – ಪ್ರಪ್ರಥಮ ಏಕವ್ಯಕ್ತಿ ಭರತನಾಟ್ಯವನ್ನು ‘ವಿಶ್ವ ತಾಯಂದಿರ ದಿನ’ಕ್ಕಾಗಿ ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ಸಮರ್ಪಿಸಲಿದ್ದಾಳೆ. ಅವಳ ಕಲಾಸೊಬಗನ್ನು ಕಣ್ಮನ ತುಂಬಿಕೊಳ್ಳಲು ಎಲ್ಲರಿಗೂ ಆದರದ ಸ್ವಾಗತ. ಶ್ರೀಮತಿ ಉಮಾ ಶ್ರೀರಾಮ್ ಹಾಗೂ ಶ್ರೀರಾಮ್ ರವರ ಪ್ರೀತಿಯ ಪುತ್ರಿ ಅಂತರ ಬಾಲಪ್ರತಿಭೆ. ಮೂರನೆಯ…