ಮೈಸೂರು : ಕುಮಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ (ರಿ.) ಮೈಸೂರು ಪ್ರಸ್ತುತ ಪಡಿಸುವ 32ನೇ ‘ಅಂತರರಾಷ್ಟ್ರೀಯ ನಿರಂತರ ಕಲೆಮನೆ ಫೆಸ್ಟಿವಲ್’ ಕಾರ್ಯಕ್ರಮವು ದಿನಾಂಕ 07-01-2024ರಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿನ ಕಲೆಮನೆ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ವಿಶೇಷ ಆಹ್ವಾನಿತರಾದ ಯು.ಸಿ.ಎಫ್.ಎ., ಯು.ಒ.ಎಂ. ಸಂಗೀತ ಬೋಧನಾ ವಿಭಾಗದ ವಿದುಷಿ ಶ್ರೀಮತಿ ಆರ್.ಕೆ. ಚಂದ್ರಿಕಾ, ಶ್ರೀ ಸದ್ಗುರು ಸಂಗೀತ ಶಾಲೆಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿದುಷಿ ವಿ. ಮಹಾಲಕ್ಷ್ಮಿ, ಯು.ಸಿ.ಎಫ್.ಎ., ಯು.ಒ.ಎಂ. ಸಂಗೀತ ಬೋಧನಾ ವಿಭಾಗದ ಡಾ.ಎಸ್. ಗೀತಾ, ಮೈಸೂರಿನ ಕೆ.ಎಸ್.ಜಿ.ಎಚ್. ಸಂಗೀತ ವಿಶ್ವವಿದ್ಯಾಲಯದ ಬೋಧನಾ ವಿಭಾಗದ ಕಲಾರತ್ನ ವಿದ್ವಾನ್ ರಾವ್ ಆರ್. ಶರತ್, ಶಾಂತಲಾ ಅಕಾಡೆಮಿ ಆಫ್ ಮ್ಯೂಸಿಕ್ & ಡ್ಯಾನ್ಸ್ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿದುಷಿ ಶಾಂತಲಾ ವಟ್ಟಂ, ಖ್ಯಾತ ನೃತ್ಯ ಗುರು ಹಾಗೂ ಮೈಸೂರು ಆರ್ಟ್ ಗ್ಯಾಲರಿಯ ಕಾರ್ಯದರ್ಶಿಯಾದ ಡಾ. ಜಮುನಾರಾಣಿ ಮಿರ್ಲೆ, ಮಂಡ್ಯ ಮದ್ದೂರಿನ ಶ್ರೀ ನಂದಿಕೇಶ್ವರ ಭರತನಾಟ್ಯ ಕಲಾಶಾಲೆಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿದುಷಿ ಶ್ರೀಮತಿ ಶೈಲಾ ಕೆ.ಎಸ್., ನಂಜನಗೂಡು ನಟರಾಜ ನಾಟ್ಯ ಶಾಲೆಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿದುಷಿ ಶ್ರೀಮತಿ ರಮ್ಯ ಎಸ್. ರಾಘವೇಂದ್ರ, ಮನುವಿದ್ಯಾ ಕಲ್ಚರಲ್ ಫೌಂಡೇಷನ್ ಇದರ ನಿರ್ದೇಶಕರಾದ ವಿದುಷಿ ಶ್ರೀಮತಿ ನೇತ್ರಾ ಎಸ್., ಮೈಸೂರು ಮಂಡ್ಯದ ಚಿದಂಬರನಟೇಶ ನಾಟ್ಯ ಶಾಲೆಯ ಸಂಸ್ಥಾಪಕರು ಮತ್ತು ನಿರ್ದೇಶಕರಾದ ವಿದುಷಿ ಶ್ರೀಮತಿ ಸುನೀತಾ ನಂದಕುಮಾರ್ ಇವರುಗಳು ಭಾಗವಹಿಸಲಿರುವರು.
ಸಂಜೆಯ ಪ್ರದರ್ಶನಗಳಲ್ಲಿ ಹೈದರಾಬಾದಿನ ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಗಾಯಕಿಯಾದ ಶ್ರೀಮತಿ ವಿದುಷಿ ವೈಷ್ಣವಿ ವಿಷ್ಣುಭಟ್ಟ ಮತ್ತು ಬೆಂಗಳೂರಿನ ಕರ್ನಾಟಕ ಗಾಯಕ, ಸಂಗೀತ ಚಿಕಿತ್ಸಕ ಮತ್ತು ಜೀವನ ತರಬೇತುದಾರ ಶ್ರೀಮತಿ ವಿದುಷಿ ವಿನಯಾ ಕಾರ್ತಿಕ್ ರಾವ್ ಇವರಿಂದ ಸಂಗೀತ ಕಛೇರಿ ಮತ್ತು ಜುಗಲ್ಬಂದಿ ನಡೆಯಲಿದೆ. ಗುರು ಶ್ರೀಮತಿ ರಮ್ಯ ರಾಮ್ ನಾರಾಯಣ, ಕುಮಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರಿನ ಕರ್ನಾಟಕ ಕಲಾಶ್ರೀ ಡಾ. ಕೆ. ಕುಮಾರ್, ಯು.ಎಸ್.ಎ.ಯ ಶಕ್ತಿ ಸ್ಕೂಲ್ ಆಫ್ ಭರತನಾಟ್ಯಂ ಇದರ ಸಂಸ್ಥಾಪಕರು ಮತ್ತು ನಿರ್ದೇಶಕರಾದ ಗುರು ಶ್ರೀಮತಿ ವಿಜಿ ಪ್ರಕಾಶ್ ಇವರ ಶಿಷ್ಯೆಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಕುಮಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಇದರ ಅಧ್ಯಕ್ಷರಾದ ಡಾ. ಜಿ.ಮಾಲತಿ, ಸಂಸ್ಥಾಪಕ ಮತ್ತು ಕಾರ್ಯದರ್ಶಿಯಾದ ಪ್ರೊ. ಡಾ. ಕೆ. ಕುಮಾರ್, ಖಜಾಂಚಿಯಾದ ವಿದುಷಿ ಕೆ.ಎಂ. ಲೇಖಾ ಮತ್ತು ಜಂಟಿ ಕಾರ್ಯದರ್ಶಿ ವಿದುಷಿ ಕೆ.ಎಂ. ನಿಧಿ ಇವರುಗಳು ಎಲ್ಲರನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದಾರೆ.