Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ಬೇಂದ್ರೆಯವರ ‘ನಾಕುತಂತಿ’ ಕವನ ಸಂಕಲನಕ್ಕೆ ‘ಜ್ಞಾನಪೀಠ’ ಪ್ರಶಸ್ತಿ ದೊರೆತ ಐವತ್ತನೇ ವರ್ಷವಿದು. ಹೀಗಾಗಿ ನಾಕುತಂತಿ ಚಿನ್ನದ ಹಬ್ಬದ ವರ್ಷವಿದು. ನಾಕುತಂತಿ ಪ್ರಕಟವಾದ ಅರವತ್ತನೇ ವರ್ಷವಿದು. ಹೀಗಾಗಿ ಬೇಂದ್ರೆ ಸಾಹಿತ್ಯ ಪ್ರೀಯರಿಗೆ ಹಾಗೂ ಧಾರವಾಡಕ್ಕೆ ಮತ್ತು ಸಾಧನಕೇರಿ ಬೀದಿಗೆ ಸಂಭ್ರಮದ ಕಾಲವಿದು. ಬೇಂದ್ರೆ ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡು ಅದರೊಂದಿಗೆ ಅನುಸಂಧಾನ ಮಾಡಿದವರು ‘ಕನ್ನಡದ ಕೀರ್ತಿ’ ಕೀರ್ತಿನಾಥ ಕುರ್ತಕೋಟಿ ಅವರು. ಅವರ ಶಾಲಾ ಜೀವನದಿಂದ ಬೇಂದ್ರೆಯವರನ್ನು ಓದಲು ಬರೆಯಲು ಪ್ರಾರಂಭಿಸಿದವರು. ತಮ್ಮ ಜೀವನದ ಕೊನೆಯ ಕ್ಷಣದವರೆಗೆ ಅದನ್ನು ಒಂದು ನೋಂಪಿಯಂತೆ ಪರಿಪಾಲಿಸಿಕೊಂಡು ಬಂದರು. ‘ಬೇಂದ್ರೆಯವರಿಗೆ ಕಾವ್ಯ ಉಸಿರಾಟದಷ್ಟು ಸಹಜವಾಗಿತ್ತು. ಅದೇ ಕುರ್ತಕೋಟಿಯವರಿಗೆ ಬೇಂದ್ರೆ ಸಾಹಿತ್ಯದ ವಿಮರ್ಶೆ ಉಸಿರಾಟದಷ್ಟೇ ಸಹಜವಾಗಿತ್ತು’. ಈ ನಾಡಿನಲ್ಲಿ ಬೇಂದ್ರೆಯವರನ್ನು ಕುರಿತು ಬರೆದ ಮತ್ತು ಮಾತನಾಡಿದ ವ್ಯಕ್ತಿಗಳಲ್ಲಿ ಶ್ರೇಷ್ಠರು ಕುರ್ತಕೋಟಿಯವರು. ಇವರ ಮಾತು ಮತ್ತು ಕೃತಿಯಲ್ಲಿ ಒಂದು ಚುಂಬಕ ಶಕ್ತಿ ಇದೆ. ಅದು ವಾಚಕರನ್ನು ಹಾಗೂ ಶ್ರೋತೃಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಅದು ಅನೇಕ ಜನರನ್ನು ಬೇಂದ್ರೆ ಸಾಹಿತ್ಯದ ಅಭ್ಯಾಸಿಗಳನ್ನಾಗಿ…
ಬೆಂಗಳೂರು : ಕನ್ನಡ ಗೆಳೆಯರ ಬಳಗ ಮತ್ತು ಕರ್ಣಾಟಕ ವಿಕಾಸ ರಂಗ ಇವುಗಳ ವತಿಯಿಂದ ಕನ್ನಡ ಬಾವುಟ ಹರಿಸಿದವರು ನೆನಪಿನ ಮಾಲೆ 26 ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 29 ಜುಲೈ 2025ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರು ಬಸವನಗುಡಿ ಬಿ.ಎಂ.ಶ್ರೀ ಪ್ರತಿಮೆ ಎದುರು ಆಯೋಜಿಸಲಾಗಿದೆ. ಖ್ಯಾತ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಇವರು ಡಾ. ಎಸ್.ಕೆ. ಕರೀಂಖಾನ್ ಇವರ ಬಗ್ಗೆ ಉಪನ್ಯಾಸ ನೀಡಲಿದ್ದು, ರಾ.ನಂ. ಚಂದ್ರಶೇಖರ ಇವರು ಆಶಯ ನುಡಿಗಳನ್ನಾಡಲಿದ್ದಾರೆ. ವ.ಚ. ಚೆನ್ನೇಗೌಡ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿ ತಿಂಗಳೂ ಬಿ.ಎಂ.ಶ್ರೀ ಪ್ರತಿಮೆ ಮುಂಭಾಗ ನಾಡು-ನುಡಿಗೆ ದುಡಿದ ಹಿರಿಯರೊಬ್ಬರನ್ನು ಸ್ಮರಿಸಲಾಗುತ್ತದೆ.
ಮಂಗಳೂರು : ಸಮತಾ ಮಹಿಳಾ ಬಳಗದಿಂದ ಜುಲೈ ತಿಂಗಳ ಯೋಜನೆಯ ಅಂಗವಾಗಿ ಭರತನಾಟ್ಯ ಕಲಾವಿದೆ ತನ್ವಿರಾವ್ ಅವರ ನೃತ್ಯ ಕಾರ್ಯಕ್ರಮ ದಿನಾಂಕ 15 ಜುಲೈ 2025ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು. ಬಳಗದ ಅಧ್ಯಕ್ಷೆ ಕಾತ್ಯಾಯನಿ ಭಿಡೆಯವರು ಅಧ್ಯಕ್ಷತೆ ವಹಿಸಿದ್ದರು. ನೃತ್ಯದ ಬಳಿಕ ತನ್ವಿ ರಾವ್ ಇವರನ್ನು ಬಳಗದ ಪರವಾಗಿ ಸಮ್ಮಾನಿಸಲಾಯಿತು. ಈ ಸಂದರ್ಭ ತಿಂಡಿ ತಯಾರಿಯ ಸ್ಪರ್ಧೆಯಲ್ಲಿ ವಿಜೇತರಾದ ಭಾಗ್ಯ ಉಡುಪ, ಶೋಭಾ ಪೇಜಾವರ, ಸುಮಂಗಲಾ ಬಾಗೋಡಿ ಮತ್ತು ಸುಧಾ ರಾಜೇಂದ್ರ ಇವರಿಗೆ ಪಿ. ಶೋಭಾ ರಾವ್ ಪ್ರಾಯೋಜಿತ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶೋಭಾ ಜಗದೀಶ್, ಮಿತ್ರಾರಾವ್, ವಿಜಯಲಕ್ಷ್ಮಿ ರಾವ್, ವನಿತಾ ಎಲ್ಲೂರು, ಸುಮತಿ ಶೆಗ್ರಿತ್ತಾಯ, ಸಾವಿತ್ರಿ ಬಿ. ರಾವ್, ವಿಶಾಲಾ – ಕೇಶವ ಭಟ್, ಸರಳಾ ರಾವ್, ರೂಪಲಕ್ಷ್ಮೀ ಹರೀಶ್, ರಮ್ಯಾ ರಾವ್, ಹೇಮಾ ಸತೀಶ್ಚಂದ್ರ, ಬಿ. ಎಚ್. ಹರಿಪ್ರಸಾದ ರಾವ್, ಸ್ವರ್ಣ ಗೌರಿ, ವಿಜಯಲಕ್ಷ್ಮೀ ಭಟ್ ಉಳುವಾನ, ಹೇಮಾ ದಿನೇಶ್, ರಮಾಮಣಿ ಭಟ್ ಉಪಸ್ಥಿತರಿದ್ದರು. ಅನುಪಮಾ ಅನಂತಮೂರ್ತಿ…
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 133’ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 28 ಜುಲೈ 2025ರಂದು ಸಂಜೆ 6-00 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಮತಿ ಪೂಜಾ ಉಣ್ಣಿ ಇವರ ಶಿಷ್ಯೆ ದುಬೈಯ ಕುಮಾರಿ ನೀತಾರ ನಾಯರ್ ಇವರು ಭರತನಾಟ್ಯ ಪ್ರದರ್ಶನ ನೀಡಲಿದ್ದು, ಪುತ್ತೂರಿನ ಶ್ರೀಮತಿ ರೂಪಲೇಖ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ ಇವರ ಜಂಟಿ ಆಶ್ರಯದಲ್ಲಿ 110ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ವನ್ನು ದಿನಾಂಕ 26 ಜುಲೈ 2025ರಂದು ಪೂರ್ವಾಹ್ನ 11-00 ಗಂಟೆಗೆ ಮಂಗಳೂರಿನ ಪಾಂಡೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಪಾಂಡೇಶ್ವರ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಚ್.ಕೆ. ಶಾಲಿನಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಶಿಕ್ಷಕಿ ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳಾದೇವಿ ಮತ್ತು ನಿವೃತ್ತ ಪ್ರಶಸ್ತಿ ವಿಜೇತ ಶಿಕ್ಷಕಿ ಶ್ರೀಮತಿ ಸುಧಾ ನಾಗೇಶ ಇವರುಗಳು ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪನಾ ಸಂಪಾದಕಿಯಾದ ಡಾ. ಮಾಲತಿ ಶೆಟ್ಟಿ ಮಾಣೂರು ತಿಳಿಸಿದ್ದಾರೆ.
ಬೆಂಗಳೂರು : ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ‘ಕುಂದಾಪ್ರ ಕನ್ನಡ ಹಬ್ಬ 2025’ ಕಾರ್ಯಕ್ರಮವನ್ನು ದಿನಾಂಕ 26 ಮತ್ತು 27 ಜುಲೈ 2025ರಂದು ಬೆಂಗಳೂರಿನ ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ ಇಲ್ಲಿರುವ ನಂದಿ ಲಿಂಕ್ ಗ್ರೌಂಡ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ‘ಕುಂದಾಪ್ರ ಕನ್ನಡ ಹಬ್ಬ-2025’ ಇದು ಆರನೇ ಕುಂದಾಪ್ರ ಕನ್ನಡ ಹಬ್ಬವಾಗಿದ್ದು, ಈ ಸಲ ಇದನ್ನು ಶನಿವಾರ ಸಂಜೆ 5-00 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ‘ಕುಂದಾಪ್ರ ಕನ್ನಡ ಅಧ್ಯಯನ ಪೀಠ’ವನ್ನು ಸಿ.ಎಂ., ಸಭಾಪತಿ ಯು.ಟಿ. ಖಾದರ್, ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ ಮುಂತಾದವರು ಜೊತೆಯಾಗಿ ಲೋಕಾರ್ಪಣೆ ಮಾಡಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕುಂದಾಪ್ರ ಕನ್ನಡ ಹಬ್ಬದ ಸಂದರ್ಭದಲ್ಲೇ ಈ ಪೀಠಕ್ಕಾಗಿ ಮನವಿ ಮಾಡಲಾಗಿತ್ತು. ಅದರಂತೆ ಸರ್ಕಾರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಂದಾಪ್ರ ಕನ್ನಡ ಪೀಠ ಸ್ಥಾಪಿಸಿ ಅನುದಾನ ಕೂಡ…
ಬೆಂಗಳೂರು : ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ಇದರ ವತಿಯಿಂದ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ. ಡಾ. ಎಸ್.ಎಲ್. ಭೈರಪ್ಪ, ನಾ. ಡಿಸೋಜ, ಕುಂ. ವೀರಭದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ, ಕೌಂಡಿನ್ಯ, ಎಂ.ಕೆ. ಇಂದಿರಾ, ಡಾ. ಎಸ್. ನಾರಾಯಣ್ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ, ಚಲನಚಿತ್ರ, ಕಿರುತೆರೆ, ಸಮಾಜಸೇವೆ, ಯಕ್ಷಗಾನ, ಯೋಗ, ಪತ್ರಕರ್ತರು ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ದಿನಾಂಕ 08 ಆಗಸ್ಟ್ 2025ರ ಒಳಗಾಗಿ ತಮ್ಮ ಫೋಟೋ ಮತ್ತು ಬಯೋಡೆಟಾವನ್ನು 8861495610 ನಂಬರ್ ಗೆ ವಾಟ್ಸ್ ಆ್ಯಪ್ ಮಾಡಬಹುದು.
ಕುಂದಾಪುರ : ಕನ್ನಡ ಜಾನಪದ ಪರಿಷತ್ ಉಡುಪಿ ಮತ್ತು ಕುಂದಾಪುರ ಘಟಕದ ವತಿಯಿಂದ ‘ವಿಕಾಸಕ್ಕಾಗಿ ಜಾನಪದ’ ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಂಡ್ಲೂರಿನ ರಾಮ್ ಸನ್ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಕುಂದಾಪುರ ಕನ್ನಡದ ಗಾದೆ ಮತ್ತು ಒಗಟುಗಳ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ದಿನಾಂಕ 21 ಜುಲೈ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾನಪದ ಪರಿಷತ್ ಉಡುಪಿ ಘಟಕದ ಅಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಇವರು ಮಾತನಾಡಿ “ಹಳ್ಳಿಯ ಶ್ರಮದ ಬದುಕು ಜಾನಪದ ಸಾಹಿತ್ಯದ ಮೂಲ. ಜೀವನಾನುಭವದ ವಿಶ್ವವಿದ್ಯಾನಿಲಯ. ಇಲ್ಲಿ ಬದುಕಿನ ಮೂಲ ಶಿಕ್ಷಣದ ಪಾಠವನ್ನು ಒಳಗೊಂಡ, ಅರಿವನ್ನು ವಿಸ್ತರಿಸುವ ಜೀವನಾನುಭವದ ಅಮೃತವಿದೆ. ನೋವು ನಲಿವುಗಳನ್ನು ಒಳಗೊಂಡಿರುವ ಜನಪದ ನಮ್ಮೆಲ್ಲರ ಬದುಕಿಗೆ ಹತ್ತಿರವಾದ ಶ್ರೀಮಂತ ಸಮೃದ್ಧ ಸಾಹಿತ್ಯ, ಈ ಜನಪದ ಸಾಹಿತ್ಯವನ್ನು ಜತನದಿಂದ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ” ಎಂದು ಹೇಳಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಸಾಮ್ರಾಟ್…
ಹೆಗ್ಗೋಡು : ಕಿನ್ನರ ಮೇಳ ತುಮರಿ ಇವರ ವತಿಯಿಂದ ಕಿನ್ನರ ಮೇಳ ರಂಗಶಾಲೆ 2025-26ನೇ ಸಾಲಿನ ರಂಗಶಿಕ್ಷಣ ತರಗತಿಗಳಿಗೆ ಅಸ್ತಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಂಗಶಿಕ್ಷಣದ ಅವಧಿಯು ಆಗಸ್ಟ್ 2025ರಿಂದ ಮಾರ್ಚ್ 2026ರವರೆಗೆ ಎಂಟು ತಿಂಗಳುಗಳ ನಡೆಯಲಿದ್ದು, ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗಾಗಿ 9448686353 / 9448664022 / 8447551489 ಸಂಖ್ಯೆಯನ್ನು ಸಂಪರ್ಕಿಸಿರಿ.
ಬಂಟ್ವಾಳ : ಕಲ್ಲಡ್ಕ ಕೊಳಕೀರು ನಿವಾಸಿ, ಹಿರಿಯ ರಂಗನಟ ಚಿ. ರಮೇಶ್ ಕಲ್ಲಡ್ಕ ಇವರು ದಿನಾಂಕ 23 ಜುಲೈ 2025ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಇವರಿಗೆ 68 ವರ್ಷ ವಯಸ್ಸಾಗಿತ್ತು. ಬಾಲನಟನಾಗಿ ರಂಗಭೂಮಿ ಪ್ರವೇಶಿಸಿದ ಇವರು ಬಳಿಕ ವೃತ್ತಿ ರಂಗಭೂಮಿ ಕಲಾವಿದನಾಗಿ ನಾಲ್ಕೂವರೆ ದಶಕಗಳಿಂದ ಸೇವೆ ಸಲ್ಲಿಸಿದ್ದು, ಕೆ.ಎನ್. ಟೇಲರ್ ಸೇರಿದಂತೆ ತುಳು ರಂಗಭೂಮಿಯ ಹಿರಿಯ ರಂಗ ನಿರ್ದೇಶಕರ ಒಡನಾಟವನ್ನು ಹೊಂದಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಕಲ್ಲಡ್ಕ ‘ಮೈತ್ರಿ ಕಲಾವಿದರು’, ‘ರಚಿಸು ಕಲ್ಲಡ್ಕ’ ತಂಡವನ್ನು ಕಟ್ಟಿದ ಇವರು 25 ವರ್ಷಗಳಿಂದ ಕಲಾಸಂಗಮ ತಂಡದಲ್ಲಿ ಹಿರಿಯ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದರು. ತುಳು ರಂಗಭೂಮಿಯಲ್ಲಿ ದಾಖಲೆ ಸೃಷ್ಟಿಸಿದ್ದ ‘ಶಿವದೂತೆ ಗುಳಿಗೆ’ ನಾಟಕದ ಭೀಮರಾಯನ ಪಾತ್ರ ನಿರ್ವಹಿಸಿದ್ದರು. 2ನೇ ಅವಧಿಯಲ್ಲಿ ‘ಒರಿಯರ್ದೊರಿ ಅಸಲ್’ ನಾಟಕದಲ್ಲಿ ‘ಮಿಲಿಟ್ರಿ ಕೇಶವಣ್ಣನ ಪಾತ್ರ ನಿರ್ವಹಿಸಿದ್ದರು. ಒಟ್ಟು 75ಕ್ಕೂ ಅಧಿಕ ನಾಟಕಗಳ ಸಾವಿರಾರು ಪ್ರದರ್ಶನಗಳಲ್ಲಿ ರಮೇಶ್ ಕಲ್ಲಡ್ಕ ಪಾತ್ರ ನಿರ್ವಹಿಸಿದ್ದು, ಕರಾವಳಿ ಜಿಲ್ಲೆಗಳ ಜತೆಗೆ ದೇಶ-ವಿದೇಶಗಳಲ್ಲಿ ತಮ್ಮ ತಂಡದ ಜತೆ ತೆರಳಿ ಅಭಿನಯಿಸಿದ್ದಾರೆ.…