ಉಡುಪಿ : ಭೂಮಿಕಾ (ರಿ.) ಹಾರಾಡಿ ಇದರ ವತಿಯಿಂದ ಹಾಗೂ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ‘ಬಣ್ಣ ನಾಟಕೋತ್ಸವ’ವನ್ನು ದಿನಾಂಕ 09 ಏಪ್ರಿಲ್ 2025ರಿಂದ 13 ಏಪ್ರಿಲ್ 2025ರವರೆಗೆ ಪ್ರತಿದಿನ ಸಂಜೆ ಗಂಟೆ 6-45ಕ್ಕೆ ಬ್ರಹ್ಮಾವರದ ಎಸ್.ಎಮ್.ಎಸ್. ಮಕ್ಕಳ ಮಂಟಪದಲ್ಲಿ ಆಯೋಜಿಸಲಾಗಿದೆ.
ದಿನಾಂಕ 09 ಏಪ್ರಿಲ್ 2025ರಂದು ಗಣೇಶ್ ಮಂದಾರ್ತಿ ಇವರ ನಿರ್ದೇಶನದಲ್ಲಿ ರಂಗಾಯಣ ಮೈಸೂರು ತಂಡದವರಿಂದ ‘ಮೈ ಫ್ಯಾಮಿಲಿ’, ದಿನಾಂಕ 10 ಏಪ್ರಿಲ್ 2025ರಂದು ಶ್ರವಣ್ ಹೆಗ್ಗೋಡು ಇವರ ನಿರ್ದೇಶನದಲ್ಲಿ ರಂಗಾಯಣ ಮೈಸೂರು ತಂಡದವರಿಂದ ‘ರೆಕ್ಸ್ ಅವರ್ಸ್’, ದಿನಾಂಕ 11 ಏಪ್ರಿಲ್ 2025ರಂದು ಡಾ. ಸಾಸ್ವೇಹಳ್ಳಿ ಸತೀಶ್ ಇವರ ನಿರ್ದೇಶನದಲ್ಲಿ ಹೊಂಗಿರಣ ಶಿವಮೊಗ್ಗ ತಂಡದವರಿಂದ’ ಮಹಿಳಾ ಭಾರತ’, ದಿನಾಂಕ 12 ಏಪ್ರಿಲ್ 2025ರಂದು ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ಇವರ ನಿರ್ದೇಶನದಲ್ಲಿ ಭೂಮಿಕಾ (ರಿ.) ಹಾರಾಡಿ ತಂಡದವರಿಂದ ‘ಬರ್ಬರೀಕ’, ದಿನಾಂಕ 13 ಏಪ್ರಿಲ್ 2025ರಂದು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದವರಿಂದ ‘ಈದಿ’ ನಾಟಕಗಳು ಪ್ರದರ್ಶನಗೊಳ್ಳಲಿದೆ.