Subscribe to Updates

    Get the latest creative news from FooBar about art, design and business.

    What's Hot

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ‘ಭಜನ ರಂಗ್’ ಕಾರ್ಯಕ್ರಮ
    Music

    ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ‘ಭಜನ ರಂಗ್’ ಕಾರ್ಯಕ್ರಮ

    January 31, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಣಿಪಾಲ : ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ದಿನಾಂಕ 26-11-2023 ಮತ್ತು 27-11-2023ರಂದು 76ನೇ ವಾರ್ಷಿಕ ಭಜನ ಏಕಾಹ ನಡೆಯಿತು. ಮಹಾರಾಷ್ಟ್ರ ಸಿಂಧುದುರ್ಗಾ ಕುಡಾಳ್‌ನ ಶ್ರೀ ಜಗನ್ನಾಥ ಮ್ಯೂಸಿಕ್ ಸ್ಕೂಲ್ ಪಕ್ವಾಜ್ ಅಲಂಕಾರ್ ಮಹೇಶ್ ವಿಟ್ಠಲ್ ಸಾವಂತ್ ಅವರ ನೇತೃತ್ವದ ನೂರು ಮಂದಿ ಕಲಾವಿದರ ತಂಡದಿಂದ ವಿಶೇಷ ಆಕರ್ಷಣೆಯಾಗಿ ಪಕ್ಷಾಜ್-ತಬಲಾ-ಡೋಲಕ್ ಜುಗಲ್‌ ಬಂದಿ ಮತ್ತು ಶತ ಮೃದಂಗ ವಾದನ ‘ಭಜನ ರಂಗ್’ ಕಾರ್ಯಕ್ರಮವನ್ನು ಶ್ರೀ ಪೂರ್ಣಾನಂದ ಸ್ಮೃತಿ ಮಂಟಪದಲ್ಲಿ ಹಿರಿಯರಾದ ಎಸ್.ಕೆ. ಸಾಮಂತ್ ಉದ್ಘಾಟಿಸಿ ಶುಭ ಹಾರೈಸಿದರು.

    ಆಕಾಶವಾಣಿ ಆಲ್ ಇಂಡಿಯಾ ರೇಡಿಯೋ ಕಲಾವಿದರು, ಪಕ್ವಾಜ್ ವಿಶಾರದರು, ಡೋಲಕ್ ಕಲಾವಿದರು, ತಬಲಾ ವಿಶಾರದರು ಸೇರಿದಂತೆ ವೋಕಲ್, ಹಾರ್ಮೋನಿಯಂ ವಾದಕರನ್ನು ಹೊಂದಿದ ಕಲಾ ತಂಡವು ಚಿಕ್ಕ ವಯಸ್ಸಿನಿಂದ ಹಿಡಿದು ಹಿರಿಯರನ್ನು ಒಳಗೊಂಡಿದೆ. 75 ಮಂದಿ ಪಕ್ವಾಜ್ ಕಲಾವಿದರು, ನಾಲ್ವರು ತಬಲಾ ವಾದಕರು, ಇಬ್ಬರು ಡೋಲಕ್ ವಾದಕರು ಹಾಗೂ ಉಳಿದಂತೆ ಇತರೆ ಪಕ್ಕವಾದ್ಯಗಳೊಂದಿಗೆ ಗಾನ ಸಂಗೀತ ವಿಶಾರದರನ್ನು ಸೇರಿದ ನೂರು ಮಂದಿಯ ತಂಡದಿಂದ ಭಜನ ಸಂಕೀರ್ತನೆ ನಡೆಯಿತು.

    ಪ್ರಫುಲ್ಲ ವಿಲಾಸ ರೇವಣಕರ್, ಅಮಿತ್ ಉಮ್ಮಳಕ‌ರ್ ಹಾಗೂ ಶಿಷ್ಯರಿಂದ ಸಂಗೀತ ಗಾನಸುಧೆ ಮೊಳಗಿತು. ಅಕ್ಷಯ್ ಸಾತರಡೇಕರ್ ಸಂಗೀತ ನಿರ್ವಹಿಸಿದ್ದರು. ಪಕ್ವಾಜ್ -ತಬಲಾ-ಡೋಲಕ್ ಜುಗಲ್ ಬಂದಿ ಕಾರ್ಯಕ್ರಮವು ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು. ವಿಶೇಷವಾಗಿ ಶಿವತಾಂಡವ, ಶ್ರೀದೇವಿ ನಾಮಾವಳಿ, ಶಿವ, ದುರ್ಗಾ, ವಿಠಲ ಹಾಗೂ ವಿವಿಧ ದೇವರ ಭಜನೆ ಸಂಕೀರ್ತನೆಯನ್ನು ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಹಾಡಿ ನೆರೆದ ಅಪಾರ ಭಕ್ತರನ್ನು ಗಾನ-ನಿನಾದ ಲೋಕದಲ್ಲಿ ತೇಲಾಡಿಸಿದರು.

    ಆಡಳಿತ ಮೊತ್ತೇಸರ ಸುಭಾಕರ ಸಾಮಂತ್‌, ಅಧ್ಯಕ್ಷ ಎಸ್, ದಿನೇಶ್‌ ಪ್ರಭು, ಉಪಾಧ್ಯಕ್ಷ ಎಚ್. ಪುರುಷೋತ್ತಮ ಪ್ರಭು, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಕೋಶಾಧಿಕಾರಿ ಶ್ರೀಕಾಂತ ಪ್ರಭು, ಜತೆ ಕಾರ್ಯದರ್ಶಿ ಅಶೋಕ್ ಸಾಮಂತ್, ಟ್ರಸ್ಟಿಗಳಾದ ಜಿ. ಕೃಷ್ಣರಾಯ ಪಾಟೀಲ್, ಶ್ರೀರಾಮ ಪ್ರಭು, ಸಂಜಯ ಪ್ರಭು, ರಾಮದಾಸ ಪ್ರಭು, ಸತೀಶ್ ಪಾಟೀಲ್, ಪ್ರಕಾಶ ಪ್ರಭು, ಕೆ.ಡಿ.ಜಿ.ಬಿ. ಸ್ಥಾಪಕಾಧ್ಯಕ್ಷ ಭರತ ಪ್ರಭು, ಸರಪಂಚ್ ನಾಥ ಮಡಿವಾಳ ಕುಡಾಳ್‌ ಉಪಸ್ಥಿತರಿದ್ದರು.

    ಭಜನ ರಂಗ್ ಕಾರ್ಯಕ್ರಮದ ರೂವಾರಿ ಆಡಳಿತ ಮೊಕ್ತೇಸರ ಮಹೇಶ್‌ ಠಾಕೂರ್ ಸ್ವಾಗತಿಸಿದರು. ಶಾಶ್ವತ ಟ್ರಸ್ಟಿ ದಿನೇಶ್‌ ಶ್ರೀಧರ ಸಾಮಂತ ಪ್ರಾಸ್ತಾವಿಕ ಮಾತನಾಡಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಇವರಿಗೆ ‘ರಂಗಚಾವಡಿ -2023’ ಪ್ರಶಸ್ತಿ ಪ್ರದಾನ
    Next Article ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಬಾನಾಸು ಅವರಿಗೆ ಹುಟ್ಟೂರ ಗೌರವ
    roovari

    Add Comment Cancel Reply


    Related Posts

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ನಂದಿನಿ ನದಿಯ ಕುದ್ರುವಿನಲ್ಲಿ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಮಾರ್ಚ್ 01

    February 25, 2026

    ಬೆಳ್ತಂಗಡಿಯಲ್ಲಿ ‘ಸುವರ್ಣ ರಂಗ ಸಮ್ಮಾನ್’ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ವೈಭವ

    February 24, 2026

    ನಾರಿ ಚಿನ್ನಾರಿಯಿಂದ ಪದ್ಮಗಿರಿ ಕಲಾಕುಟೀರದಲ್ಲಿ ‘ಪ್ರತಿಭಾನಂದಿನಿ’ | ಫೆಬ್ರವರಿ 25

    February 24, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.