ಮಧೂರು : ಮಧೂರು ಶ್ರೀ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪ್ರತಿದಿನ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿನಾಂಕ 27 ಮಾರ್ಚ್ 2025ರಂದು ಬೆಂಗಳೂರಿನ ನೃತ್ಯ ಕುಟೀರದ ಗುರು ವಿದುಷಿ ದೀಪಾ ಭಟ್ ಮತ್ತು ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗಣೇಶ ನಟರಾಜ ಹಾಗೂ ದೇವಿ ಕೃತಿಗಳಿಗೆ ಸುಂದರ ನೃತ್ಯಬಂಧಗಳನ್ನು ಪ್ರದರ್ಶಿಸಲಾಯಿತು. ವಿಶೇಷವಾಗಿ ‘ಶಿವ ನವರಸ ಲಾಸ್ಯ’ ಎಂಬ ನೃತ್ಯ ರೂಪಕದ ಮುಖೇನ ಶಿವಪುರಾಣದ ಅನೇಕ ಕಥೆಗಳ ಮೂಲಕ ಶಿವನ ನವರಸ ಭಾವ ನೃತ್ಯದಲ್ಲಿ ಮೆರೆದಿದ್ದು ನೆರೆದಿದ್ದ ಅಪಾರ ಭಕ್ತ ವೃಂದದ ಮೆಚ್ಚುಗೆಗೆ ಪಾತ್ರವಾಯಿತು.