ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ ಮೇ 30 ಮತ್ತು 31ರಂದು ನಡೆದ ಆಹ್ವಾನಿತ ಕಾಲೇಜು ತಂಡಗಳ ಯಕ್ಷಗಾನ ಸ್ಪರ್ಧೆಯಲ್ಲಿ ‘ತರಣಿಸೇನ ಕಾಳಗ’ ಪ್ರದರ್ಶಿಸಿದ ನಿಟ್ಟೆ ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು ತಂಡ ಪ್ರಥಮ ಸ್ಥಾನ, ‘ಶ್ರೀಹರಿ ಲೀಲಾ’ ಪ್ರದರ್ಶಿಸಿದ ಮೂಡುಬಿದಿರೆ ಆಳ್ವಾಸ್ ಕಾಲೇಜು ದ್ವಿತೀಯ, ‘ಸುದರ್ಶನ ವಿಜಯ’ ಪ್ರದರ್ಶಿಸಿದ ಮಂಗಳೂರು ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯ ತೃತೀಯ ಪ್ರಶಸ್ತಿ ಪಡೆದವು.
ರಾಜ ವೇಷದಲ್ಲಿ ಗೋವಿಂದ ದಾಸ ಕಾಲೇಜಿನ ಕಾರ್ತಿಕ್ ಅಮೀನ್, ಎಸ್.ಡಿ.ಎಂ.ನ ಅಜೇಯ ಸುಬ್ರಹ್ಮಣ್ಯ, ಪುಂಡುವೇಷದಲ್ಲಿ ಎಸ್.ಡಿ.ಎಂ.ನ ಪ್ರಶಾಂತ ಐತಾಳ, ಮಂಗಳೂರು ವಿವಿ ಕಾಲೇಜಿನ ಕೌಶಿಕ್, ಸ್ತ್ರೀ ವೇಷದಲ್ಲಿ ಆಳ್ವಾಸ್‌ನ ಈಶ್ವರೀ ಶೆಟ್ಟಿ, ಮಂಗಳೂರು ವಿವಿ ಕಾಲೇಜಿನ ವೀಕ್ಷಿತಾ, ಹಾಸ್ಯದಲ್ಲಿ ನಿಟ್ಟೆ ಎನ್‌ಎಸ್‌ಎಎಂನ ಪ್ರಣವ ಮೂಡಿತ್ತಾಯ, ಎಸ್.ಡಿ.ಎಂ.ನ ರೋಹಿಲ್ ಶೆಟ್ಟಿ, ಬಣ್ಣದ ವೇಷದಲ್ಲಿ ಎಸ್.ಡಿ.ಎಸ್.ನ ವೆಂಕಟ ಯಶಸ್ವಿ ಕೆ., ಆಳ್ವಾಸ್ ನ ಜೀವನ್ ಕಟೀಲ್ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಪಡೆದರು.
ಸಮಗ್ರ ವೈಯಕ್ತಿಕ ಪ್ರಶಸ್ತಿಯನ್ನು ನಿಟ್ಟೆ ಕಾಲೇಜಿನ ವರುಣ್ ಆಚಾರ್ಯ (ತರಣಿಸೇನ), ಸ್ವಸ್ತಿಕ್ ನ್ಯಾಷನಲ್ ಸ್ಕೂಲ್ ಉರ್ವ ಸ್ಟೋರ್ ನ ಭುವನ್ ಶೆಟ್ಟಿ (ದಾಕ್ಷಾಯಿಣಿ), ನಿಟ್ಟೆ ಕಾಲೇಜಿನ ಅನ್ವೇಷ್ ಆರ್. ಶೆಟ್ಟಿ (ರಾಮ) ಪಡೆದರು.
ಬಹುಮಾನ ವಿತರಣೆ ಸಮಾರಂಭದಲ್ಲಿ ಕಟೀಲು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಕೊಡತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಸಂತೋಷ್ ಕುಮಾರ ಹೆಗ್ಡೆ, ಯಾದವ ಕೋಟ್ಯಾನ್, ಬಿಪಿನ್ ಚಂದ್ರ ಶೆಟ್ಟಿ, ಮೋಹನ್ ರಾವ್, ಮಿಥುನ ಕೊಡೆತ್ತೂರು, ಕಿರಣ್ ಪಕ್ಕಳ, ಪ್ರಾಚಾರ್ಯರಾದ ಡಾ. ಕೃಷ್ಣ, ಬಾಲಕೃಷ್ಣ ಶೆಟ್ಟಿ, ಸುಜಾತಾ ಭಟ್, ಉಪನ್ಯಾಸಕರಾದ ಡಾ. ವಿಜಯ್ ವಿ., ಆಶಾಕೀರ್ತಿ ಮತ್ತಿತರರಿದ್ದರು.
ತೀರ್ಪುಗಾರರಾದ ತಾರಾನಾಥ ವರ್ಕಾಡಿ, ಅಂಡಾಲ ದೇವೀಪ್ರಸಾದ ಶೆಟ್ಟಿ, ಕಟೀಲು ಮುರಳೀಧರ ರಾವ್ ಅವರನ್ನು ಅಭಿನಂದಿಸಲಾಯಿತು.