Subscribe to Updates

    Get the latest creative news from FooBar about art, design and business.

    What's Hot

    ತುಳು ಭವನದಲ್ಲಿ ಕೆ. ಅನಂತರಾಮ ಬಂಗಾಡಿ ಸಂಸ್ಮರಣಾ ಗೋಷ್ಠಿ ಹಾಗೂ ಯಕ್ಷಗಾನ | ಜನವರಿ 11

    January 9, 2026

    ಸುವರ್ಣ ಮಹೋತ್ಸವದ ಅಂಗವಾಗಿ ‘ಭಜನಾ ಸ್ಪರ್ಧಾ ಸಂಭ್ರಮ -2026’ | ಜನವರಿ 11

    January 9, 2026

    ಮಕರ ಸಂಕ್ರಾಂತಿ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳು | ಜನವರಿ 15

    January 9, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನಲ್ಲಿ ಲಯಬದ್ದ ಕುಣಿತ, ಭಾವಭರಿತ ಅಭಿನಯದ ಯಶಸ್ವೀ ಯಕ್ಷಗಾನ ಪ್ರದರ್ಶನ 
    Yakshagana

    ಬೆಂಗಳೂರಿನಲ್ಲಿ ಲಯಬದ್ದ ಕುಣಿತ, ಭಾವಭರಿತ ಅಭಿನಯದ ಯಶಸ್ವೀ ಯಕ್ಷಗಾನ ಪ್ರದರ್ಶನ 

    October 4, 20232 Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಹದಿನೈದು ವಸಂತಗಳನ್ನು ಪೂರೈಸಿರುವ ಬೆಂಗಳೂರಿನ ಚಿತ್ಪಾವನ ಮಹಿಳಾ ಯಕ್ಷಗಾನ ಮೇಳ (ರಿ) ಹೆಚ್ಚು ಹೆಚ್ಚು, ವಿಭಿನ್ನ ಯಕ್ಷಗಾನ ಪ್ರದರ್ಶನಗಳನ್ನು ನೀಡುವ ಮೂಲಕ ಕಲಾರಸಿಕರ ಮನೆ, ಮನಸ್ಸಿನ ಮಾತಾಗುತ್ತಿದೆ. ಹವ್ಯಾಸಿ ತಂಡವಾಗಿದ್ದರೂ ವ್ಯವಸಾಯೀ ತಂಡಕ್ಕೆ ಸರಿಸಮನಾಗಿ ಪ್ರದರ್ಶನದ ಗುಣಮಟ್ಟದ ನಿರಂತರ ಪ್ರಗತಿ ಸಾಧಿಸುತ್ತಿದೆ. ನುರಿತ ಕಲಾವಿದೆಯರ ಜೊತೆಗೆ ಯುವ ರಕ್ತದ  ಸೇರ್ಪಡೆ ಮೇಳಕ್ಕೆ ವ್ಯಾಪಕ ಆಯಾಮವನ್ನು ನೀಡುತ್ತಿದೆ. ಮಂಗಳಾದೇವಿ ಮೇಳದ ಹೆಸರಾಂತ ಭಾಗವತರಾದ ಶ್ರೀಯುತ ಯೋಗೀಶ್ ಶರ್ಮರು ಆಸಕ್ತಿ ತೋರಿ ಹೊಸ ಪ್ರಸಂಗಗಳ ತರಬೇತಿ/ನಿರ್ದೇಶನ ನೀಡುತ್ತಿರುವುದು ಇದಕ್ಕೆ ಸಾಕ್ಷಿ.

    ದಿನಾಂಕ 02-10-2023ರಂದು ನಾಗರಬಾವಿ ಕೆನರಾ ಬ್ಯಾಂಕ್ ಕಾಲೋನಿಯ ಅಮ್ಮೆಂಬಳ ಸುಬ್ಬರಾವ್ ಕಲಾಮಂಟಪದಲ್ಲಿ ನಡೆದ ‘ಬಿಲ್ಲ ಹಬ್ಬ ಕಂಸವಧೆ’ ನೆರೆದಿದ್ದ ಅಪಾರ ಯಕ್ಷಾಭಿಮಾನಿಗಳ ಮನ ಸೂರೆಗೈದಿತು. ಕಂಸನಾಗಿ ಶ್ರೀಮತಿ ಪೂನಂ ಗೋಖಲೆ ಅಮೋಘ ಅಭಿನಯ ನೀಡಿದರು. ಕೆಟ್ಟ ಕನಸಿಂದ ಮಂಚದಿಂದ ಬಿದ್ದು ಭಯ, ರೋಷದಿಂದ ತಲ್ಲಣಗೊಳ್ಳುವ ದೃಶ್ಯವಂತೂ ಬಹುಕಾಲ ಮನದಲ್ಲಿ ನೆಲೆಗೊಳ್ಳುವಂತಹುದು. ಕೃಷ್ಣನಾಗಿ ಶ್ರೀಮತಿ ಅನುಪಮಾ ಮರಾಠೆಯವರ ಎಂದಿನ ಪ್ರೌಢ ಅಭಿನಯ ಪ್ರದರ್ಶನಕ್ಕೆ A+ ಗ್ರೇಡ್ ದೊರಕಿಸಿತು. ಬಾಲಕೃಷ್ಣನಾಗಿ ಹಾಗೂ ಬಲರಾಮನಾಗಿ ಶ್ರೀಮತಿ ಶುಭಾ ಗೋರೆಯವರ ಲವಲವಿಕೆ, ಕುಣಿತ, ಅಭಿನಯ ಚಿತ್ತಾಕರ್ಷಕ. ಕೃಷ್ಣ ಬಲರಾಮರ ಲಯಬದ್ಧ ಬಿಡಿ ಹೆಜ್ಜೆಗಳ ಜೋಡಿ ಕುಣಿತ, ಸಾಹಿತ್ಯ ಭಾವವರಿತ ಅಭಿನಯ ಕಲಾವಿದೆಯರ ಪರಿಣತಿಗೆ, ಕಲಾಶ್ರದ್ಧೆಗೆ ಸಾಕ್ಷಿ. ಇನ್ನು ಶಕಟಾಸುರನಾಗಿ ಎತ್ತರದ ನಿಲುವಿನ,ಕಂಚಿನ ಕಂಠದ ಶ್ರೀಮತಿ ಸೌಮ್ಯ ಪ್ರದೀಪ್ ಆ ಪಾತ್ರಕ್ಕೆ ನ್ಯಾಯ ಒದಗಿಸಿದರು. ಅಕ್ರೂರನಾಗಿ ವರ್ಷಾ ಖಾಡಿಲ್ಕರ್ ಮೌಲಿಕ ನಿರ್ವಹಣೆ ತೋರಿದರು. ಕಂಸನ/ಶಕಟಾಸುರನ ಬಲಗಳಾಗಿ ಶ್ರೀಮತಿ ಭುವನಾ ಡೋಂಗ್ರೆ ಹಾಗೂ ರಮ್ಯಾ ಸಹಸ್ರಬುದ್ಧೆ ಅಚ್ಚುಕಟ್ಟಾಗಿ ನಟಿಸಿದರು. ಹಿರಿಯ ಕಲಾವಿದೆ ಶ್ರೀಮತಿ ಶೈಲಜಾ ಜೋಶಿಯವರ ವಿಜಯ ಹಾಗೂ ರಜಕ  ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಯೋಗೀಶ್ ಶರ್ಮರ ಶ್ರೀಮಂತ ಕಂಠದ ಭಾಗವತಿಕೆ, ನಿರ್ದೇಶನ ಕಲಾವಿದೆಯರ ಹುರುಪನ್ನು, ಆತ್ಮವಿಶ್ವಾಸವನ್ನು ಹೆಚ್ಚಿಸಿ ಯಶಸ್ವಿ ಪ್ರದರ್ಶನ ಕಲಾರಸಿಕರಿಗೆ ಸಿಗುವಂತಾಯಿತು. ಶ್ರೀ ಅರ್ಜುನ್ ಕೊರ್ಡೇಲ್ ಮತ್ತು  ಶಿಖಿನ್ ಶರ್ಮಾ ಚಂಡೆಯಲ್ಲಿ, ಶ್ರೀ ಪ್ರಕಾಶ್ ಗೋಗಟೆ ಮದ್ದಳೆಯಲ್ಲಿ ಮಿಂಚಿದರು. ಚಕ್ರತಾಳದಲ್ಲಿ ಶಂಕರ್ ಜೋಯಿಸ್ ‌ಸಮರ್ಥ ಸಾಥ್ ನೀಡಿದರು. ಪ್ರದರ್ಶನ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು.

    ವೇದಿಕೆ ಒದಗಿಸಿದ ಕೆನರಾ ಬ್ಯಾಂಕ್ ಕಾಲೋನಿ ಅಸೋಸಿಯೇಷನ್ ಹಾಗೂ ಮೇಳದ ಬಹುಕಾಲದ ಹಿತೈಷಿ ಶ್ರೀ ಲಿಂಗದೇವರು ಇವರುಗಳನ್ನು ಮೇಳದ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 10 
    Next Article ತುಳು ನಾಟಕ ಸ್ಪರ್ಧೆಗೆ ತಂಡಗಳಿಗೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 5  
    roovari

    2 Comments

    1. ರೂಪಶ್ರೀ ಮೋಹನ್ on October 5, 2023 1:30 pm

      ಮುಖ್ಯ ಕಲಾವಿದರಿಗೆ ಮತ್ತಷ್ಟು ಅವಕಾಶಗಳು ಒದಗಿಬರಲಿ.”ಚಿತ್ಪಾವನ ” ದ ಕಲಾವಿದರಿಂದ ಆಕರ್ಷಕ ಪ್ರಸಂಗಗಳು ಹೆಚ್ಚು ಹೊಮ್ಮಲಿ .ಪ್ರೋತ್ಸಾಹ ಯಕ್ಷಗಾನಕ್ಕೆ ಸಿಗುವಂತಾಗಲಿ. ಮುಂದಿನ ಎಲ್ಲ ಕಾರ್ಯಕ್ರಮ ಯಶಸ್ವಿಯಾಗಲಿ..🙏⭐️👍💐🎤🥁🪘

      Reply
    2. Sushma Dongre on October 5, 2023 2:31 pm

      ಚಿತ್ಪಾವನ ಯುವ ಹಾಗೂ ನುರಿತ ಕಲಾವಿದೆಯರಿಗೆ ಹೃತ್ಪೂರ್ವಕ ಅಭಿನಂದನೆಗಳು.. 💐💐💐💐💐

      Reply

    Add Comment Cancel Reply


    Related Posts

    ತುಳು ಭವನದಲ್ಲಿ ಕೆ. ಅನಂತರಾಮ ಬಂಗಾಡಿ ಸಂಸ್ಮರಣಾ ಗೋಷ್ಠಿ ಹಾಗೂ ಯಕ್ಷಗಾನ | ಜನವರಿ 11

    January 9, 2026

    ಕಟೀಲು ಕಾಲೇಜಿನಲ್ಲಿ ಮೂರು ದಿನಗಳ ‘ಸಾತ್ವಿಕಾಭಿನಯ ಕಮ್ಮಟ’ | ಜನವರಿ 12ರಿಂದ 14

    January 8, 2026

    ಹಿರಿಯ ಯಕ್ಷಗಾನ ಭಾಗವತ ಕಡತೋಕಾ ಲಕ್ಷ್ಮೀನಾರಾಯಣ ನಿಧನ

    January 7, 2026

    ಕದ್ರಿ ಪಾರ್ಕ್ ನಲ್ಲಿ ‘ಕಲಾಪರ್ಬ’ ಚಿತ್ರ-ಶಿಲ್ಪ-ಸಾಂಸ್ಕೃತಿಕ ಮೇಳ | ಜನವರಿ 09ರಿಂದ 11ರವರೆಗೆ

    January 7, 2026

    2 Comments

    1. ರೂಪಶ್ರೀ ಮೋಹನ್ on October 5, 2023 1:30 pm

      ಮುಖ್ಯ ಕಲಾವಿದರಿಗೆ ಮತ್ತಷ್ಟು ಅವಕಾಶಗಳು ಒದಗಿಬರಲಿ.”ಚಿತ್ಪಾವನ ” ದ ಕಲಾವಿದರಿಂದ ಆಕರ್ಷಕ ಪ್ರಸಂಗಗಳು ಹೆಚ್ಚು ಹೊಮ್ಮಲಿ .ಪ್ರೋತ್ಸಾಹ ಯಕ್ಷಗಾನಕ್ಕೆ ಸಿಗುವಂತಾಗಲಿ. ಮುಂದಿನ ಎಲ್ಲ ಕಾರ್ಯಕ್ರಮ ಯಶಸ್ವಿಯಾಗಲಿ..🙏⭐️👍💐🎤🥁🪘

      Reply
    2. Sushma Dongre on October 5, 2023 2:31 pm

      ಚಿತ್ಪಾವನ ಯುವ ಹಾಗೂ ನುರಿತ ಕಲಾವಿದೆಯರಿಗೆ ಹೃತ್ಪೂರ್ವಕ ಅಭಿನಂದನೆಗಳು.. 💐💐💐💐💐

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.