Subscribe to Updates

    Get the latest creative news from FooBar about art, design and business.

    What's Hot

    ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳ ಖ್ಯಾತ ತಂಡಗಳಿಂದ ‘ಶಿವಗಾನಾಮೃತ’ ಭಜನೆ ಸೇವೆ ಸುಸಂಪನ್ನ

    February 16, 2026

    ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ

    February 16, 2026

    ಡಾ. ನಿತ್ಯಾನಂದ ಬಿ. ಶೆಟ್ಟಿ ಇವರ ‘ಅಳವು ಅರಿಯದ ಭಾಷೆ’ ಪುಸ್ತಕ ಲೋಕಾರ್ಪಣೆ

    February 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಡಾ. ನಿತ್ಯಾನಂದ ಬಿ. ಶೆಟ್ಟಿ ಇವರ ‘ಅಳವು ಅರಿಯದ ಭಾಷೆ’ ಪುಸ್ತಕ ಲೋಕಾರ್ಪಣೆ
    Book Release

    ಡಾ. ನಿತ್ಯಾನಂದ ಬಿ. ಶೆಟ್ಟಿ ಇವರ ‘ಅಳವು ಅರಿಯದ ಭಾಷೆ’ ಪುಸ್ತಕ ಲೋಕಾರ್ಪಣೆ

    February 16, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸಂತ ಅಲೋಶಿಯಸ್‌ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಮತ್ತು ಕನ್ನಡ ವಿಭಾಗದಿಂದ ತುಮಕೂರು ವಿ.ವಿ. ಪ್ರಾಧ್ಯಾಪಕರಾಗಿರುವ ಡಾ. ನಿತ್ಯಾನಂದ ಬಿ. ಶೆಟ್ಟಿ ಇವರು ಬರೆದ ಯಕ್ಷಗಾನ ಮತ್ತು ಕರಾವಳಿಯ ಸಾಮಾಜಿಕ ಇತಿಹಾಸವನ್ನು ಮರು ನಿರೂಪಿಸಿದ ‘ಅಳವು ಅರಿಯದ ಭಾಷೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 13 ಫೆಬ್ರವರಿ 2026ರಂದು ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ನಡೆಯಿತು. ಹಿಂದೂಸ್ತಾನಿ ಗಾಯಕ ಕೀರ್ತನ್ ನಾಯಕ್ ಇವರು ಜೇಡರ ದಾಸಿಮಯ್ಯರ ವಚನದ ಸಾಲನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿ ಜೇನಿನ ಪೆಟ್ಟಿಗೆಯಿಂದ ನೂತನ ಕೃತಿಯನ್ನು ಹೊರತೆಗೆಯುವ ಮೂಲಕ ಅನಾವರಣಗೊಳಿಸಿ ಮಾತನಾಡಿ “ಯಕ್ಷಗಾನ ಕಲೆ ಪ್ರಪಂಚದ ಶ್ರೀಮಂತ ಕಲೆಯಾಗಿ ಗುರುತಿಸಿಕೊಂಡಿದೆ. ಇಂತಹ ಕಲೆಯ ಕುರಿತಾದ ಈ ಕೃತಿ ರಚನೆ ಅಭಿನಂದನಾರ್ಹ. ನೃತ್ಯ, ಅಭಿನಯ, ಸಂಗೀತ ಸೇರಿದಂತೆ ಎಲ್ಲಾ ರೀತಿಯ ಕಲಾ ಪ್ರಕಾರಗಳನ್ನು ಒಳಗೊಂಡ ಯಕ್ಷಗಾನ ಶುದ್ಧವಾದ ಕನ್ನಡವನ್ನು ಇಂದಿಗೂ ಉಳಿಸಿ, ಬೆಳೆಸುತ್ತಿದೆ. ಯಕ್ಷಗಾನ ಕಲೆಗೆ ಜಾತಿ, ಧರ್ಮ ಮೀರಿ ಕಲಾವಿದರ ಕೊಡುಗೆ ಇದೆ, ಅವರ ಪ್ರೀತಿ ಇದೆ” ಎಂದು ಹೇಳಿದ ಅವರು, ಪುಂಡು ವೇಷಧಾರಿಯಾಗಿ ಪ್ರಸಿದ್ಧಿ ಪಡೆದಿರುವ ಕ್ರಿಶ್ಚಿಯನ್ ಬಾಬು ಹಾಗೂ ಯಕ್ಷಗಾನದ ಮೇರು ಪ್ರತಿಭೆ ಜಬ್ಬಾರ್ ಸುಮೋ ಅವರನ್ನು ನೆನಪಿಸಿಕೊಂಡರು.

    ಕಾಂತಾವರ ಕನ್ನಡ ಸಂಘದ ಪ್ರಕಾಶನದದಿಂದ ಹೊರತರಲಾದ ಕೃತಿಯ ಬಗ್ಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, “ಯಕ್ಷಗಾನದ ಇತಿಹಾಸದ ನೋಟ, ಕಲೆ ಸಾಹಿತ್ಯ-ಸಾಮಾಜಿಕ-ರಾಜಕೀಯ ಚಿಂತನೆಯನ್ನು ಪ್ರಸ್ತುತ ಪಡಿಸುವ ವಿಶೇಷ ರೀತಿಯ ಗ್ರಂಥ ಇದಾಗಿದೆ. ಇದು ಇತರ ಭಾಷೆಗಳಿಗೆ ತರ್ಜುಮೆ ಆಗಬೇಕಾದ ಕೃತಿ” ಎಂದು ಬಣ್ಣಿಸಿದರು.

    ಸಂತ ಅಲೋಶಿಯಸ್ ವಿ.ವಿ. ಸಹ ಕುಲಪತಿ ರೆ.ಫಾ. ಡಾ. ಮೆಲ್ವಿನ್ ಡಿಕುನ್ನಾ ಅಧ್ಯಕ್ಷತೆ ವಹಿಸಿದ್ದರು. ಫ್ಯಾಮಿಲಿ ಟ್ರಸ್ಟಿನ ಪ್ರಮುಖರಾದ ಕಿರಣ್ ಮಲ್ಯ, ಪ್ರಾಧ್ಯಾಪಕರಾದ ಡಾ. ದಿನೇಶ್ ನಾಯಕ್, ಮಹಾಲಿಂಗ ಭಟ್, ಕೃತಿಕಾರ ಡಾ. ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು. ಪುಸ್ತಕ ಬಿಡುಗಡೆ ಬಳಿಕ ‘ಹೊತ್ತಗೆಯ ಹೊತ್ತು’ ಸಂವಾದ ನಡೆಯಿತು. ಸಂತ ಅಲೋಶಿಯಸ್ ಯಕ್ಷಬಳಗದಿಂದ ಡಾ. ದಿನೇಶ್ ನಾಯಕ್ ಇವರ ವಿಶಿಷ್ಟ ಪರಿಕಲ್ಪನೆಯಲ್ಲಿ ಯಕ್ಷ-ಭಾವ-ಅಭಿವ್ಯಕ್ತಿ ಎಂಬ ವಿನೂತನ ಯಕ್ಷಗಾನ ಪ್ರದರ್ಶನಗೊಂಡಿತು.

    baikady Book release Literature roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ ಕೂಟ
    Next Article ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳ ಖ್ಯಾತ ತಂಡಗಳಿಂದ ‘ಶಿವಗಾನಾಮೃತ’ ಭಜನೆ ಸೇವೆ ಸುಸಂಪನ್ನ

    February 16, 2026

    ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ

    February 16, 2026

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿಕ ತಾಳಮದ್ದಳೆ ಕೂಟ

    February 16, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಬೆಳ್ಳಕ್ಕಿ ಸಾಲು’

    February 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.