ಕುಶಾಲನಗರ : ಕಾವಯಿತ್ರಿ ಕೃಪಾ ದೇವರಾಜ್ ಇವರ ಹೊಸ ಕೃತಿ ‘ಕಾರ್ಪಣ್ಯದ ಹೂವು’ ಇದರ ಲೋಕಾರ್ಪಣೆಯು ದಿನಾಂಕ 02-01-2024ರಂದು ಕುಶಾಲನಗರದ ಕಣಿವೆಯ ಸುಂದರ ಪರಿಸರದಲ್ಲಿ ಅನೌಪಚಾರಿಕ ಸಭೆಯೊಂದರಲ್ಲಿ ನಡೆಯಿತು.
ಸಾಹಿತಿ ಭಾರದ್ವಾಜ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ “ಸರಳ ವ್ಯಕ್ತಿತ್ವದ ಬರಹಗಾರರಿಂದ ಆಪ್ತ ಬರಹಗಳು ಹೊರ ಹೊಮ್ಮುತ್ತವೆ.” ಎಂದರು. ಬೆಂಗಳೂರಿನ ಲೇಖಕ ಇರ್ಫಾನ್ ಮಾತನಾಡಿ “ಕೊಡಗಿನ ಸುಂದರ ಪರಿಸರ ಲೇಖಕರಿಗೆ ಸುಂದರ ವಿಷಯ ಒದಗಿಸುತ್ತದೆ.” ಎಂದು ತಿಳಿಸಿದರು. ಲೇಖಕಿ ಕೃಪಾದೇವರಾಜ್ ಮಾತನಾಡಿ “ಸರಳತೆ ಬಯಸುವ ತಾನು, ಕಥಾ ಸಂಕಲನವನ್ನೂ ಅದ್ದೂರಿಯಾಗಿ ಬಿಡುಗಡೆ ಮಾಡಲು ಬಯಸಲಿಲ್ಲ.” ಎಂದು ಹೇಳಿದರು. ಬರಹಗಾರ ನೌಶದ್ ಜನ್ನತ್, ಪರ್ತಕರ್ತ ಬಿ.ಜಿ. ಅನಂತಶಯನ, ಚುಟುಕ ಕವಿ ಹಾ.ತಿ. ಜಯಪ್ರಕಾಶ್ ಮಾತನಾಡಿದರು.
ಕವನ ಸಂಕಲನದಲ್ಲಿ ಕನ್ನಡದಲ್ಲಿ ಮಂತ್ರ ಪಠಿಸುವ ಏಕೈಕ ಅರ್ಚಕ ವಾಗ್ಮಿ ಹಿರೇಮಗಳೂರು ಕಣ್ಣನ್ ಅವರ ಮುನ್ನುಡಿ, ಖ್ಯಾತ ಬರಹಗಾರ್ತಿ ಮಂಗಳನಾಡಿಗ್ ಅವರ ನುಡಿ ಅಡಕವಾಗಿರುವುದು ವಿಶೇಷ.