ಉಡುಪಿ : ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ಇದರ ರಜತ ಸಂಭ್ರಮ ಪ್ರಯುಕ್ತ ‘ಚಿಗುರು’ ಹೈಸ್ಕೂಲ್ ಮಕ್ಕಳ ಕನ್ನಡ ನಾಟಕ ಸ್ಪರ್ಧೆಯನ್ನು ದಿನಾಂಕ 22 ನವೆಂಬರ್ 2026ರಂದು ಆಯೋಜಿಸಲಾಗಿದೆ.
ಪ್ರಥಮ ಬಹುಮಾನ ರೂ.7,777/-, ದ್ವಿತೀಯ ರೂ.5,555/- ಮತ್ತು ತೃತೀಯ ರೂ.3,333/- ಹಾಗೂ ಭಾಗವಹಿಸುವ ಪ್ರತಿ ತಂಡಕ್ಕೆ ಗೌರವ ಧನ ರೂ.2,000/-ವನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ದಿನಾಂಕ 25 ಅಕ್ಟೋಬರ್ 2026ರೊಳಗೆ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಯೋಗೀಶ್ ಕೊಳಲಗಿರಿ 99642 43840 ಮತ್ತು ಅಂಬಿಕಾ 94818 46755 ಸಂಖ್ಯೆಗಳನ್ನು ಸಂಪರ್ಕಿಸಿರಿ.

