ಮಂಚಿ : ಲಯನ್ಸ್ ಸೇವಾ ಟ್ರಸ್ಟ್ (ರಿ) ಮಂಚಿ ಹಾಗೂ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇವರ ಸಹಯೋಗದಲ್ಲಿ ನೃತ್ಯ ಪರಂಪರೆಯನ್ನು ಶುದ್ಧ ಶಾಸ್ತ್ರೀಯ ಚೌಕಟ್ಟಿನಲ್ಲಿ ಭವಿಷ್ಯದ ಯುವ ಕಲಾವಿದರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪುತ್ತೂರಿನ ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಪ್ರೇರಿತಗೊಂಡು, ಅದರ ಅಂಗ ಸಂಸ್ಥೆಯಾದ ವಸುಧಾರಾ ಕಲಾಕೇಂದ್ರ ಬೋಳಂತೂರು ಮಂಚಿ ಇವರು ಆಯೋಜಿಸಿದ ನೃತ್ಯಸರಣಿ ಮಾಲಿಕೆ ‘ಕಲಾಧಾರಾ 14’ ಕಾರ್ಯಕ್ರಮವನ್ನು 09 ಅಕ್ಟೋಬರ್ 2026ರಂದು ಸಂಜೆ 6-00 ಗಂಟೆಗೆ ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಗಿದೆ.
ಹಿರಿಯ ಶಿಕ್ಷಕರಾದ ಶ್ರೀಮತಿ ದೇವಿಕಾ ಪಿ. ಶೆಟ್ಟಿ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದು, ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯರಾದ ಕುಮಾರಿ ವಿದುಷಿ ನಿವೇದಿತಾ ಕಾರಂತ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

