ಬೆಂಗಳೂರು : ಚಿತ್ರಕೂಟ ಸ್ಕೂಲ್ ಅರ್ಪಿಸುತ್ತಿರುವ ‘ಚಿಟ್ಟೆ ಮಕ್ಕಳ ಮೇಳ’ ಬೇಸಿಗೆ ಶಿಬಿರವನ್ನು ದಿನಾಂಕ 06 ಏಪ್ರಿಲ್ 2025ರಿಂದ 26 ಏಪ್ರಿಲ್ 2025ರವರೆಗೆ ಬೆಳಿಗ್ಗೆ 9-30ರಿಂದ 4-00 ಗಂಟೆಗೆ ತನಕ ಬೆಂಗಳೂರಿನ ನಾಗದೇವನ ಹಳ್ಳಿ ಕೆಂಗೇರಿ ಮುಖ್ಯ ರಸ್ತೆ ನಂ.37/6 ಚಿತ್ರಕೂಟ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ನಾಟಕ ಮತ್ತು ಪ್ರದರ್ಶನ, ಜನಪದ ಕುಣಿತಗಳು, ಸಂಗೀತ, ಚಿತ್ರಕತೆ, ಕರಕುಶಲ ಕಲೆಗಳು, ದೇಸಿ ಆಟಗಳು, ಮುಖವಾಡ ತಯಾರಿಕೆ, ಮ್ಯಾಜಿಕ್, ಮಕ್ಕಳ ಸಂಜೆ, ಪರಿಸರ ಜಾಗೃತಿ ಜಾತ, ಹೋಳಿ ಹಬ್ಬ, ಸಾಧಕರಿಗೆ ಸನ್ಮಾನ, ಮಲ್ಲಕಂಬ, ಕೋಲು ಹೋರಾಟ ಮತ್ತು ಭರತನಾಟ್ಯ ಇತ್ಯಾದಿಗಳನ್ನು ರಂಗಾಯಣ, ನೀನಾಸಂ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಪರಿಣಿತಿ ಪಡೆದ ಕಲಾವಿದರಿಂದ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8217637620 ಮತ್ತು 9663399966 ಸಂಖ್ಯೆಯನ್ನು ಸಂಪರ್ಕಿಸಿರಿ.