ಬೆಂಗಳೂರು : ಮುಳಿಯ ಜ್ಯುವೆಲ್ಸ್ ಬೆಂಗಳೂರಿನ ಮಳಿಗೆಯಲ್ಲಿ ಮಕ್ಕಳಿಗೆ ಕರ್ನಾಟಕದ ವಿವಿಧ ನೃತ್ಯ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ದಿನಾಂಕ 24 ನವೆಂಬರ್ 2024ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಹೋಟೆಲ್ ಮಾಲಕರ ಸಂಘದ ರಾಜ್ಯಾಧ್ಯಕ್ಷ ಜಿ. ಕೆ. ಶೆಟ್ಟಿ ಮಾತನಾಡಿ “ಮಕ್ಕಳನ್ನು ಹುರಿದುಂಬಿಸುವ ಈ ಬಗೆಯ ಕಾರ್ಯಕ್ರಮ ತುಂಬಾ ಒಳ್ಳೆಯದು. ಹಾಗೆಯೆ ಹೋಟೆಲ್ ಕಾರ್ಮಿಕರಲ್ಲಿ ಕನ್ನಡದ ಅಭಿಮಾನ ಹೆಚ್ಚಾಗಿ ಕಾಣಬಹುದು.” ಎಂದರು. ಇನ್ನೋರ್ವ ಅತಿಥಿ, ಮಿಸೆಸ್ ಯುನಿವರ್ಸ ಶ್ರೀಮತಿ ಸತ್ಯವತಿ ಬಸವರಾಜು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ವೇಣುಶರ್ಮ ಮಾತನಾಡಿ “ಮುಳಿಯದ ವಿಶೇಷ ಡಿಸೈನ್ಗಳ ಮಾರಾಟದ ಜೊತೆಗೆ ಸಾಮಾಜಿಕ ಕಳಕಳಿ ಇರುವುದು ವಿಶೇಷ.” ಎಂದರು.
ಈ ಕಾರ್ಯಕ್ರಮ ಸಂಧ್ಯಾ ಜಯರಾಮ್ ಇವರ ಸಹಯೋಗದಲ್ಲಿ ನಡೆಯಿತು . ಸಮಾರೋಪ ಸಮಾರಂಭದಲ್ಲಿ ಚಿತ್ರ ನಟ ಸ್ಟೈಲ್ ಶಿವು ಹಾಗೂ ಕಾಸಿಯಾದ ಗೌರವ ಕಾರ್ಯದರ್ಶಿ, ಉದ್ಯಮಿ ಶ್ರೀ ಸುರೇಶ್ ಯನ್. ಸಾಗರ್ ವೇದಿಕೆಯಲ್ಲಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ಮುಳಿಯ ಪ್ರಬಂಧಕರಾದ ಯನ್. ಸುಬ್ರಮಣ್ಯ ಭಟ್, ಸಂಜೀವ, ಶಾಮ್, ಸತೀಶ್…. ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleಸುಳ್ಯ ರಂಗಮನೆಯಲ್ಲಿ ‘ಶಾಸ್ತ್ರೀಯ ಸಂಗೀತ ಸಂಭ್ರಮ’ | ಡಿಸೆಂಬರ್ 08
Related Posts
Comments are closed.