ಬೆಂಗಳೂರು : ಕನ್ನಡದ ಖ್ಯಾತ ಲೇಖಕಿ ದಿ.ಡಾ.ಎಚ್.ಗಿರಿಜಮ್ಮ ಅವರ ನೆನಪಿನಲ್ಲಿ ಪ್ರತೀ ವರ್ಷ ಮಹಿಳಾ ವೈದ್ಯರಿಗೆ ನೀಡುವ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ.
2022ರಲ್ಲಿ ಪ್ರಕಟವಾದ ವೈದ್ಯ ಸಾಹಿತ್ಯ, ಕಥಾ ಸಂಕಲನ, ಕಾದ೦ಬರಿ, ಕವಿತಾ ಸಂಕಲನ, ಪ್ರಬಂಧ, ಪ್ರವಾಸ ಕಥನ ಇತ್ಯಾದಿ ಯಾವುದೇ ಪ್ರಕಾರದ ತಮ್ಮ ಕೃತಿಗಳ ತಲಾ ಮೂರು ಪ್ರತಿಗಳನ್ನು ವೈದ್ಯ ಲೇಖಕಿಯರು ಆಗಸ್ಟ್ 30ರೊಳಗೆ ಕಳುಹಿಸಬಹುದು. ಪ್ರಶಸ್ತಿಯು ರೂ.25,000/- ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಕೃತಿಗಳನ್ನು ಡಾ. ಎಚ್. ಗಿರಿಜಮ್ಮ ಸ್ನೇಹ ಬಳಗ, ನಂ.222, 2ನೇ ಇಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರ ನಗರ, ಬೆಂಗಳೂರು -560079 ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9986840477 ಸಂಪರ್ಕಿಸಬಹುದು.