ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಂಗಳೂರು ಜರ್ನಿ ಥಿಯೇಟರ್ ಗ್ರೂಫ್ ಹಾಗೂ ಹಳೆ ವಿದ್ಯಾರ್ಥಿಸಂಘದ ಸಹಯೋಗದಲ್ಲಿ ನಡೆದ ಒಂದು ದಿನದ ರಂಗ ಚಟುವಟಿಕೆಗಳ ಕುರಿತ ಕಾರ್ಯಗಾರವು ದಿನಾಂಕ 23-07-2023ರಂದು ನಡೆಯಿತು.
ಕಟೀಲು ದೇಗುಲದ ಅರ್ಚಕರಾದ ಶ್ರೀಹರಿನಾರಾಯಣದಾಸ ಆಸ್ರಣ್ಣನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಪುರಾಣ, ಇತಿಹಾಸಗಳ ವಿಚಾರಗಳನ್ನು ತಿಳಿಸಿ ಚಿಂತನಾಶಕ್ತಿಯನ್ನು ಹೆಚ್ಚಿಸಿ ಬದುಕಿನ ಪಾಠ ಹೇಳಿಕೊಡುವ ಕಾರ್ಯವನ್ನು ರಂಗಭೂಮಿ, ನಾಟಕಗಳು ಮಾಡುತ್ತವೆ” ಎಂದು ಹೇಳಿದರು. ಶಿಬಿರಾರ್ಥಿಗಳಿಂದ ರಂಗಗೀತೆ ಹಾಗೂ ಕಿರು ಪ್ರಹಸನ ಪ್ರದರ್ಶನಗೊಂಡವು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಕಟೀಲು ಪ.ಪೂ. ಕಾಲೇಜಿನ ಪ್ರಾಚಾರ್ಯೆ ಕುಸುಮಾವತಿ, ಶಿಕ್ಷಕರಾದ ರಾಜಶೇಖರ್, ಶೈಲಜಾ, ತನುಜಾ, ಜರ್ನಿ ಥಿಯೇಟರ್ ಗ್ರೂಪಿನ ಅರ್ಜುನ್ ಆಚಾರ್ಯ, ರಾಘವ ಸೂರಿ. ಸುಧೀಶ್ ಕೂಡ್ಲು, ರೋಹನ್. ಎಸ್. ಉಚ್ಚಿಲ್, ಚಿನ್ಮಯಿ. ವಿ. ಭಟ್ ಮತ್ತು ಶಶಾಂಕ್ ಐತಾಳ್ ಉಪಸ್ಥಿತರಿದ್ದರು.