ಮುಂಬಯಿ : ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ನೂರರ ನಲಿವು ಸಂಭ್ರಮಾಚರಣೆ ಪ್ರಯುಕ್ತ ‘ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ – 2025’ಯನ್ನು ಏರ್ಪಡಿಸಲಾಗಿದೆ.
ಮೈಸೂರು ಅಸೋಸಿಯೇಷನ್ ಮುಂಬೈ ಒಂದು ಪ್ರತಿಷ್ಠಿತ ಕನ್ನಡ ಸಂಸ್ಥೆಯಾಗಿದ್ದು, ತನ್ನ ಶತಕವನ್ನು ಪೂರೈಸುವತ್ತ ಮುಂದುವರಿಯುತ್ತಿದೆ. ಈ ಮೊದಲೂ ಕೂಡಾ ಕನ್ನಡ ಕವನ, ಕಥೆ ಹಾಗೂ ಏಕಾಂಕ ನಾಟಕ ಸ್ಪರ್ಧೆಯನ್ನು ಆಯೋಜಿಸುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ ‘ಶತಮಾನೋತ್ಸವ ವಿಶೇಷ’ ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆಯ ಘೋಷಣೆಯನ್ನು ಈ ಮೂಲಕ ಮಾಡಲಾಗುತ್ತಿದೆ.
ಈ ಸ್ಪರ್ಧೆಯಲ್ಲಿ ಭಾರತದಾದ್ಯಂತ ಆಸಕ್ತರೆಲ್ಲರೂ ಭಾಗವಹಿಸಬಹುದು. ಇಲ್ಲಿ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಆಸಕ್ತರು ಯಾವುದೇ ವಿಷಯದ ಕುರಿತು ಏಕಾಂಕ ನಾಟಕವನ್ನು ರಚಿಸಬಹುದು. ಏಕಾಂಕ ನಾಟಕ ರಚನಾ ಸ್ಪರ್ಧೆಯ ಪ್ರಥಮ ಬಹುಮಾನ – 50,000/-, ದ್ವಿತೀಯ ಬಹುಮಾನ – ರೂ. 30,000/- ಮತ್ತು ತೃತೀಯ ಬಹುಮಾನ – ರೂ. 20,000/- ಆಗಿರುತ್ತದೆ.
ಸ್ಪರ್ಧೆಯ ನಿಯಮಾವಳಿಗಳು:
> ಏಕಾಂಕ ನಾಟಕ ಕನ್ನಡದಲ್ಲಿದ್ದು ಸ್ವರಚಿತವಾಗಿರಬೇಕು, ಅನುವಾದ ಅನುಕರಣೆ ಆಗಿರಕೂಡದು.
> ಸ್ಪರ್ಧೆಗೆ ಕಳುಹಿಸಿದ ನಾಟಕಗಳು ಬೇರೆಲ್ಲೂ ಪ್ರಕಟವಾಗಿರಬಾರದು.
> ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ನಾಟಕವನ್ನು ಕಳುಹಿಸುವಂತಿಲ್ಲ.
> ಸ್ಪರ್ಧೆಗೆ ಬಂದ ನಾಟಕವನ್ನು ಮರಳಿಸಲಾಗುವುದಿಲ್ಲ.
> ನಾಟಕವು 30 ಪುಟಗಳನ್ನು ಮೀರಬಾರದು ನಾಟಕವನ್ನು ಪ್ರದರ್ಶಿಸಿದರೆ 45-50 ನಿಮಿಷಗಳೊಳಗೆ ಮುಗಿಯುವಂತಿರಬೇಕು.
> ಕಾಗದದ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದ ಬರೆದಂತಹ ಅಥವಾ ಕಂಪ್ಯೂಟರ್ ಮುದ್ರಿತ ಬರಹವನ್ನು ಅಂಚೆ ಅಥವಾ ಕೆಳಗೆ ತಿಳಿಸಿದ ಇಮೇಲ್ ಗೆ ಕಳುಹಿಸಬಹುದು.
[email protected]
> ಬರೆದವರ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಪ್ರತ್ಯೇಕ ಪುಟದಲ್ಲಿ ಬರೆದಿರಬೇಕು.
> ತೀರ್ಪುಗಾರರ ತೀರ್ಮಾನವೇ ಅಂತಿಮ. ಇದರ ಬಗ್ಗೆ ಯಾವ ಚರ್ಚೆ ಅಥವಾ ಪತ್ರ ವ್ಯವಹಾರ ಇಲ್ಲ.
> ನಾಟಕವು ನಮ್ಮ ಕೈ ಸೇರುವ ಕೊನೆಯ ದಿನಾಂಕ 30 ಜೂನ್ 2025
> ಆಯ್ಕೆಯಾದ, ನಾಟಕಗಳನ್ನು ನಮ್ಮ ಮೈಸೂರು ಅಸೋಸಿಯೇಷನ್ನಿನ ಮುಖವಾಣಿ ‘ನೇಸರು’ವಿನಲ್ಲಿ ಕಾಲಕಾಲಕ್ಕೆ ಪ್ರಕಟಿಸುವ ಹಕ್ಕು ಮೈಸೂರು ಅಸೋಸಿಯೇಷನ್ ಕಾದಿರಿಸಿದೆ.
ವಿಳಾಸ : ಮೈಸೂರು ಅಸೋಸಿಯೇಷನ್ ಮುಂಬಯಿ, 393, ಭಾವು ದಾಜಿ ರೋಡ್, ಮಾತುಂಗ ಸೆಂಟ್ರಲ್, ಮುಂಬೈ -400019 ಸಂಪರ್ಕ ಸಂಖ್ಯೆ : 022-24037065 (M) -8369788157 (ಬೆಳಿಗ್ಗೆ 11-00ರಿಂದ ಸಂಜೆ 7-00 ಗಂಟೆಯವರೆಗೆ)