ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಆಯೋಜಿಸಿದ ಸಾಹಿತ್ಯ ಪರಿಷತ್ ನಡಿಗೆ, ಹಿರಿಯ ಸಾಧಕರ ಎಡೆಗೆ’ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಕಲಾವಿದ, ಪ್ರಸಂಗಕರ್ತ, ಭಾಗವತ, ತಾಳಮದ್ದಲೆ ಅರ್ಥಧಾರಿ ಮಧೂರು ವೆಂಕಟಕೃಷ್ಣ ಅವರನ್ನು ಮಧೂರಿನ ಅವರ ನಿವಾಸದಲ್ಲಿ ದಿನಾಂಕ 30-04=2024ರಂದು ಅಭಿನಂದಿಸಲಾಯಿತು.
ಅಭಿನಂದನಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ ಅಧ್ಯಕ್ಷತೆಯಲ್ಲಿ ವೆಂಕಟಕೃಷ್ಣ ದಂಪತಿಯನ್ನು ಅಭಿನಂದಿಸಲಾಯಿತು .
ಅಭಿನಂದನಾ ಭಾಷಣ ಮಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಮಾತನಾಡಿ “ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಪ್ರಸಂಗಕರ್ತರಾಗಿ, ತಾಳಮದ್ದಲೆ ಅರ್ಥಧಾರಿಯಾಗಿ, ಕನ್ನಡ ತುಳು ಭಕ್ತಿ ಗೀತೆಗಳ ಗೀತ ರಚನಕಾರರಾಗಿ, ತಾಳಮದ್ದಲೆ ಸಂಘಟಕನಾಗಿ, ಮಧೂರು ವೆಂಕಟಕೃಷ್ಣರು ನೀಡಿದ ಕೊಡುಗೆ ಅನನ್ಯವಾದುದು.” ಎಂದು ಹೇಳಿದರು.
ನಿವೃತ್ತ ಪ್ರಿನ್ಸಿಪಾಲ್ ಡಾ.ಕೆ. ಕಮಲಾಕ್ಷ ಮಾತನಾಡಿ “ಯಕ್ಷಗಾನದ ಪ್ರತಿಯೊಂದು ವಿಷಯದ ಪರಿಜ್ಞಾನ ವೆಂಕಟಕೃಷ್ಣರಿಗಿದೆ. ಭಾಗವತರಾಗಿ ಅರ್ಥಧಾರಿಗಳಲ್ಲಿ ಸ್ಫೂರ್ತಿ ತುಂಬಬಲ್ಲ ಇವರು ಅರ್ಥಧಾರಿಯಾಗಿ ಸಹ ಕಲಾವಿದರಲ್ಲಿ ಉತ್ಸಾಹ ಮೂಡಿಸ ಬಲ್ಲರು. ಪದ್ಯದ ಚೌಕಟ್ಟನ್ನು ಮೀರದೆ ಉತ್ತಮ ಪದಗಳನ್ನು ಬಳಸಿ ಭಾವನಾತ್ಮಕವಾಗಿ ವಿಷಯ ಮಂಡಿಸ ಬಲ್ಲರು.” ಎಂದರು.
ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಮಾತನಾಡಿ “ಉಳಿಯತ್ತಡ್ಕ ವೆಂಕಟಕೃಷ್ಣರು ಯಕ್ಷಗಾನಕ್ಕೆ ಮಾತ್ರ ಸೀಮಿತವಾದವರಲ್ಲ. ನಾಟಕ, ಹರಿಕಥೆ, ಪುರಾಣ ವಾಚನ ಹಾಗೂ ಪ್ರವಚನಗಳಲ್ಲೂ ಮಿಂಚಿದವರು.” ಎಂದರು.
ಮಧೂರು ವೆಂಕಟಕೃಷ್ಣರು ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಮಾತನಾಡಿದರು. ಸುಮಿತ್ರಾ ವೆಂಕಟಕೃಷ್ಣ ,ಸಂಧ್ಯಾ ಮುರಲೀ ಮಾಧವ ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷಿ ಪುತ್ರಕಳ ಸ್ವಾಗತಿಸಿ, ನಿರೂಪಿಸಿ ನ್ಯಾಯವಾದಿ ಥಾಮಸ್ ಡಿ’ಸೋಜ ಸೀತಾಂಗೋಳಿ ವಂದಿಸಿದರು.
Subscribe to Updates
Get the latest creative news from FooBar about art, design and business.
Previous Articleಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ‘ವಿಶ್ವ ಪುಸ್ತಕ’ ದಿನಾಚರಣೆ