ಕಟೀಲು : ಇಲ್ಲಿನ ಗಂಪ ಚಂದ್ರಶೇಖರ ಬೆಳ್ಚಡ ಕುಟುಂಬಸ್ಥರು ನಡೆಸಿಕೊಂಡು ಬರುತ್ತಿರುವ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಐವತ್ತನೇ ವರುಷದ ಯಕ್ಷಗಾನ ಸೇವೆಯಾಟದ ಐವತ್ತನೇ ವರ್ಷದ ಗಂಪ ಯಕ್ಷ ಸುವರ್ಣ ಸಂಭ್ರಮ ಕಾರ್ಯಕ್ರಮವು ದಿನಾಂಕ 27 ಏಪ್ರಿಲ್ 2025ರಂದು ನಡೆಯಿತು.
ಇದೇ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದರಾದ ಕುಮಾರ ಪಡ್ರೆ, ಪದ್ಯಾಣ ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಮೊನ್ನಪ್ಪ ಗೌಡ ಕಿನ್ನಿಕೊಡಂಗೆ ಇವರನ್ನು ಸನ್ಮಾನಿಸಲಾಯಿತು. ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ “ಗರ್ಭಗುಡಿಯೊಳಗಿನಿಂದ ದೇವರು ಉತ್ಸವ ಸಂದರ್ಭ ಹೊರಬಂದು ಪೂಜೆ ಸ್ವೀಕರಿಸಿ ಭಕ್ತರನ್ನು ಆಶೀರ್ವದಿಸಿ ಹೋಗುವುದು ಸಾಮಾನ್ಯ, ಆದರೆ ಕಟೀಲು ಅಮ್ಮ ಯಕ್ಷಗಾನದ ಮೂಲಕ ಭಕ್ತರ ಮನೆಗೇ ಬಂದು ಸೇವೆ ಸ್ವೀಕರಿಸಿ ಹೋಗುತ್ತಾಳೆ ಎಂಬ ನಂಬಿಕೆಯಂತೆ ಕಳೆದ ಐವತ್ತು ವರುಷಗಳಿಂದ ತಪಸ್ಸಿನಂತೆ ಗಂಪ ಮನೆಯಲ್ಲಿ ಯಕ್ಷಗಾನಾರಾಧನೆ, ಕಲಾರಾಧನೆ, ಆ ಮೂಲಕ ಕಟೀಲಮ್ಮನ ಆರಾಧನೆ ನಡೆಸುತ್ತ ಬಂದಿರುವುದು ಅಭಿನಂದನೀಯ” ಎಂದರು.
ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಟೀಲು ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸಸಿಹಿತ್ಲುವಿನ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್, ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ವಾಮನ ಇಡ್ಯ, ಯಕ್ಷಧರ್ಮಬೋಧಿನಿಯ ರಾಘವೇಂದ್ರ ಆಚಾರ್ಯ, ಎಲ್.ವಿ. ಅಮೀನ್, ಧರ್ಮಪಾಲ ದೇವಾಡಿಗ, ನೀಲಯ್ಯ ಕೋಟ್ಯಾನ್, ರತ್ನಾಕರ ಶೆಟ್ಟಿ ಎಕ್ಕಾರು, ಕಸ್ತೂರಿ ಪಂಜ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ತಿಮ್ಮಪ್ಪ ಕೋಟ್ಯಾನ್, ಸಂಜೀವ ಮಡಿವಾಳ, ಪ್ರಕಾಶ್ ಕುಕ್ಯಾನ್, ಕೇಶವ ಕಟೀಲ್, ಲೋಕಯ್ಯ ಸಾಲಿಯಾನ್, ಈಶ್ವರ್ ಕಟೀಲ್, ಗಣೇಶ್ ಕುಂಟಲ್ಪಾಡಿ, ಗೀತಾ, ಪೂಜಾ ಕಾಮತ್, ಎವಿಲಿಯಾ ಸಿಕ್ವೇರ, ಚಿದಾನಂದ ಗುರಿಕಾರ, ಗೋಪಾಲಕೃಷ್ಣ ಆಚಾರ್ಯ, ಸುನೀಲ್ ಪಾಯಸ್, ದೇವಿದಾಸ್ ಕಾಮತ್, ವಿಶ್ವನಾಥ ಕುದ್ರು ಮೊದಲಾದವರು ಉಪಸ್ಥಿತರಿದ್ದರು. ಸೇವಾಕರ್ತ ಚಂದ್ರಶೇಖರ ಬೆಳ್ಚಡ ಸ್ವಾಗತಿಸಿ, ರಾಜೇಂದ್ರ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.