ಸಾಲಿಗ್ರಾಮ : ಬೆಂಗಳೂರಿನ ಸಮಸ್ತರು ರಾಗ ಸಂಶೋಧನಾ ಕೇಂದ್ರ ಪ್ರಸ್ತುತ ಪಡಿಸುವ ದೇಶಿ ಖ್ಯಾತಿಯ ರಂಗ ನಿರ್ದೇಶಕ, ಸಾಂಸ್ಕೃತಿಕ ಸಂಘಟಕ ಗೋಪಾಲಕೃಷ್ಣ ನಾಯರಿಯವರ ಪ್ರಥಮ ವರ್ಷದ ‘ಸಂಸ್ಮರಣೆ ಕಾರ್ಯಕ್ರಮ’ವು ದಿನಾಂಕ 28-01-2024 ಸಂಜೆ ಗಂಟೆ 5-00ಕ್ಕೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ.
ಐರೊಡಿ ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷರಾದ ಶ್ರೀ ಆನಂದ್ ಸಿ. ಕುಂದರ್ ಅಧ್ಯಕ್ಷತೆ ವಹಿಸಲಿದ್ದು, ಉಡುಪಿಯ ರಂಗಕರ್ಮಿ, ರಂಗ ನಿರ್ದೇಶಕರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್ ಇವರು ಸಂಸ್ಮರಣಾ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದರು ಹಾಗೂ ನಿರ್ದೇಶಕರಾದ ಶ್ರೀ ಜಯರಾಮ್ ನೀಲಾವರ ಇವರಿಗೆ 2024ರ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಬೇಬಿ ಸಾನಿಧ್ಯ ನಾಯರಿ, ಕುಮಾರ ನೂತನ ಎಂ. ನಾಯರಿ, ಕುಮಾರಿ ಸಮೀಕ್ಷಾ, ಕುಮಾರಿ ಉನ್ನತಿ ಎಮ್. ನಾಯರಿ ಮತ್ತು ಕುಮಾರಿ ವೈಷ್ಣವಿ ಎನ್. ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿಯವರಿಂದ ಪ್ರೊ. ಎಂ.ಎ. ಹೆಗಡೆ ರಚಿತ ಯಕ್ಷಗಾನ ‘ಲವ ಕುಶ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.