Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಎಂ.ವಿ. ಸೂರಪ್ಪ ಸ್ಮರಣಾರ್ಥ ದತ್ತಿ ಉಪನ್ಯಾಸ | ಮೇ 16

    May 13, 2026

    ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ

    May 13, 2026

    ನೃತ್ಯ ವಿಮರ್ಶೆ | ದೈವೀಕ ಸಾಕ್ಷಾತ್ಕಾರದ ಗೌರಿ ಕೃಷ್ಣಳ ಸಾತ್ವಿಕಾಭಿನಯ

    May 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಂಗಳೂರು ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಲಲಿತಕಲಾ ಸಂಘದ ಚಟುವಟಿಕೆಗಳ ಉದ್ಘಾಟನೆ
    Cultural

    ಮಂಗಳೂರು ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಲಲಿತಕಲಾ ಸಂಘದ ಚಟುವಟಿಕೆಗಳ ಉದ್ಘಾಟನೆ

    August 7, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್: ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಲಲಿತಕಲಾ ಸಂಘದ ಚಟುವಟಿಕೆಗಳ ಉದ್ಘಾಟನೆಯು ದಿನಾಂಕ 31-07-2023ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ಕನ್ನಡ ಹಾಗೂ ತುಳು ಚಿತ್ರರಂಗದ ಪ್ರಶಸ್ತಿ ವಿಜೇತ ಯುವ ಸಂಕಲನಕಾರ ಶ್ರೀ ರಾಹುಲ್ ವಸಿಷ್ಠರವರು ತಮ್ಮ ತಬಲಾ ವಾದನದ ಮೂಲಕ ಉದ್ಘಾಟನೆಯನ್ನು ನೆರವೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. “ಚಲನಚಿತ್ರ ರಂಗದಲ್ಲಿ ಸಣ್ಣಪುಟ್ಟ ಹೆಜ್ಜೆಗಳನ್ನಿಡುತ್ತಾ, ದೊಡ್ಡ ಕನಸಿನ ಬುತ್ತಿಯನ್ನು ಕಟ್ಟಿಕೊಂಡು ಬಂದೆ. ಸತತ ಪ್ರಯತ್ನದ ಫಲವಾಗಿ ಆ ಕನಸುಗಳು ನನಸಾಗಿ ನಾನಿಲ್ಲಿ ನಿಂತಿರುವೆ” ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲಕ್ಷ್ಮೀ ಪಿ. ಅಧ್ಯಕ್ಷೀಯ ನುಡಿಗಳನ್ನಾಡಿದರು. ಉಪಪ್ರಾಂಶುಪಾಲರಾದ ಶ್ರೀಮತಿ ಸುನೀತಾ ಕೆ., ವಿದ್ಯಾರ್ಥಿ ಕ್ಷೇಮ ಪಾಲಕಿ ಶ್ರೀಮತಿ ಪಲ್ಲವಿ, ಉಪನ್ಯಾಸಕರಾದ ಶ್ರೀಮತಿ ಚೈತ್ರ ಶೆಟ್ಟಿ, ಶ್ರೀಮತಿ ಶೈಲಾಜಾ, ಶ್ರೀಮತಿ ಜಯಂತಿ ಅಮೀನ್ ಹಾಗೂ ಮತ್ತಿತರ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.

    ಕಾರ್ಯಕ್ರಮದ ಅಂಗವಾಗಿ ಲಲಿತಕಲಾ ಸಂಘದ ಸಂಯೋಜಕರಾದ ಶ್ರೀ ರಾಕೇಶ್ ಹೊಸಬೆಟ್ಟು ಅವರು ಶ್ರೀ ರಾಹುಲ್ ವಸಿಷ್ಠ ಅವರ ಜೊತೆ ಸಂವಾದ ನಡೆಸಿಕೊಟ್ಟರು. ಇದರ ಸಲುವಾಗಿ ವಿದ್ಯಾರ್ಥಿ ಸಮೂಹ ಹಾಗೂ ಉಪನ್ಯಾಸಕರಿಂದ ಕೇಳಲಾದ ಅನೇಕ ಪ್ರಶ್ನೆಗಳಿಗೆ ಶ್ರೀ ರಾಹುಲ್ ಅವರು ತಮ್ಮ ಅನುಭವದ ಅಮೃತಧಾರೆಯನ್ನು ಹರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಾರ್ಯದರ್ಶಿತ್ರಯರಾದ ಶ್ರೀ ಸುಪ್ರೀತ್ ಸ್ವಾಗತಿಸಿ, ಕು.ಚಿನ್ಮಯಿ ಎಸ್. ನಿರೂಪಿಸಿ, ಶ್ರೀ ವಿನೀತ್ ರಾಜ್ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ಶಕ್ತಿ ವಿದ್ಯಾಸಂಸ್ಥೆಯಲ್ಲಿ ಸಾಹಿತ್ಯ ಸಪ್ತಾಹದ ಅಂಗವಾಗಿ ಪ್ರಶಸ್ತಿ ಪ್ರದಾನ
    Next Article ನೃತ್ಯ ವಿಮರ್ಶೆ | ‘ನಿರತ’ ರಂಗಮನೆಯಲ್ಲಿ ‘ಸಂಪೂರ್ಣ ರಾಮಾಯಣ’ – ನೃತ್ಯ ದಂಪತಿಗಳ ಅದ್ಭುತ ಪ್ರದರ್ಶನ
    roovari

    Add Comment Cancel Reply


    Related Posts

    ಕಾಸರಗೋಡಿನ ರಂಗಚಿನ್ನಾರಿಯ ‘ವಿಂಶತಿ ಹಬ್ಬ’ | ಮೇ 10

    May 6, 2026

    ಉಡುಪಿ ತಾಲೂಕು 16ನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ಭೀಷ್ಮೋತ್ಸವ’ | ಮೇ 03

    May 1, 2026

    ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದಿಂದ ‘ಕನ್ನಡ ಝೇಂಕಾರ’

    April 27, 2026

    ಬ್ರಹ್ಮಾವರದ ಆಶ್ರಯ ಅಡಿಟೋರಿಯಂನಲ್ಲಿ ‘ನೃತ್ಯ-ನಾದ ವೈಭವ’ | ಏಪ್ರಿಲ್ 28  

    April 27, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.