ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ಮತ್ತು ನಾರಾಯಣ ಗುರು ವಿದ್ಯಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಪ್ರಯುಕ್ತ ‘ಗುರು ಚಿತ್ತಾರ-2026’ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 23 ಆಗಸ್ಟ್ 2026ರಂದು ಬೆಳಗ್ಗೆ ಗಂಟೆ 10-00ಕ್ಕೆ ಕುದ್ರೋಳಿಯ ನಾರಾಯಣ ಗುರು ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯವರಿಗೆ ಭಾಗವಹಿಸಲು ಅವಕಾಶವಿದ್ದು, ಸ್ಪರ್ಧೆಯು ಸಬ್ ಜೂನಿಯರ್ ವಿಭಾಗ (5, 6, 7ನೇ ತರಗತಿ) ಪೆನ್ಸಿಲ್ ನಲ್ಲಿ ನಾರಾಯಣ ಗುರುಗಳ ಚಿತ್ರ, ಜೂನಿಯರ್ ವಿಭಾಗ (8, 9, 10ನೇ ತರಗತಿ) ಕಲರ್ ನಲ್ಲಿ ನಾರಾಯಣ – ಗುರುಗಳ ಚಿತ್ರ, ಸೀನಿಯರ್ ವಿಭಾಗ ಪಿ.ಯು.ಸಿ. ಹಾಗೂ ಪದವಿ ವಿದ್ಯಾರ್ಥಿಗಳಿಗೆ ನಾರಾಯಣ ಗುರುಗಳ ಜೀವನದ ಘಟನೆಗಳ ಒಂದು ಸನ್ನಿವೇಶ ಕಲರ್‌ನಲ್ಲಿ ಚಿತ್ರ ಬಿಡಿಸಬೇಕಾಗಿದೆ.
ನೋಂದಣಿಯು ಸ್ಪರ್ಧೆಯ ದಿನ ಬೆಳಗ್ಗೆ 9ರಿಂದ 10 ಗಂಟೆ ತನಕ ನಡೆಯಲಿದ್ದು, ಭಾಗವಹಿಸುವವರು ಶಾಲೆಯ ಗುರುತಿನ ಚೀಟಿ ಅಥವಾ ತರಗತಿಯ ಧೃಡಪತ್ರವನ್ನು ತರಬೇಕು. ಡ್ರಾಯಿಂಗ್ ಶೀಟ್ ಆಯೋಜಕರು ನೀಡಲಿದ್ದು, ಚಿತ್ರಕಲೆಗೆ ಸಂಬಂಧಿಸಿದ ಪರಿಕರವನ್ನು ಸ್ಪರ್ಧಾಳುಗಳು ತರಬೇಕು. ಸಬ್ ಜೂನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ಸ್ಪರ್ಧಾಳುಗಳು ಗುರುಗಳ ಭಾವಚಿತ್ರ ನೋಡಿ ಬಿಡಿಸಲು ಅವಕಾಶವಿದೆ ಎಂದು ಯೂನಿಯನ್ನಿನ ಪ್ರ.ಕಾ. ಜೀವನ್ ಕುಮಾರ್ ತೊಕ್ಕೊಟ್ಟು ಇವರು ತಿಳಿಸಿದ್ದಾರೆ.
