Subscribe to Updates

    Get the latest creative news from FooBar about art, design and business.

    What's Hot

    ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ

    February 18, 2026

    ಪ್ರಾತಿನಿಧಿಕ ಸಂಕಲನಕ್ಕಾಗಿ ಕಥೆ, ಪ್ರಬಂಧ, ಲೇಖನಗಳ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 10

    February 18, 2026

    ಕಾಸರಗೋಡು-ಕರ್ನಾಟಕ ‘ಚುಟುಕು ಸಾಹಿತ್ಯ ಸಮ್ಮೇಳನ’ದ ಆಮಂತ್ರಣ ಪತ್ರಿಕೆ ಬಿಡುಗಡೆ

    February 18, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ‘ಹಿರಿಯೆರೊಟ್ಟುಗೊಂಜಿ ದಿನ’ ವಿಶಿಷ್ಟ ಕಾರ್ಯಕ್ರಮ | ಡಿಸೆಂಬರ್ 01
    Cultural

    ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ‘ಹಿರಿಯೆರೊಟ್ಟುಗೊಂಜಿ ದಿನ’ ವಿಶಿಷ್ಟ ಕಾರ್ಯಕ್ರಮ | ಡಿಸೆಂಬರ್ 01

    November 30, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪೆರ್ಡೂರು : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಪೆರ್ಡೂರು ಇದರ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಹಿರಿಯ ನಾಗರಿಕರಿಗಾಗಿ ‘ಹಿರಿಯೆರೊಟ್ಟುಗೊಂಜಿ ದಿನ’ ವಿಶಿಷ್ಟ ಕಾರ್ಯಕ್ರಮವನ್ನು ದಿನಾಂಕ 01 ಡಿಸೆಂಬರ್ 2024ರಂದು ಬೆಳಗ್ಗೆ 9-00 ಗಂಟೆಗೆ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ.

    ಈ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯರನ್ನು ರಂಜಿಸುವ ಸಲುವಾಗಿ ಹಾಗೂ ಅವರಲ್ಲಿರುವ ಸಾಂಸ್ಕೃತಿಕ ಆಸಕ್ತಿಯ ಹಾಡು, ನೃತ್ಯ, ರಾಧೆ-ಕೃಷ್ಣ ವೇಷ, ಮೋಜಿನ ಆಟಗಳು, ಹಾಸ್ಯ, ಛದ್ಮವೇಷ ಹಾಗೂ ಮತ್ತಿರರ ಸ್ಪರ್ಧಾ ಚಟುವಟಿಕೆಗಳು ಪ್ರಸ್ತುತಗೊಳ್ಳಲಿವೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ವಯಸ್ಸಿನ ದಾಖಲೆಯೊಂದಿಗೆ ಭಾಗವಹಿಸಬಹುದು. ಹಿರಿಯ ನಾಗರಿಕರಿಗೆ ಸ್ಪರ್ಧೆಗಳಿದ್ದು ವಿಜೇತರಿಗೆ ಬಹುಮಾನ ನೀಡಲಾಗುವುದು.

    ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಹಲವಾರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಗೊಳ್ಳುತ್ತಿದ್ದು, ಉಡುಪಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬದುಕಿನುದ್ದಕ್ಕೂ ತನ್ನವರಿಗಾಗಿ ದುಡಿದು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಯೌವ್ವನವನ್ನು ಸವೆಸಿ ಬದುಕಿನ ಮುಸ್ಸಂಜೆಯಲ್ಲಿರುವ ಜೀವಗಳಿಗೆ ಪ್ರೀತಿಯ ಆಸರೆ ನೀಡುವ ಜವಾಬ್ದಾರಿ ಕಿರಿಯರಾದ ನಮ್ಮೆಲ್ಲರದ್ದು. ಅವರು ಹಾಕಿಕೊಟ್ಟ ಬದುಕಿನ ಅಡಿಪಾಯದಲ್ಲಿ ನಾವಿಂದು ಗೂಡು ಕಟ್ಟಿಕೊಂಡಿದ್ದೇವೆ. ನಮ್ಮ ಬಾಲ್ಯದಲ್ಲಿ ಅವರು ತೋರಿದ ಪ್ರೀತಿ ವಾತ್ಸಲ್ಯ ಮಮಕಾರವನ್ನು ನಾವಿಂದು ಅವರಿಗೆ ಮರಳಿಸಬೇಕಾಗಿದೆ. ಎಲ್ಲಾ ಗೌರವಾನ್ವಿತ ಹಿರಿಯ ನಾಗರಿಕರನ್ನು ದಿನವಿಡೀ ರಂಜಿಸಿ ಅವರ ಮನ ಸಂತೋಷ ಪಡಿಸುವ, ತನ್ಮೂಲಕ ಹಿರಿಯರ ಸೇವೆ ಗಯ್ಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ರಂಗಭೂಮಿ ವತಿಯಿಂದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ | ಡಿಸೆಂಬರ್ 04ರಿಂದ 15
    Next Article ಮಂಗಳೂರಿನಲ್ಲಿ ‘ಮಣ್ಣಿನಾಟ’ ಮಕ್ಕಳಿಗಾಗಿ ಒಂದು ದಿನದ ಕಾರ್ಯಾಗಾರ | ಡಿಸೆಂಬರ್ 08
    roovari

    Add Comment Cancel Reply


    Related Posts

    ಪ್ರಾತಿನಿಧಿಕ ಸಂಕಲನಕ್ಕಾಗಿ ಕಥೆ, ಪ್ರಬಂಧ, ಲೇಖನಗಳ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 10

    February 18, 2026

    ಕಾಸರಗೋಡು-ಕರ್ನಾಟಕ ‘ಚುಟುಕು ಸಾಹಿತ್ಯ ಸಮ್ಮೇಳನ’ದ ಆಮಂತ್ರಣ ಪತ್ರಿಕೆ ಬಿಡುಗಡೆ

    February 18, 2026

    ಸುಳ್ಯದಲ್ಲಿ ಡಾ. ಪೂವಪ್ಪ ಕಣಿಯೂರು ಇವರ ಕೃತಿ ಬಿಡುಗಡೆ

    February 17, 2026

    ಡಾ. ಬಿ. ಜನಾರ್ದನ ಭಟ್ ಇವರ ‘ತುಳುನಾಡಿನ ಬೆರ್ಮರು’ ಹಾಗೂ ‘ಹೊಸಹೊಳಲು’ ಕೃತಿಗಳ ಲೋಕಾರ್ಪಣೆ

    February 17, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.