ಮಂಗಳೂರು : ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫೋರಂ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಬ್ಯಾರೀಸ್ ಫೆಸ್ಟಿವಲ್-2025 (ಬ್ಯಾರಿ ಬಹುಭಾಷಾ ಸೌಹಾರ್ದ ಉತ್ಸವ)ಕ್ಕೆ ದಿನಾಂಕ 19 ಏಪ್ರಿಲ್ 2025ರ ಶನಿವಾರ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ “ಸೌಹಾರ್ದ ಸಮ್ಮಿಲನದ ಕಲ್ಪನೆಯಡಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇದರಲ್ಲಿ ಸಮಾಜದ ಸರ್ವರೂ ಪಾಲ್ಗೊಳ್ಳಬೇಕು. ದ. ಕ. ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉತ್ಸವ ಸಮಿತಿಯ ಅಧ್ಯಕ್ಷ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ. ಎ. ಬಾವ ಬ್ಯಾರೀಸ್ ಫೆಸ್ಟಿವಲ್ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ” ಎಂದರು
ಉತ್ಸವದ ಅಂಗವಾಗಿ ಮೆಹಂದಿ ಸ್ಪರ್ಧೆಗಳು, ವಿವಿಧ ಗೋಷ್ಠಿಗಳು, ಯುವ ಸಮೂಹಕ್ಕೆ ಭವಿಷ್ಯದ ಕುರಿತಾಗಿ ಮಾರ್ಗದರ್ಶನ ಮತ್ತು ದಫ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹುಸೈನ್ ಕಾಟಿಪಳ್ಳ ಬಳಗದಿಂದ ಬಹುಭಾಷಾ ಸೌಹಾರ್ದ ಸಂಗೀತ ಸಂಗಮ ನಡೆಯಿತು.
ಕವಿ ಬಶೀರ್ ಅಹ್ಮದ್ ಕಿನ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಱಖಡಕ್‌ಱ ಕವಿಗೋಷ್ಠಿಯಲ್ಲಿ ಅಶ್ರಫ್ ಅಪೋಲೋ, ತಾಜುದ್ದೀನ್ ಅಮ್ಮುಂಜೆ, ಸರ್ಫ್ರಾಝ್ ಆಲಂಪಾಡಿ, ವಿ. ಇಬ್ರಾಹೀಂ ನಡುಪದವು ಕವನಗಳನ್ನು ವಾಚಿಸಿದರು. ಬಹುಭಾಷಾ ಕವಿಗೋಷ್ಠಿಯಲ್ಲಿ ಕವಯತ್ರಿಗಳಾದ ರಮ್ಯಾ ಮೂರ್ನಾಡು, ಸಾರಾ ಅಲಿ ಪರ್ಲಡ್ಕ, ಫೆಲ್ಸಿ ಲೋಬೋ, ರಮೀಝಾ ಎಂ. ಬಿ., ಫರ್ಹಾನಾ ಉಳ್ಳಾಲ್, ಆಯಿಶಾ ಪೆರ್ನೆ, ಅಸ್ಮತ್ ವಗ್ಗ ಕವನಗಳನ್ನು ವಾಚಿಸಿದರು. ಶಮೀಮಾ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Previous Articleಮಂಚಿ ನಾಟಕೋತ್ಸವ ‘ರಂಗಭೂಮಿಕಾ-2025’ | ಏಪ್ರಿಲ್ 26