Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ವೀಣಾ ವಾದನ ಗಂಧರ್ವ ಆರ್. ಕೆ. ಸೂರ್ಯನಾರಾಯಣ

    June 14, 2025

    ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 22

    June 14, 2025

    ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ

    June 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧರ್ಮಸ್ಥಳದಲ್ಲಿ ಉದ್ಘಾಟನೆಗೊಂಡ ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಪರ್ವ’
    Yakshagana

    ಧರ್ಮಸ್ಥಳದಲ್ಲಿ ಉದ್ಘಾಟನೆಗೊಂಡ ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಪರ್ವ’

    October 12, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೋಟ : ಸಾಲಿಗ್ರಾಮ ಮಕ್ಕಳ ಮೇಳದ ಐವತ್ತರ ಸಂಭ್ರಮ ‘ಸುವರ್ಣ ಪರ್ವ’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 10 ಅಕ್ಟೋಬರ್ 2024ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧಾರ್ಮಿಕ ಪ್ರವಚನ ಮಂದಿರದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ “ಮಕ್ಕಳ ಮನಸ್ಸಿನಲ್ಲಿ ಕಲೆಯ ಬೀಜವನ್ನು ಬಿತ್ತಿದಾಗ ಅದು ಸಾರ್ಥಕವಾಗಿ ಮುಂದೆ ಕಲಾ ಶ್ರೀಮಂತಿಕೆಯನ್ನು ಮೆರೆಯುವುದುಕ್ಕೆ ಸಾಧ್ಯವಾಗುತ್ತದೆ. ಆದಷ್ಟು ಹೆಚ್ಚು ಹೆಚ್ಚು ಮಕ್ಕಳನ್ನು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಆ ನಿಟ್ಟಿನಲ್ಲಿ ಚಾರಿತ್ರಿಕ ದಾಖಲೆಯನ್ನು ನಿರ್ಮಿಸಿ, ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ ಬೆಳೆಸಿ, ಸಾಂಪ್ರದಾಯಿಕ ರಂಗ ಪ್ರದರ್ಶನದೊಂದಿಗೆ ಐವತ್ತು ವರ್ಷಗಳ ಕಾಲ ಮುನ್ನೆಡಿಸಿದ ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರ ಸಾಧನೆ ಅಪೂರ್ವವಾದುದು. ಅದೆಷ್ಟೋ ಮಕ್ಕಳು ಈ ತಂಡದಿಂದ ಕಲಾವಿದರಾಗಿ, ಕಲಾಭಿಮಾನಿಗಳಾಗಿ ಹೊರಬಂದಿದ್ದಾರೆ. ಮೇಳವನ್ನು ಈಗಲೂ ಮುನ್ನೆಡೆಸುತ್ತಿರುವ ಈಗಿನ ನಿರ್ದೇಶಕರ ಸಾಹಸ ಶ್ಲಾಘನೀಯವಾದುದು. ಸುವರ್ಣ ಪರ್ವವನ್ನು ಆಚರಿಸುತ್ತಿರುವ ಮಕ್ಕಳ ಮೇಳದ ಯಕ್ಷ ರಥವು ಸಾಗುತ್ತ ಸಾಗುತ್ತಾ ಶತಕದತ್ತ ಯಶಸ್ವಿಯಾಗಿ ಸಾಗಲಿ” ಎಂದು ಹಾರೈಸಿದರು.

    ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದರು. ತಾಳಮದ್ದಳೆಯ ಖ್ಯಾತ ಅರ್ಥಧಾರಿ ಹಾಗೂ ಸಂಘಟಕ ಉಜಿರೆ ಅಶೋಕ ಭಟ್ ಇವರು ಆಶಯ ನುಡಿಗಳಾನ್ನಾಡಿದರು. ಮಕ್ಕಳ ಮೇಳ ಟ್ರಸ್ಟ್ ಇದರ ಕಾರ್ಯಾಧ್ಯಕ್ಷರಾದ ಕೆ. ಮಹೇಶ್ ಉಡುಪ, ಉಪಾಧ್ಯಕ್ಷ ಜನಾರ್ದನ ಹಂದೆ, ಮಕ್ಕಳ ಮೇಳದ ಮೊದಲ ವರ್ಷದ ಕಲಾವಿದ ಮೋಹನದಾಸ ಶಾನುಭಾಗ್ ಉಪಸ್ಥಿತರಿದ್ದರು. ಮಕ್ಕಳ ಮೇಳದ ಪ್ರಾಕ್ತನ ಕಲಾವಿದರಾದ ಸಾಲಿಗ್ರಾಮ ರಾಘವೇಂದ್ರ ನಾಯಿರಿ ಸ್ವಾಗತಿಸಿ, ಮಕ್ಕಳ ಮೇಳದ ನಿರ್ದೇಶಕ ಸುಜಯೀಂದ್ರ ಹಂದೆ ನಿರ್ವಹಿಸಿ, ಕುಮಾರಿ ಕಾವ್ಯ ವಂದಿಸಿದರು. ಉದ್ಘಾಟನಾ ಪರ್ವದ ಅಂಗವಾಗಿ ನವರಾತ್ರಿಯ ಶುಭಾವಸರದಲ್ಲಿ ಮಕ್ಕಳ ಮೇಳದ ಕಲಾವಿದರಿಂದ ಹೂವಿನಕೋಲು ಪ್ರದರ್ಶನ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ‘ಹೊಸ ನಾಟಕ ತಯಾರಿ ಶಿಬಿರ’ದ ಉದ್ಘಾಟನಾ ಸಮಾರಂಭ
    Next Article ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ಮೇಘಾ ಸಿ.ಕೆ. ಇವರ ನೃತ್ಯ ಪ್ರದರ್ಶನ | ಅಕ್ಟೋಬರ್ 14
    roovari

    Add Comment Cancel Reply


    Related Posts

    ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ

    June 14, 2025

    ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ | ಜೂನ್ 15 ರಿಂದ 21

    June 14, 2025

    ಸುಬ್ರಾಯ ಹೊಳ್ಳರಿಗೆ ‘ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ’

    June 14, 2025

    ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

    June 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.