ಕೋಟ : ಯಕ್ಷಾಂತರಂಗ ವ್ಯವಸಾಯಿ ಯಕ್ಷ ತಂಡ (ರಿ.) ಕೋಟ ತಂಡದ ಹತ್ತನೇ ವರ್ಷದ ಉಚಿತ ಯಕ್ಷಗಾನ ಹೆಜ್ಜೆ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 08 ಜೂನ್ 2025ರಂದು ಡಾ. ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ಇಲ್ಲಿ ನಡೆಯಿತು.
ತರಗತಿಯನ್ನು ತಾಳ ನುಡಿಸುವುದರ ಮೂಲಕ ಉದ್ಘಾಟಿಸಿದ ಶ್ರೇಷ್ಠ ಮಹಿಳಾ ಯಕ್ಷಗಾನ ಕಲಾವಿದೆ, ರಂಗಭೂಮಿ ನಿರ್ದೇಶಕಿ, ‘ರಸರಂಗ’ ಕದ್ರಿಕಟ್ಟು ಸಂಸ್ಥೆಯ ಸಂಚಾಲಕಿಯಾದ ಸುಧಾ ಮಣೂರು ಮಾತನಾಡಿ “ಮುಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಉತ್ತಮ ಯಕ್ಷಗಾನ ಕಲಿಯುವಿಕೆಗಾಗಿ ಶ್ರೇಷ್ಠ ಅನುಭವಿ ಯಕ್ಷ ಗುರುಗಳ ಅಗತ್ಯತೆ ಇದೆ, ಅಂತಹ ಗುರುಗಳು ಈ ತಂಡದಲ್ಲಿದ್ದು ಕ್ರಮ ಪ್ರಕಾರವಾದ ಯಕ್ಷ ತರಬೇತಿಯನ್ನು ಕಳೆದ 10 ವರ್ಷಗಳಿಂದ ಉಚಿತವಾಗಿ ನೀಡುತ್ತಿರುವುದು ಹೆಮ್ಮೆ ತರುತ್ತದೆ. ಇಂತಹ ಗುರುಗಳಿಂದ ವಿದ್ಯೆಯನ್ನು ಕಲಿಯುತ್ತಿರುವ ನೀವೆಲ್ಲ ಪುಣ್ಯವಂತರು” ಎಂಬುದಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗೆ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಡಾ. ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ಟ್ರಸ್ಟ್ ಹಾಗೂ ಯಕ್ಷಾಂತರಂಗದ ಕಾರ್ಯಾಧ್ಯಕ್ಷರಾದ ಎಂ. ಸುಬ್ಬರಾಯ ಆಚಾರ್ಯ ವಹಿಸಿದ್ದರು. ಅತಿಥಿಗಳಾಗಿ ಅಜಪುರ ಯಕ್ಷಗಾನ ಸಂಘದ ಕಾರ್ಯದರ್ಶಿ, ಪ್ರತೀಶ್ ಕುಮಾರ್ ಭಾಗವಹಿಸಿದರು.
ಸಂಸ್ಥೆಯ ಕಾರ್ಯದರ್ಶಿ ಹಾಗೂ ಗುರುಗಳಾದ ಚಿತ್ರಪಾಡಿ ಕೃಷ್ಣಮೂರ್ತಿ ಊರಾಳ ಸ್ವಾಗತಿಸಿ ಪ್ರಸ್ತಾವನೆಗೈದರು ನಂತರ ವಿದ್ಯಾರ್ಥಿಗಳಿಗೆ ಕಲಿಕಾ ತರಗತಿ ಪ್ರಾರಂಭಿಸಲಾಯಿತು.
Subscribe to Updates
Get the latest creative news from FooBar about art, design and business.
Previous Articleಡಾ. ಪುರುಷೋತ್ತಮ್ ಬಿಳಿಮಲೆ ಇವರಿಗೆ ‘ಕನ್ನಡ ಪಯಸ್ವಿನಿ ಪ್ರಶಸ್ತಿ’