ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಸುಜಾತ ಎಲ್ ಶೆಟ್ಟಿ ಹಾಗೂ ಲೀಲಾಧರ್ ಬಿ ಶೆಟ್ಟಿ ಕಟ್ಲ ಇವರ ಮಗಳಾಗಿ 28.03.2000ರಂದು ಬಿಂದಿಯಾ ಶೆಟ್ಟಿ ಅವರ ಜನನ. ಪ್ರಸ್ತುತ CA ವ್ಯಾಸಂಗ ಮಾಡುತ್ತಿದ್ದಾರೆ. ವಿದುಷಿ ಪ್ರತಿಮಾ ಶ್ರೀಧರ್ ಇವರ ಭರತನಾಟ್ಯ ಗುರುಗಳು ಹಾಗೂ ಶ್ರೀಯುತ ರಾಕೇಶ್ ರೈ ಅಡ್ಕ ಇವರ ಯಕ್ಷಗಾನ ಗುರುಗಳು.
ಗುರುಗಳ ಮಾರ್ಗದರ್ಶನ ಹಾಗೂ ಅನುಭವಿ ಕಲಾವಿದರ ಸಲಹೆ ಪಡೆದುಕೊಂಡು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಬಿಂದಿಯಾ ಶೆಟ್ಟಿ.
ಮಾನಿಷಾದ, ಶ್ರೀನಿವಾಸ ಕಲ್ಯಾಣ, ಸುದರ್ಶನ ವಿಜಯ, ಶಶಿಪ್ರಭಾ ಪರಿಣಯ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
ಸೀತೆ, ಶ್ರೀದೇವಿ, ಪದ್ಮಾವತಿ, ಶ್ರೀ ಕೃಷ್ಣ, ಲಕ್ಷ್ಮೀ ಇತ್ಯಾದಿ ಇವರ ನೆಚ್ಚಿನ ವೇಷಗಳು.
ರಾಕೇಶ್ ರೈ ಅಡ್ಕ ಅವರ ಸನಾತನ ಯಕ್ಷಾಲಯ, ಪೂರ್ಣಿಮಾ ಯತೀಶ್ ರೈ ಅವರ ಶ್ರೀ ಮಹಾ ಗಣಪತಿ ಮಹಿಳಾ ಯಕ್ಷಗಾನ ಮಂಡಳಿ ಸುರತ್ಕಲ್ ಹಾಗೂ ಹಲವಾರು ಹವ್ಯಾಸಿ ಹಾಗೂ ವೃತ್ತಿ ಪರ ಕಲಾವಿದರೊಂದಿಗೆ ವೇಷ ಮಾಡಿದ ಅನುಭವ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಹಲವಾರು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಯುವ ಜನತೆಯ ಮನಸ್ಸಿನಲ್ಲಿ ಯಕ್ಷಗಾನ ಆಸಕ್ತಿ ಮೂಡಿದೆ, ತನ್ಮೂಲಕ ಯಕ್ಷಗಾನ ಬೆಳೆಯಲು ಸಹಕಾರಿಯಾಗಿದೆ. ಯಕ್ಷಗಾನ ಚೌಕಟ್ಟಿನೊಳಗೆ ನಾವೀನ್ಯತೆಯನ್ನು ಒಳಪಡಿಸುವ ಪ್ರಯತ್ನಗಳು ಇನ್ನಷ್ಟು ಯುವ ಮನಸ್ಸುಗಳನ್ನು ಆಕರ್ಷಿಸಲು ಸಹಕಾರಿಯಾಗಿದೆ.
ವೃತ್ತಿ ಜೀವನದೊಂದಿಗೆ ಹವ್ಯಾಸಿ ಕಲಾವಿದೆಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರೆಯುವ ಆಸೆ ಇದೆ ಎಂದು ಹೇಳುತ್ತಾರೆ ಬಿಂದಿಯಾ ಶೆಟ್ಟಿ.
ಸನ್ಮಾನ ಹಾಗೂ ಪ್ರಶಸ್ತಿಗಳು:-
SDM ಯಕ್ಷೋತ್ಸವದಲ್ಲಿ ಹಲವಾರು ಬಾರಿ “ಉತ್ತಮ ವ್ಯಯಕ್ತಿಕ ಪ್ರದರ್ಶನ” ಪ್ರಶಸ್ತಿ.
ಮಂಚಿ ಯಕ್ಷೋತ್ಸವದಲ್ಲಿ ಉತ್ತಮ ಸ್ತ್ರೀ ವೇಷ ಪ್ರಶಸ್ತಿ.
AJ Institute of Technology ನಡೆಸಿದ ಯಕ್ಷೋತ್ಸವದಲ್ಲಿ “ಉತ್ತಮ ವ್ಯಯಕ್ತಿಕ ಪ್ರದರ್ಶನ” ಪ್ರಶಸ್ತಿ.
2021ರ ರಾಷ್ಟ್ರೀಯ ಯುವಜನೋತ್ಸವದ ನಾಟಕ ವಿಭಾಗದಲ್ಲಿ ಪ್ರಥಮ ಸ್ಥಾನ.
2019 – 20ರ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂ ಸೇವಕಿ ರಾಜ್ಯ ಪ್ರಶಸ್ತಿ.
2021ರ ಸೆಪ್ಟೆಂಬರ್ 24 ರಂದು ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ರವರಿಂದ 2019- 20ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂ ಸೇವಕಿ “ರಾಷ್ಟ್ರ ಪ್ರಶಸ್ತಿ” ಯನ್ನು ಸ್ವೀಕರಿಸಿರುತ್ತಾರೆ.
ಕರಾವಳಿ ಅತ್ಯುತ್ತಮ ಯುವತಿ ಪ್ರಶಸ್ತಿ.
ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಪ್ರಶಸ್ತಿ.
ಬೆಂಗಳೂರು ಬಂಟ ಸಂಘದ ಐಕ್ಯತಾ ಯುವ ಪ್ರಶಸ್ತಿ.
ಜೆ.ಸಿ ಕಲಾ ರತ್ನ ಪ್ರಶಸ್ತಿ.
ಕರ್ನಾಟಕ ಚೇತನ ರಾಜ್ಯ ಪ್ರಶಸ್ತಿ.
ಕಲ್ಕೂರ ಸಾಧನಾ ಸಿರಿ ಪ್ರಶಸ್ತಿ.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಬಂಗಾರದ ಪದಕ.
ಭವಾನಿ ಫೌಂಡೇಶನ್ ರವರಿಂದ Appreciation Award ಹಾಗೂ Yenopoya Foundation ರವರಿಂದ accademic Excelation Award.
2019ರ ಚೈತನ್ಯ Outstanding Participant Award.
2018 ರಲ್ಲಿ ವಿಶ್ವ ಬಂಟ ಸಮ್ಮಿಲನದಲ್ಲಿ ಸನ್ಮಾನ.
2018 ಯಕ್ಷ ಧ್ರುವ ಪಟ್ಲ ಫೌಂಡೇಶನ್ ದೆಹಲಿ ಘಟಕದಿಂದ ಸನ್ಮಾನ.
ಚೆನ್ನೈನಲ್ಲಿ ನಡೆದ Pre-Rd ಶಿಬಿರದಲ್ಲಿ Most Valuable Student ಪ್ರಶಸ್ತಿ.
2020ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ.
ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಮುಂದೆ ಪ್ರದರ್ಶಿಸಿರುತ್ತಾರೆ.
ಆಳ್ವಾಸ್ ವಿದ್ಯಾರ್ಥಿ ಸಿರಿ 2017ರ ಉದ್ಘಾಟನೆ ಸಮಾರಂಭದ ಮುಖ್ಯ ನಿರೂಪಕಿಯಾಗಿ ಆಯ್ಕೆ.
ಭರತನಾಟ್ಯ senior grade ಪರೀಕ್ಷೆಯನ್ನು 95.5 % ಪಡೆದು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ.
ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ನೃತ್ಯ ಸ್ಫರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುತ್ತಾರೆ.
ಭರತನಾಟ್ಯ ಹಾಗೂ ಇತರ ನೃತ್ಯ ಪ್ರಕಾರ ಹಾಗೂ ಸಂಗೀತ ಇವರ ಹವ್ಯಾಸಗಳು.
ಮುಂಬಯಿ, ಪುಣೆ, ದೆಹಲಿ, ಬೆಂಗಳೂರು ಸೇರಿ ಅನೇಕ ಕಡೆ ಯಕ್ಷಗಾನ ಪ್ರದರ್ಶನ ನೀಡಿರುವ ಕೀರ್ತಿ ಇವರದು.
ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನ, ಪ್ರೋತ್ಸಾಹದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಬಿಂದಿಯಾ ಶೆಟ್ಟಿ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.