ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಸ್ವಸಿಕಾ ಬಿಸಿನೆಸ್ ಸ್ಕೂಲ್ ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 04 ಆಗಸ್ಟ್ 2026 ಮಂಗಳೂರಿನಲ್ಲಿ ಸ್ವಸಿಕಾ ಬಿಸಿನೆಸ್ ಸ್ಕೂಲ್ ಸಭಾಂಗಣದಲ್ಲಿ ‘ಚೌಕಿ : ರಚನೆ ಮತ್ತು ಸ್ವರೂಪ’ ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರಸಂಕಿರಣವನ್ನು ಆಯೋಜಿಸಿದೆ.
ಈ ವಿಚಾರಸಂಕಿರಣದಲ್ಲಿ ಸಂಶೋಧನಾ ಪ್ರಬಂಧ ಮಂಡನೆಗೆ ಅವಕಾಶವಿದ್ದು, ಸಿದ್ಧಪಡಿಸಬೇಕಾದ ಪ್ರಬಂಧಗಳ ವಿಷಯಗಳು ಈ ಕೆಳಗಿನಂತಿವೆ. ‘ಚೌಕಿ ಮತ್ತು ಬಣ್ಣಗಾರಿಕೆ’, ‘ಚೌಕಿಯ ಭೌತಿಕ ವಿನ್ಯಾಸ’, ‘ಚೌಕಿ ಮತ್ತು ಸಾಮಾಜಿಕ ಸಂಬಂಧಗಳು’, ‘ಚೌಕಿಯಲ್ಲಿ ನೇಪಥ್ಯ ಕಲಾವಿದರು’, ‘ಚೌಕಿ ಮತ್ತು ಧಾರ್ಮಿಕ ಪ್ರಜ್ಞೆ’, ‘ಚೌಕಿ ಮತ್ತು ವೇಷಭೂಷಣ’, ‘ಚೌಕಿಯಲ್ಲಿ ಬಳಕೆಯಾಗುವ ಪಾರಿಭಾಷಿಕ ಪದ ಮತ್ತು ಅರ್ಥ’, ‘ಚೌಕಿಯಲ್ಲಿ ಆಧುನಿಕತೆ’ ಇತ್ಯಾದಿ. ಭಾಗವಹಿಸುವವರ ಪ್ರಬಂಧಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಪ್ರಬಂಧ ಮಂಡಿಸುವ ಪ್ರತಿನಿಧಿಗಳು ಕಡ್ಡಾಯ ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೆ ಉಪಸ್ಥಿತರಿರಬೇಕು. ಪ್ರಬಂಧವನ್ನು ದಿನಾಂಕ 01 ಆಗಸ್ಟ್ 2026ರೊಳಗಾಗಿ [email protected] ಈ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬೇಕು. ಆಯ್ಕೆಗೊಂಡ ಪ್ರಬಂಧಗಳಲ್ಲಿ ಆಯ್ದ ಎಂಟು ಪ್ರಬಂಧಗಳಿಗೆ ಮಂಡನೆಗೆ ಅವಕಾಶವಿದ್ದು, ಬಳಿಕ ಗುಣಮಟ್ಟದ ಪ್ರಬಂಧಗಳಿಗೆ ಪ್ರಮಾಣಪತ್ರವನ್ನು ನೀಡಲಾಗುವುದು ಹಾಗೂ ಮುಂದೆ ಐ.ಎಸ್.ಬಿ.ಎನ್. ನಂಬರ್ ಇರುವ ಕೃತಿಯಲ್ಲಿ ಪ್ರಬಂಧಗಳನ್ನು ಪ್ರಕಟಿಸಲಾಗುವುದು. ವಿವರಗಳಿಗೆ 8310300875 ಅಥವಾ 9844617548 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.
