ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ದ. ಕ. ಜಿಲ್ಲಾ ತಾಲೂಕು ಘಟಕ ಮೂಡುಬಿದಿರೆ ಸಹಯೋಗದಲ್ಲಿ ‘ವಾಯ್ಸ್ ಆಫ್ ಆರಾಧನ’ ಇದರ ಪ್ರತಿಭೆಗಳಿಂದ ಜಾನಪದ, ಸಾಂಸ್ಕೃತಿಕ ವೈಭವ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮವು ದಿನಾಂಕ 14-07-2024 ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯುಗಪುರುಷ ಕಿನ್ನಿಗೋಳಿ ಇದರ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ “ತುಳುನಾಡಿನ ಸಂಸ್ಕೃತಿ, ಆಚರಣೆಗಳು, ಆಚಾರ ವಿಚಾರಗಳು, ಸಂಪ್ರದಾಯಗಳು ಮರೆಯುವ ಹಂತದಲ್ಲಿದ್ದು ಅದನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಕಾರ್ಯಕ್ರಮ ಆಯೋಜನೆ ಮಾಡಿ ಉತ್ತಮ ಕೆಲಸ ಕಾರ್ಯ ಮಾಡುತ್ತಿದೆ.” ಎಂದು ಹೇಳಿದರು.
ಮೂಡುಬಿದಿರೆ ತಾಲೂಕು ಅಧ್ಯಕ್ಷೆ ಪದ್ಮಶ್ರೀ ಭಟ್ ನಿಡೋಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ. ಕ. ಜಿಲ್ಲಾ ಕನ್ನಡ ಜಾನಪದ ಪರಿಷತ್ ಇದರ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್, ಮಾಜಿ ಕ. ಸಾ. ಪ. ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು, ರಾಜೇಶ್, ಡಾ. ರಾಜೇಶ್ ಆಳ್ವ, ಸದಾನಂದ ನಾರಾವಿ, ಕ. ಜಾ. ಪ. ಇದರ ತಾಲೂಕು ಘಟಕದ ಉಪಾಧ್ಯಕ್ಷರಾದ ಚಂದ್ರಹಾಸ ದೇವಾಡಿಗ, ಸಾಣೂರು ಅರುಣ್ ಶೆಟ್ಟಿಗಾರ್, ಕಾರ್ಯದರ್ಶಿ ಮಲ್ಲಿಕಾ ಸುಕೇಶ್, ಭವ್ಯ ವಿನಯ್, ಡಾ. ಸೋಮಶೇಖರ್ ಮಯ್ಯ, ಅಭಿಷೇಕ ಶೆಟ್ಟಿ ಐಕಳ, ದೀನ್‌ರಾಜ್, ಬಸವರಾಜ ಮಂತ್ರಿ, ಕಿರಣ್ ಶೆಟ್ಟಿ, ಬಂಟ್ವಾಳ ಕ. ಜಾ. ಪ. ಘಟಕದ ಅಧ್ಯಕ್ಷೆ ಪ್ರಮೀಳಾ ಸಾಯಿ ಪ್ರಿಯ ಮಂಗಳೂರು, ಕಾರ್ಯದರ್ಶಿ ಶಿವಪ್ರಸಾದ್ ಕೊಕ್ಕಡ ಹಾಗೂ ಪ್ರತಿಮಾ ಉಪಸ್ಥಿತರಿದ್ದರು.
ಚೇತನಾ ರಾಜೇಂದ್ರ ಹೆಗಡೆ ಹಾಗೂ ಶ್ರೇಯಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ರಾಯಚೂರಿನ ‘ವಾಯ್ಸ್ ಆಫ್ ಆರಾಧನ’ ಪ್ರತಿಭೆಗಳು ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು.