ಮಂಗಲ್ಪಾಡಿ : ಕಲಾಕುಂಚ ಕೇರಳ ಗಡಿನಾಡ ಘಟಕದ ವತಿಯಿಂದ ಮಂಗಲ್ಪಾಡಿ ಏಕಾಹ ಭಜನಾ ಮಂದಿರದ 38ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ‘ಕಲಾಕುಸುಮ’ ಎಂಬ ವಿನೂತನ ಕಾರ್ಯಕ್ರಮವು ದಿನಾಂಕ 11 ಅಕ್ಟೋಬರ್ 2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಗೀತಾ ಪಠಣೆ ಮತ್ತು “ಮಹಿಷಾಸುರ ಮರ್ದಿನಿ” ಸ್ತೋತ್ರ ಗಾಯನ, ಕುಮಾರಿ ಸುಪ್ರಜಾ ರಾವ್ ಇವರಿಂದ ವಯಲಿನ್ ವಾದನ, ವಿದುಷಿ ಭಾಗ್ಯಶ್ರೀ ರೈ ಪುತ್ತೂರು ಇವರ ಶಿಷ್ಯರಿಂದ ನೃತ್ಯಂಜಲಿ ಕಾರ್ಯಕ್ರಮ, ಮಾಸ್ಟರ್ ನಂದನ್ ಹೆಬ್ಬಾರ್ ಮತ್ತು ಕುಮಾರಿ ಅದಿತಿ ಕಲ್ಮಾಡಿ ಇವರಿಂದ ಗಾಯನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವು ಗೋಲ್ಡನ್ ಬುಕ್ ರೆಕಾರ್ಡ್ ಇದರಲ್ಲಿ ಪ್ರಶಸ್ತಿ ಪಡೆದ ಕುಮಾರಿ ಅಭಿಜ್ಞಾ ಹರೀಶ್ ಮತ್ತು ಕುಮಾರಿ ಅಪರ್ಣ ಇವರ ಅದ್ಭುತ ಯೋಗ ಪ್ರದರ್ಶನದಿಂದ ಸಮಾಪನಗೊಂಡಿತು.