Subscribe to Updates

    Get the latest creative news from FooBar about art, design and business.

    What's Hot

    ಕೊಡಗಿನ ಕಲಾ ಪ್ರಪಂಚ : ಮಾಲಿಕೆ 5 : ವತ್ಸಲಾ ಬದರಿ ನಾರಾಯಣ ಬಾಳೆಲೆ

    November 3, 2026

    ರಜತ ಕಲಾಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರಸ್ತುತಿ

    November 3, 2026

    ಅಪ್ರಕಟಿತ ಕಥೆ, ಕವನ ಸಂಕಲನಕ್ಕೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 30

    November 3, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕಲಾಕಾರ್ ಪುರಸ್ಕಾರ್ ಹಸ್ತಾಂತರ ಮತ್ತು ‘ಮೆಲ್ಲ್ಯಾಂಚೆ ಉಪಾದ್ರ್’ ನಾಟಕ ಪ್ರದರ್ಶನ
    Awards

    ಕಲಾಕಾರ್ ಪುರಸ್ಕಾರ್ ಹಸ್ತಾಂತರ ಮತ್ತು ‘ಮೆಲ್ಲ್ಯಾಂಚೆ ಉಪಾದ್ರ್’ ನಾಟಕ ಪ್ರದರ್ಶನ

    November 3, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕಾರ್ವಾಲ್‌ ಮನೆತನ ಮತ್ತು ಮಾಂಡ್‌ ಸೊಭಾಣ್‌ ಇದರ ವತಿಯಿಂದ ಆಯೋಜಿಸಲಾಗಿದ್ದ 22ನೇ ಕಲಾಕಾರ್ ಪುರಸ್ಕಾರ್ ಪ್ರದಾನ ಕಾರ್ಯಕ್ರಮವು ದಿನಾಂಕ 01 ನವೆಂಬರ್ 2026ರಂದು ಕಲಾಂಗಣದಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಂದನೀಯ ಫಾದರ್ ಕ್ಲೆಮೆಂಟ್ ಮಸ್ಕರೇನ್ಹಸ್ ಇವರಿಗೆ ಸನ್ಮಾನ ನೆರವೇರಿಸಿದ ಅಬುದಾಬಿಯ ಹಿಸ್ನಾ ಇಂಟರ್‌ನ್ಯಾಷನಲ್ ಎಲ್.ಎಲ್.ಸಿ. ಮಾಲೀಕ ಹಾಗೂ ಭಾಷಾಭಿಮಾನಿ ರೊನಾಲ್ಡ್ ಪಿಂಟೊ ಇವರು ಮಾತನಾಡಿ “ಫಾದರ್ ಕ್ಲೆಮೆಂಟ್ ನನ್ನ ಸಹಪಾಠಿ. ಅವರಿಗೆ ಸನ್ಮಾನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ತಮ್ಮ ಸೇವೆ ಹಾಗೂ ಸಂಗೀತದ ಮೂಲಕ ಅವರು ಅನೇಕರಿಗೆ ಸ್ಪೂರ್ತಿ ನೀಡಿದ್ದಾರೆ. ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ ಮತ್ತು ಈ ಕರ್ತವ್ಯವನ್ನು ಕಳೆದ 22 ವರ್ಷಗಳಿಂದ ಕಾರ್ವಾಲ್ ಮನೆತನ ಹಾಗೂ ಮಾಂಡ್ ಸೊಭಾಣ್ ಪಾಲಿಸಿಕೊಂಡು ಬಂದಿವೆ. ನಾವೆಲ್ಲರೂ ಕೈಜೋಡಿಸಿದರೆ ನಮ್ಮ ಭಾಷೆ ಮತ್ತು ಸಂಸ್ಕೃತಿ ಭವಿಷ್ಯದಲ್ಲಿಯೂ ಬೆಳಗಲಿದೆ” ಎಂದು ಹೇಳಿದರು.

    ಶಾಲು, ಹಾರ, ಫಲವಸ್ತು, ಸ್ಮರಣಿಕೆ, ಸನ್ಮಾನ ಪತ್ರ ಮತ್ತು ರೂ.50,000/- ಚೆಕ್ ಅನ್ನು ವೇದಿಕೆಯ ಮೇಲಿದ್ದ ಗಣ್ಯರಿಂದ ಸ್ವೀಕರಿಸಿದ ಸಂಗೀತಗಾರ ಫಾದರ್ ಕ್ಲೆಮೆಂಟ್ ಅವರು, ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ತಮ್ಮ ಸಂಗೀತ ಪಯಣದ ಕುರಿತು ಬೆಳಕು ಚೆಲ್ಲಿದರು. ತಮ್ಮ ಸಹ-ಸಂಗೀತಗಾರ ದಿವಂಗತ ಫಾದರ್ ವಲೇರಿಯನ್ ಮೆಂಡೋನ್ಸಾ ಅವರನ್ನು ಸ್ಮರಿಸಿದ ಅವರು, ತಮಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

    ಕಾರ್ವಾಲ್ ಮನೆತನ ಮತ್ತು ಪುರಸ್ಕಾರದ ಕುರಿತು ಕಾರ್ವಾಲ್ ಕುಟುಂಬದ ಪ್ರತಿನಿಧಿ ವಂದನೀಯ ಡಾ. ಪ್ರತಾಪ್ ನಾಯ್ಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ರೊನಿ ಕ್ರಾಸ್ತಾ ಉಪಸ್ಥಿತರಿದ್ದರು. ಸದಸ್ಯೆ ಲವೀನಾ ದಾಂತಿ ಸನ್ಮಾನ ಪತ್ರವನ್ನು ವಾಚಿಸಿದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಅಬುಧಾಬಿಯ ಡೊರೊತಿ ಪಿಂಟೊ ಅವರು ಗಂಟೆ ಬಾರಿಸುವ ಮೂಲಕ 299ನೇ ‘ಮಾಂಚಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಾಂಗಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಮೆಂಡೋನ್ಸಾ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಡ ಬಳಿಕ ನೆಲ್ಲು ಪೆರ್ಮನ್ನೂರು ಬರೆದು ನಿರ್ದೇಶಿಸಿದ, ಕಾಮಿಡಿ ಕಂಪೆನಿ ಪ್ರಸ್ತುತಪಡಿಸಿದ ‘ಮೆಲ್ಲ್ಯಾಂಚೆ ಉಪಾದ್ರ್’ (ಸತ್ತವರ ಕಾಟ) ಎಂಬ ಹೊಸ ಹಾಸ್ಯ ನಾಟಕದ ಮೊದಲ ಪ್ರದರ್ಶನ ನಡೆಯಿತು. ಈ ಬಾರಿಯೂ ಕಲಾಂಗಣದ ಬಯಲು ರಂಗ ಮಂದಿರ ತುಂಬಿ ತುಳುಕಿ, ಜಾಗವಿಲ್ಲದೆ ಹಿಂದಿರುಗುವಷ್ಟರ ಮಟ್ಟಿಗೆ ಜನಸಂದಣಿ ಸೇರಿ ಕಲಾವಿದರನ್ನು ಪ್ರೋತ್ಸಾಹಿಸಿದರು.

    award baikady drama felicitation Music roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಳೆ ಕೂಟ
    Next Article ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಅರ್ಥಾಂಕುರ- 37’
    roovari

    Add Comment Cancel Reply


    Related Posts

    ಕೊಡಗಿನ ಕಲಾ ಪ್ರಪಂಚ : ಮಾಲಿಕೆ 5 : ವತ್ಸಲಾ ಬದರಿ ನಾರಾಯಣ ಬಾಳೆಲೆ

    November 3, 2026

    ರಜತ ಕಲಾಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರಸ್ತುತಿ

    November 3, 2026

    ಅಪ್ರಕಟಿತ ಕಥೆ, ಕವನ ಸಂಕಲನಕ್ಕೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 30

    November 3, 2026

    ವಿಶೇಷ ಲೇಖನ | ಕಾವ್ಯ, ನಾಟಕ ಮತ್ತು ಅನುವಾದ ಸಾಹಿತ್ಯದ ಬಹುಮುಖ ಸಾಧಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ

    November 3, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.