ಕುಂಭಾಶಿ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಸಹಯೋಗದಲ್ಲಿ ‘ಅರ್ಥಾಂಕುರ- 37’ ಕಾರ್ಯಕ್ರಮವು ದಿನಾಂಕ 29 ಅಕ್ಟೋಬರ್ 2026ರಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಗೌರವ ಪ್ರಸಾದ ಸ್ವೀಕರಿಸಿದ ಪ್ರಸಿದ್ಧ ಅರ್ಥದಾರಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ ಮಾತನಾಡಿ “ಅರ್ಥಾಂಕುರ ಎಂಬರ್ಥದ ಕಾರ್ಯಕ್ರಮಗಳನ್ನು ಪ್ರತೀ ಸಂಘ ಸಂಸ್ಥೆಯವರೂ ಆಯೋಜಿಸುವಂತಾಗಬೇಕು. ಹೊಸ ತಲೆಮಾರಿನ ಅರ್ಥದಾರಿಗಳ ಸಂಖ್ಯೆ ಹೆಚ್ಚಬೇಕು. ಈ ನಿಟ್ಟಿನ ಸಾಧನೆ ಅನನ್ಯವಾದುದು. ಹೊಸ ಪೀಳಿಗೆಗೆ ಅರ್ಥಾಂಕುರ ಅಧ್ಯಯನಶೀಲವಾಗಬೇಕು” ಎಂದು ಹೇಳಿದರು.

ದೇವಳದ ಮುಖ್ಯಸ್ಥ ಸೂರ್ಯನಾರಾಯಣ ಉಪಾಧ್ಯಾಯರು ಗೌರವಾನ್ವತಿ ಪೆರ್ಮುದೆಯವರಿಗೆ ಶಾಲು ಹೊದಿಸಿ ಗೌರವಿಸಿದರು. ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಸತೀಶ್ ಶೆಟ್ಟಿ ಅಂಪಾರು, ಚಂದ್ರಯ್ಯ ಆಚಾರ್, ಗೋಪಾಲ ಪೂಜಾರಿ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ತಾಳಮದ್ದಳೆ ‘ಕೃಷ್ಣಸಂಧಾನ’ ರಂಗ ಪ್ರಸ್ತುತಿಗೊಂಡಿತು.
