Subscribe to Updates

    Get the latest creative news from FooBar about art, design and business.

    What's Hot

    ಕೊಡಗಿನ ಕಲಾ ಪ್ರಪಂಚ : ಮಾಲಿಕೆ 5 : ವತ್ಸಲಾ ಬದರಿ ನಾರಾಯಣ ಬಾಳೆಲೆ

    November 3, 2026

    ರಜತ ಕಲಾಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರಸ್ತುತಿ

    November 3, 2026

    ಅಪ್ರಕಟಿತ ಕಥೆ, ಕವನ ಸಂಕಲನಕ್ಕೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 30

    November 3, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಅಪ್ರಕಟಿತ ಕಥೆ, ಕವನ ಸಂಕಲನಕ್ಕೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 30
    Competition

    ಅಪ್ರಕಟಿತ ಕಥೆ, ಕವನ ಸಂಕಲನಕ್ಕೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 30

    November 3, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಈ ಹೊತ್ತಿಗೆ ಟ್ರಸ್ಟ್ ವತಿಯಿಂದ ಕನ್ನಡದ ಅಪ್ರಕಟಿತ ಕಥಾ ಸಂಕಲನವನ್ನು ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು 2027ನೇ ಸಾಲಿನ ಈ ಹೊತ್ತಿಗೆ ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ವಿಜೇತ ಕಥಾಸಂಕಲನ ಮತ್ತು ಕವನ ಸಂಕಲನಕ್ಕೆ ತಲಾ ರೂ.10,000/- ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತದೆ.

    ಅಪ್ರಕಟಿತ ಸಂಕಲನದಲ್ಲಿರುವ ಕಥೆಗಳು, ಕವನಗಳು ಸ್ವತಂತ್ರವಾಗಿರಬೇಕು. ಸಂಕಲನದಲ್ಲಿ ಅನುವಾದಿತ ಕಥೆ/ಕವನಗಳು ಕಡ್ಡಾಯವಾಗಿ ಇರಕೂಡದು. ಕಥಾಸಂಕಲನವು 10-12 ಕಥೆಗಳನ್ನು ಒಳಗೊಂಡಿರಬೇಕು. ಚುಟುಕು ಕಥೆಗಳಿಗೆ ಅವಕಾಶವಿರುವುದಿಲ್ಲ. ಕವನ ಸಂಕಲನವಾದರೆ 35-40 ಕವನವನ್ನು ಒಳಗೊಂಡಿರಬೇಕು. ಚುಟುಕು, ಪದ್ಯಗಳನ್ನು ಕಳುಹಿಸುವಂತಿಲ್ಲ. ಸಂಕಲನದಲ್ಲಿ ಕಡ್ಡಾಯವಾಗಿ ಸಂಕಲನದ ಶೀರ್ಷಿಕೆ ಮತ್ತು ಪರಿವಿಡಿ ಇರಬೇಕು. ಸಂಕಲನದ ಯಾವುದೇ ಪುಟದಲ್ಲಿ ಲೇಖಕರ ಹೆಸರು ಇರಬಾರದು. ಟೈಪ್ ಮಾಡಿ, ಬೈಂಡ್ ಮಾಡಿಸಿದ ಅಪ್ರಕಟಿತ ಸಂಕಲನದ ಮೂರು ಪ್ರತಿಯನ್ನು ಈ ಹೊತ್ತಿಗೆಯ ಅಂಚೆ ವಿಳಾಸಕ್ಕೆ ಕಳುಹಿಸಿಕೊಡಬೇಕು. ಲೇಖಕರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಕಲನದ ಹೆಸರು, ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದಿರಬೇಕು. ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಪ್ರಶಸ್ತಿ ಪಡೆದ ಸಂಕಲನವು ಮುದ್ರಣಗೊಳ್ಳಬೇಕು. ಕೃತಿ ಮುದ್ರಣಗೊಂಡರೆ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗೂ ಪ್ರಶಸ್ತಿ ಫಲಕವು ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ಸಲ್ಲುತ್ತದೆ. ಹಸ್ತಪ್ರತಿಗಳನ್ನು ಮರಳಿಸಲಾಗುವುದಿಲ್ಲ. ಅಪ್ರಕಟಿತ ಕಥಾಸಂಕಲನ, ಕವನ ಸಂಕಲನವನ್ನು ದಿನಾಂಕ 30 ನವೆಂಬರ್ 2026ರೊಳಗೆ ಈ ಹೊತ್ತಿಗೆ, 65, ಮುಗುಳ್ನಗೆ, 3ನೇ ಅಡ್ಡರಸ್ತೆ , ಪಿ.ಎನ್.ಬಿ. ನಗರ, ಕೋಣನಕುಂಟೆ, ಬೆಂಗಳೂರು -560062 ಇವರಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9611782621 ಸಂಪರ್ಕಿಸಬಹುದು.

    baikady competition Literature poem roovari story
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ಕಾವ್ಯ, ನಾಟಕ ಮತ್ತು ಅನುವಾದ ಸಾಹಿತ್ಯದ ಬಹುಮುಖ ಸಾಧಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ
    Next Article ರಜತ ಕಲಾಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರಸ್ತುತಿ
    roovari

    Add Comment Cancel Reply


    Related Posts

    ಕೊಡಗಿನ ಕಲಾ ಪ್ರಪಂಚ : ಮಾಲಿಕೆ 5 : ವತ್ಸಲಾ ಬದರಿ ನಾರಾಯಣ ಬಾಳೆಲೆ

    November 3, 2026

    ರಜತ ಕಲಾಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರಸ್ತುತಿ

    November 3, 2026

    ವಿಶೇಷ ಲೇಖನ | ಕಾವ್ಯ, ನಾಟಕ ಮತ್ತು ಅನುವಾದ ಸಾಹಿತ್ಯದ ಬಹುಮುಖ ಸಾಧಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ

    November 3, 2026

    ನೇರಂಬಳ್ಳಿ ಮೋಹನ ಆಚಾರ್ಯರ ಚೊಚ್ಚಲ ಕೃತಿ ಬಿಡುಗಡೆ ಕಾರ್ಯಕ್ರಮ

    November 3, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.