ಕೋಟೇಶ್ವರ : ಕೋಟೇಶ್ವರದ ರಥಬೀದಿಯ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ನೇರಂಬಳ್ಳಿ ಮೋಹನ ಆಚಾರ್ಯರ ಚೊಚ್ಚಲ ಕೃತಿ ‘ಬಾಲ್ಯದ ಆ ಬಂಗಾರದ ದಿನಗಳು’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 01 ನವೆಂಬರ್ 2026ರಂದು ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ ಮತ್ತು ನೇರಂಬಳ್ಳಿ ಮೋಹನ ಆಚಾರ್ಯ ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿಡ ಶ್ರೀ ಕ್ಷೇತ್ರ ಆನೆಗುಡ್ಡೆ ವಿನಾಯಕ ದೇವಸ್ಥಾನದ ಪರ್ಯಾಯ ಅರ್ಚಕ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಮಾತನಾಡಿ “ಬಾಲ್ಯದಲ್ಲಿ ಕಳೆದ ಬಂಗಾರದ ದಿನಗಳಿಂದ ಇಂದು ವಜ್ರದಂತೆ ಸಮಾಜದಲ್ಲಿ ನೇರಂಬಳ್ಳಿ ಮೋಹನ ಆಚಾರ್ಯರು ಸೇರಿದಂತೆ ಎನ್.ಆರ್. ಆಚಾರ್ಯ ಕುಟುಂಬ ಬದುಕನ್ನು ನಡೆಸಿ ಬೆಳೆಯುತ್ತಿದೆ” ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ವಂದಗದ್ದೆ ಗಣೇಶ್ ಸಾಗರ ಅವರು ಕೃತಿ ಪರಿಚಯ ಮಾಡಿದರು. ಕೋಟೇಶ್ವರ ಎನ್.ಆರ್ಷ. ಆಚಾರ್ಯ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಭಾಸ್ಕರ್ ಆಚಾರ್ಯ ಮುನ್ನುಡಿ ಮಾತುಗಳನ್ನಾಡಿದರು. ಸಾಹಿತಿಗಳಾದ ವಂದಗದ್ದೆ ಚಂದ್ರಮೌಳಿ ಸಾಗರ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾವ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಕುಂದಪ್ರಭ ಸಂಪಾದಕ ಯು.ಎಸ್. ಶೆಣೈ ಉಪಸ್ಥಿತರಿದ್ದರು. ನೇರಂಬಳ್ಳಿ ಮೋಹನ ಆಚಾರ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಸಬಿತಾ ಆಚಾರ್ಯ ಇವರನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು. ಮೇದಿನಿ ಶೆಟ್ಟಿ ಪ್ರಾರ್ಥಿಸಿ, ಗುರು ಎಂಜಿನಿಯರ್ ಸ್ವಾಗತಿಸಿದರು. ಕ.ಸಾ.ಪ. ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸುಪ್ರೀತಾ ಪುರಾಣಿಕ್ ಕಾರ್ಯಕ್ರಮ ನಿರ್ವಹಿಸಿ, ಬಾಬಣ್ಣ ಪೂಜಾರಿ ವಂದಿಸಿದರು.
