ಮಂಗಳೂರು : ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಹಾಗೂ ದ. ಕ. ಜಿಲ್ಲಾ ಘಟಕ ವತಿಯಿಂದ ಮಂಗಳೂರು ತಾಲೂಕು ಘಟಕದ ಪದಗ್ರಹಣ ಮತ್ತು ಜಾನಪದ ವಿಚಾರ ಸಂಕಿರಣ ಕಾರ್ಯಕ್ರಮವು ದಿನಾಂಕ 08-06-2024ರ ಅಪರಾಹ್ನ 2.30ಕ್ಕೆ ಉರ್ವ ತುಳು ಭವನದ ಸಮೀಪವಿರುವ ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ನಡೆಯಲಿದೆ.
ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ಅಧ್ಯಕ್ಷೆ ಚಂಚಲಾ ತೇಜೋಮಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉರ್ವ ಠಾಣೆಯ ಪೊಲೀಸ್ ಇನ್ ಸೆಕ್ಟರ್ ಭಾರತಿ ಜಿ. ಉದ್ಘಾಟಿಸಲಿರುವರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅತಿಥಿಯಾಗಿ ಭಾಗವಹಿಸಲಿದ್ದು, ಕ. ಜಾ. ಪ. ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಕೋಶಾಧಿಕಾರಿ ತಾರಾನಾಥ ಶೆಟ್ಟಿ ಬೋಳಾರ, ಜಿಲ್ಲಾ ಸಂಚಾಲಕ ರಾಜೇಶ್ ಆಳ್ವ, ಪ್ರಾಧ್ಯಾಪಕ ಪುರುಷೋತ್ತಮ ಬಲಾಯ ಭಾಗವಹಿಸಲಿದ್ದಾರೆ.