ಬಂಟ್ವಾಳ: ದಕ್ಷಿಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಆಯೋಜಿಸುವ ತಾಳ ಮದ್ದಳೆ, ದತ್ತಿ ಉಪನ್ಯಾಸ ಹಾಗೂ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 22-07-2023 ರಂದು ಬಿ.ಸಿ. ರೋಡಿನ ಕನ್ನಡ ಭವನದಲ್ಲಿ ನಡೆಯಲಿದೆ.
ಅಪರಾಹ್ನ ಶ್ರೀ ಪುರುಷೋತ್ತಮ ಪೂಂಜ ವಿರಚಿತ ಪ್ರಸಂಗ ‘ಉಲೂಪಿ ವಿವಾಹ’ ಯಕ್ಷಗಾನ ತಾಳಮದ್ದಳೆ ನಡೆಯುವುದು. ಹಿಮ್ಮೇಳದಲ್ಲಿ ಸರ್ವಶ್ರೀಗಳಾದ ಗೋಪಾಲಕೃಷ್ಣ ಭಟ್ ಪುಂಡಿಕಾಯಿ, ಟಿ. ಡಿ. ಗೋಪಾಲಕೃಷ್ಣ ಭಟ್ ಪುತ್ತೂರು ಮತ್ತು ಮಾ. ಅದ್ವೈತ್ ಕನ್ಯಾನ ಭಾಗವಹಿಸಲಿದ್ದಾರೆ. ಅರ್ಥದಾರಿಗಳಾಗಿ ಸರ್ವಶ್ರೀಗಳಾದ ಶಂಭು ಶರ್ಮ ವಿಟ್ಲ, ಜಯರಾಮ್ ಭಟ್ ದೇವಸ್ಯ, ರಾಜಗೋಪಾಲ ಕನ್ಯಾನ ಭಾಗವಹಿಸಲಿರುವರು.
ತಾಳಮದ್ದಳೆ ಕಾರ್ಯಕ್ರಮದ ಬಳಿಕ ದತ್ತಿ ಉಪನ್ಯಾಸ ಕಾರ್ಯಕ್ರಮವು ಲಯನ್ಸ್ ಪ್ರಾಂತೀಯ ಅಧ್ಯಕ್ಷರಾದ ಲ| ರಮಾನಂದ ನೂಜಿಪ್ಪಾಡಿ, ಎಮ್. ಜೆ. ಎಫ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ‘ಕಳಸ ಪುಟ್ಟದೇವರಯ್ಯ ನಾಗಮ್ಮ ದತ್ತಿ’ ಉಪನ್ಯಾಸದಲ್ಲಿ ಗಂಗಾ ಪಾದೆಕಲ್ಲು ಅವರ “ಮೌನ ರಾಗಗಳು” ಕಾದಂಬರಿಯ ಅವಲೋಕನ ನಡೆಯಲಿದ್ದು, ಉಪನ್ಯಾಸಕಿ ಮತ್ತು ಕವಯತ್ರಿಯಾದ ಶ್ರೀಮತಿ ಗೀತಾ ಕೊಂಕೋಡಿಯವರು ಉಪನ್ಯಾಸ ನೀಡಲಿದ್ದಾರೆ. ಹಾಗೂ ‘ಪ್ರೊ. ಎಂ. ರಾಮಕೃಷ್ಣ ಭಟ್ ದತ್ತಿ’ ಉಪನ್ಯಾಸದಲ್ಲಿ ‘ಸಂಸ್ಕೃತ- ಕನ್ನಡಗಳ ಬಾಂಧವ್ಯ’ ಎಂಬ ವಿಷಯದ ಬಗ್ಗೆ ತುಂಬೆ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕರಾದ ಶ್ರೀ ರಮೇಶ್ ಮೆಲ್ಕಾರ್ ಉಪನ್ಯಾಸ ನೀಡಲಿದ್ದಾರೆ.
ದತ್ತಿ ಉಪನ್ಯಾಸದ ಬಳಿಕ ಕೆ.ಪಿ. ರಾಜಗೋಪಾಲ ಕನ್ಯಾನ ಇವರ ಸಂಪಾದಿತ ಕನ್ನಡಾನುವಾದ “ಮಲಯಾಳೀ ವಿಷವೈದ್ಯ” ಹಾಗೂ ರಾಜಗೋಪಾಲ ಕನ್ಯಾನ ಹಾಗೂ ಡಾ ಕೆ.ಟಿ.ರೈ ವಿಟ್ಲ ಸಂಪಾದಿತ ಕೆದಂಬಾಡಿ ಜತ್ತಪ್ಪ ರೈ ಅವರ “ತುಳು ಗೀತಾಂಜಲಿ” ಕೃತಿಗಳ ಅನಾವರಣ ನಡೆಯಲಿದೆ.ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಕೃತಿಗಳ ಅನಾವರಣವನ್ನು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ| ಎಂ.ಪಿ ಶ್ರೀನಾಥ್ ನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕ.ಸಾ.ಪ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ವಿಶ್ವನಾಥ ಬಂಟ್ವಾಳ ದೀಪ ಪ್ರಜ್ವಲನೆ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಡಾ| ಕೆದಂಬಾಡಿ ತಿಮ್ಮಪ್ಪ ರೈ ವಿಟ್ಲ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ| ಅಜಕ್ಕಳ ಗಿರೀಶ್ ಭಟ್, ಅಳಿಕೆಯ ಜೆಡ್ಡು ಆಯುರ್ವೇದದ ಡಾ| ಜೆಡ್ಡು ಗಣಪತಿ ಭಟ್, ಎಂ.ಡಿ.ಪಿ.ಎಚ್.ಡಿ.ಭಾಗವಹಿಸಲಿದ್ದಾರೆ.
1 Comment
ಧನ್ಯವಾದಗಳು.