ಮೈಸೂರು : ಕಲಾಸುರುಚಿ ಮೈಸೂರು ಇದರ ವತಿಯಿಂದ ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮದ 892ನೇ ಸಂಚಿಕೆಯು ದಿನಾಂಕ 09 ಆಗಸ್ಟ್ 2025 ಶನಿವಾರ ಸಂಜೆ ಗಂಟೆ 4-30ಕ್ಕೆ ಮೈಸೂರಿನ ಕುವೆಂಪು ನಗರ, ಚಿತ್ರಭಾನು ರಸ್ತೆ, ನಂ.476, ಸುರುಚಿ ರಂಗಮನೆಯಲ್ಲಿ ನಡೆಯಲಿದೆ. ಈ ವಾರದ ಕಥೆಗಾರರು ಮೈಸೂರಿನ ಕವಯಿತ್ರಿ, ಲೇಖಕಿ, ಅನುವಾದಕಿ ಹಾಗೂ ಗಾಯಕಿ ಶ್ರೀಮತಿ ಪ್ರಭಾ ಶಾಸ್ತ್ರಿ ಜೋಶ್ಯುಲ. ತಾವು ಮಕ್ಕಳನ್ನು ಕರೆದುಕೊಂಡು ಬಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ. https://wwwyoutube.com/kalasuruchimysore ಇದು ಕಲಾಸುರುಚಿಯ ಯುಟ್ಯೂಬ್ ಚಾನೆಲ್ ನ ಲಿಂಕ್. ನೀವೂ ನೋಡಿ – ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ದಯವಿಟ್ಟು ಚಾನೆಲ್ ನ್ನು ಸಬ್ಸ್ ಕ್ರೈಬ್ ಮಾಡಿ.
ಕಥೆ ಕೇಳೋಣ ಬನ್ನಿ ಕಾರ್ಯಕ್ರಮದ ಕೊನೆಯಲ್ಲಿ ಪದಕೋಶ ಕಾರ್ಯಕ್ರಮವಿರುತ್ತದೆ. ದಯವಿಟ್ಟು ಪೋಷಕರಲ್ಲಿ ಒಂದು ಕಳಕಳಿಯ ಮನವಿ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕಳುಹಿಸಿಕೊಡಿ. ಹೆಚ್ಚಿನ ಮಾಹಿತಿಗಾಗಿ 92435 81097 ಮತ್ತು 99459 43115 ಸಂಖ್ಯೆಯನ್ನು ಸಂಪರ್ಕಿಸಿರಿ.