ಬೆಂಗಳೂರು : ಕನ್ನಡ ಸಹೃದಯರ ಪ್ರತಿಷ್ಠಾನ (ಕುಮಾರವ್ಯಾಸ ಮಂಟಪ) ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಕುಮಾರವ್ಯಾಸ ಜಯಂತಿ ಪ್ರಯುಕ್ತ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಕವಿ-ಕಾವ್ಯ ಪರಿಚಯ ಭಾಷಣ ಸ್ಪರ್ಧೆಯು ದಿನಾಂಕ 7 ಡಿಸೆಂಬರ್ 2024ರ ಶನಿವಾರದಂದು ಬೆಂಗಳೂರಿನ ಜಯನಗರದ ವಿ. ಇ. ಐ. ಟಿ. ಪದವಿ ಕಾಲೇಜು ಇಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ (ರಿ) ಇದರ ಅಧ್ಯಕ್ಷರಾದ ಡಾ. ಕೆ. ಪಿ. ಪುತ್ತೂರಾಯ, ಕರ್ನಾಟಕ ಗಮಕ ಕಲಾ ಪರಿಷತ್ತು ಇದರ ಕಾರ್ಯದರ್ಶಿಗಲಾದ ಜಿ. ದಕ್ಷಿಣಾಮೂರ್ತಿ ಹಾಗೂ ವಿ. ಇ. ಐ. ಟಿ. ಕಾಲೇಜು ಇದರ ಪ್ರಾಂಶುಪಾಲರಾದ ಶ್ರೀ ಶಂಕರಾಚಾರ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.