Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ವೀಣಾ ವಾದನ ಗಂಧರ್ವ ಆರ್. ಕೆ. ಸೂರ್ಯನಾರಾಯಣ

    June 14, 2025

    ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 22

    June 14, 2025

    ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ

    June 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷಗಾನ ಗೊಂಬೆಯಾಟ ಕಲಾವಿದ ಪ್ರೊ. ಎ. ಶ್ರೀನಾಥ್ ಕಾಸರಗೋಡು ಇವರಿಗೆ ‘ಕಯ್ಯಾರ’ ಪ್ರಶಸ್ತಿ
    Awards

    ಯಕ್ಷಗಾನ ಗೊಂಬೆಯಾಟ ಕಲಾವಿದ ಪ್ರೊ. ಎ. ಶ್ರೀನಾಥ್ ಕಾಸರಗೋಡು ಇವರಿಗೆ ‘ಕಯ್ಯಾರ’ ಪ್ರಶಸ್ತಿ

    June 14, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ, ಜಾನಪದ ವಿದ್ವಾಂಸ, ಯಕ್ಷಗಾನ ಗೊಂಬೆಯಾಟ ಕಲಾವಿದ ಪ್ರೊ. ಎ. ಶ್ರೀನಾಥ್ ಕಾಸರಗೋಡು ‘ಕಯ್ಯಾರ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಗ್ರೀನ್ ಸ್ಟಾರ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಯ್ಯಾರ್, 16ನೇ ವಾರ್ಡ್ ಕಯ್ಯಾರ್ ಕುಟುಂಬ ಶ್ರೀ ಘಟಕಗಳ ಸಹಯೋಗದಲ್ಲಿ ಕಯ್ಯಾರ ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ದಿನಾಂಕ 18 ಜೂನ್ 2025ರಂದು ಬೆಳಗ್ಗೆ ಗಂಟೆ 9-00ರಿಂದ ನಡೆಯುವ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಜನ್ಮದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು.

    ಕನ್ನಡ ಎಂ.ಎ. ಪದವೀಧರ, ಚಿಂತಕ, ವಾಗಿ, ಸಂಘಟಕ, ಸಮಾಜ ಸೇವಕರೂ ಆದ ಶ್ರೀನಾಥ್, ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಳವಾದ ಜ್ಞಾನವುಳ್ಳ ಕಾಸರಗೋಡಿನ ಸಾಹಿತ್ಯಕ, ಸಾಂಸ್ಕೃತಿಕ, ಧಾರ್ಮಿಕ ಸಂಘಟನೆಯಲ್ಲಿ ಹೆಸರು ಪಡೆದಿದ್ದಾರೆ. ಮೂರು ದಶಕಗಳ ಕಾಲ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಎನ್ನೆಸ್ಸೆಸ್ ಯೋಜನೆಯ ಶಿಬಿರ ನಿರ್ದೇಶಕರಾಗಿ ಯೋಜನಾಧಿಕಾರಿಯಾಗಿ 15 ವರ್ಷಗಳ ಸಮರ್ಥವಾಗಿ ಮುನ್ನಡೆಸಿ, ಎನ್ನೆಸ್ಸೆಸ್ ಘಟಕಕ್ಕೆ ಭದ್ರ ಅಡಿಪಾಯ ಒದಗಿಸಿದ ಶ್ರೀನಾಥ್ ಅವರಿಗೆ ಎನ್ನೆಸ್ಸೆಸ್ ರಾಜ್ಯ ಪ್ರಶಸ್ತಿ ಒಲಿದಿದೆ. ಸರಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸುತ್ಯರ್ಹ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕೇರಳ ಸರಕಾರದ ಸಂಪೂರ್ಣ ಸಾಕ್ಷರತಾ ಯೋಜನೆಯ ಯೋಜನಾಧಿಕಾರಿಯಾಗಿ ಕೇರಳ ರಾಜ್ಯದ ಪಠ್ಯಪುಸ್ತಕ ಸಮಿತಿಯ ಸಂಯೋಜಕ, ಸದಸ್ಯರಾಗಿ, ಕಣ್ಣೂರು ವಿವಿ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರಾಗಿ, ತುಳು ನಿಘಂಟು ರಚನಾ ಸಮಿತಿಯ ಸಹಾಯಕ ಸಂಯೋಜಕ, ಬಹುಭಾಷ ನಿಘಂಟು ರಚನೆಯಲ್ಲಿ ಉಪಸಂಪಾದಕರಾಗಿ, ಕೇರಳ ತುಳು ಅಕಾಡೆಮಿ ಸದಸ್ಯ, ಏಡ್ಸ್‌ ಜನಜಾಗೃತಿ ಯೋಜನೆಯ ನಿಧಿಜ್ಞ, ನೆಹರೂ ಯುವಕೇಂದ್ರ ಸಲಹಾ ಸಮಿತಿ ಸದಸ್ಯರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಅನೇಕ ವೈಚಾರಿಕ, ಸಂಶೋಧನಾತ್ಮಕ ಲೇಖನಗಳನ್ನು ಬರೆದಿರುವ ಅವರು ನೂರಾರು ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಬರೆದಿದ್ದಾರೆ. ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಸೇವೆಗೈದಿದ್ದಾರೆ. ಕವಿಗೋಷ್ಠಿ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಲ್ಲದೆ. ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದ್ದಾರೆ. 2010ರಲ್ಲಿ ಅವರ ಅಭಿಮಾನಿಗಳು ‘ಶ್ರೀನಿಧಿ’ ಎಂಬ ಅಭಿನಂದನೆ ಗ್ರಂಥ ಸಮರ್ಪಿಸಿದ್ದಾರೆ. ನೂರಾರು ಕಡೆ ಸನ್ಮಾನ, ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

    award baikady kannada Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ
    Next Article ಮುಂಬೈಯ ಪ್ರಥ್ವಿ ಥಿಯೇಟರ್ ನಲ್ಲಿ ‘ಉದಯಸ್ವರ’ ಸಂಗೀತ ಕಛೇರಿ | ಜೂನ್ 15
    roovari

    Add Comment Cancel Reply


    Related Posts

    ವಿಶೇಷ ಲೇಖನ – ವೀಣಾ ವಾದನ ಗಂಧರ್ವ ಆರ್. ಕೆ. ಸೂರ್ಯನಾರಾಯಣ

    June 14, 2025

    ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 22

    June 14, 2025

    ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ

    June 14, 2025

    ಡಾ. ಪುರುಷೋತ್ತಮ್ ಬಿಳಿಮಲೆ ಇವರಿಗೆ ‘ಕನ್ನಡ ಪಯಸ್ವಿನಿ ಪ್ರಶಸ್ತಿ’

    June 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.