ಉಡುಪಿ : ಮಾಹೆ ವಿಶ್ವವಿದ್ಯಾನಿಲಯದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಸಂಯುಕ್ತ ಆಶ್ರಯದಲ್ಲಿ 2022 ನೇ ಸಾಲಿನ ಸಾಹಿತಿ ತಾಳ್ತಜೆ ಕೇಶವ ಭಟ್ಟ ಅವರ ಹೆಸರಿನಲ್ಲಿ ನೀಡುವ ‘’ಕೇಶವ ಭಟ್ಟ ಪ್ರಶಸ್ತಿ’ಯನ್ನು ಡಾ.ಹರಿಕೃಷ್ಣ ಭರಣ್ಯ ಮತ್ತು 2023ನೇ ಸಾಲಿನ ಪ್ರಶಸ್ತಿಯನ್ನು ಡಾ.ಎನ್.ಆರ್.ನಾಯಕ್ ಹಾಗೂ ಕವಿ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಿನಲ್ಲಿ ನೀಡುವ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಯನ್ನು ಶಂಕರ ಸಿಹಿಮೊಗ್ಗೆಯವರಿಗೆ ದಿನಾಂಕ 05-08-2023ರಂದು ಎಂ.ಜಿ.ಎಂ.ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಎಂ.ಜಿ.ಎಂ.ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಡಾ.ತಾಳ್ತಜೆ ವಸಂತ ಕುಮಾರ್ ಪ್ರಸ್ತಾವನೆಗೈದರು. ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ರವಿರಾಜ್ ಶೆಟ್ಟಿ ಅವರು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿ ವಿಜೇತ ಕವನ ಸಂಕಲನ ‘‘ಇರುವೆ ಮತ್ತು ಗೋಡೆ’ ಕೃತಿ ಪರಿಚಯ ಮಾಡಿದರು. ಮಣಿಪಾಲ ಕೆ.ಎಂ.ಸಿ.ಡೀನ್ ಡಾ.ಪದ್ಮರಾಜ ಹೆಗ್ಡೆಯವರು ಕಡೆಂಗೋಡ್ಲು ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ.ಪ್ರಮೀಳಾ ಮಾಧವ ಇವರು ಗಿರಿಜಾ ಕಲ್ಯಾಣ-ಮರುಓದು ವಿಷಯದ ಕುರಿತು ಉಪನ್ಯಾಸ ನೀಡಿದರು. ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಎಂ.ಜಿ.ಎಂ.ಕಾಲೇಜಿನ ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.