ಬೆಂಗಳೂರು : ಸಂಸ್ಕಾರ ಭಾರತೀ ಕರ್ನಾಟಕ (ರಿ.) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ವತಿಯಿಂದ ‘ರಂಗ ಶ್ರಾವಣ’ ನಾಟಕೋತ್ಸವ 2023 ಶ್ರೀ ಶೋಭಕೃನ್ನಾಮ ಸಂವತ್ಸರ ಅಧಿಕ ಶ್ರಾವಣ ದಶಮಿ, ಏಕಾದಶಿ, ದ್ವಾದಶಿಯ ದಿನಾಂಕ 11-08-2023, 12-08-2023 ಮತ್ತು 13-08-2023ರಂದು ಬೆಂಗಳೂರಿನ ಬಸವನ ಗುಡಿಯ ಹನುಮಂತ ನಗರದ ರಾಮಾಂಜನೇಯ ಗುಡ್ಡದ ಬಳಿ ಇರುವ ಪ್ರಭಾತ್ ಕೆ.ಎಚ್. ಕಲಾಸೌಧದಲ್ಲಿ ನಡೆಯಲಿದೆ.
ದಿನಾಂಕ 11-08-2023ರಂದು ಬೆಳಿಗ್ಗೆ 10.00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, 11.00 ಗಂಟೆಗೆ ಡಾ.ಎಸ್.ಆರ್.ಲೀಲಾ ಇವರಿಂದ ‘ಭಾರತೀಯ ರಂಗ ಪರಂಪರೆಯಲ್ಲಿ ಭರತಮುನಿ ನಾಟ್ಯಶಾಸ್ತ್ರದ ಪ್ರಸ್ತುತತೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಮಧ್ಯಾಹ್ನ 12.30ರಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರ ಕಾಲೇಜು ವಿದ್ಯಾರ್ಥಿಗಳಿಂದ ನಾಟಕ ‘ಸ್ವದೇಶಿ’, ಘಂಟೆ 2.00ರಿಂದ ‘ವಿಷಯದ ಸುಧಾರಣೆ ಹಾಗೂ ಪ್ರಸ್ತುತಿಯಲ್ಲಿ ಅಳವಡಿಕೆ’ ವಿಷಯದ ಬಗ್ಗೆ ಶ್ರೀ ರಾಜೇಂದ್ರ ಕಾರಂತ ಇವರಿಂದ ಉಪನ್ಯಾಸ, ಘಂಟೆ 3.00ರಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳಿಂದ ನಾಟಕ ‘ಸಾಮರಸ್ಯ’, ಘಂಟೆ 4.15ಕ್ಕೆ ‘ಭಾರತೀಯ ರಂಗ ಭೂಮಿ ಬೆಳೆದು ಬಂದ ಇತಿಹಾಸ’ ಈ ವಿಷಯದ ಬಗ್ಗೆ ಶ್ರೀ ಶ್ರೀನಿವಾಸ ಪ್ರಭು ಇವರಿಂದ ಉಪನ್ಯಾಸ ಮತ್ತು ಗಂಟೆ 6.00ರಿಂದ ದೃಶ್ಯ ತಂಡ ಪ್ರಸ್ತುತಪಡಿಸುವ ನಾಟಕ ‘ರಕ್ತಧ್ವಜ’ ನಡೆಯಲಿದೆ.
ದಿನಾಂಕ 12-08-2023ರಂದು ಬೆಳಿಗ್ಗೆ 10.00 ಗಂಟೆಗೆ ‘ರಂಗಭೂಮಿಯಲ್ಲಿ ಕಲಾಪ್ರಕಾರಗಳ ಸಂಯೋಜನೆ ಏಕೆ ಮತ್ತು ಹೇಗೆ?’ ಎಂಬ ವಿಷಯದ ಬಗ್ಗೆ ಡಾ.ಬಿ.ವಿ.ರಾಜಾರಾಂ ಇವರಿಂದ ಉಪನ್ಯಾಸ, ಘಂಟೆ 11.45ರಿಂದ ಬೆಂಗಳೂರಿನ ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ನಾಟಕ ‘ಸಾಮಾಜಿಕ ಸುರಕ್ಷತೆ’, ಮಧ್ಯಾಹ್ನ ಘಂಟೆ 12.30ರಿಂದ ಶ್ರೀ ರಾಮಕೃಷ್ಣ ಕಂದಲ್ಪಾಡಿಯವರಿಂದ ಪ್ರಸಾಧನ ಕಲೆಯ ಬಗ್ಗೆ ಪ್ರಾತ್ಯಕ್ಷಿಕೆ, ಘಂಟೆ 2.00ರಿಂದ ‘ಸಂಭಾಷಣೆ, ಪಾತ್ರವರ್ಗ, ಸಂಯೋಜನೆ’ ಎಂಬ ವಿಷಯದ ಬಗ್ಗೆ ಶ್ರೀ.ಎನ್.ಸಿ.ಮಹೇಶ್ ಇವರಿಂದ ಉಪನ್ಯಾಸ, ಘಂಟೆ 3.00ರಿಂದ ಬೆಂಗಳೂರಿನ ಸುರಾನಾ ಕಾಲೇಜು ವಿದ್ಯಾರ್ಥಿಗಳಿಂದ ನಾಟಕ ‘ಪರ್ಯಾವರಣ’, ಸಂಜೆ ಘಂಟೆ 4.15ಕ್ಕೆ ‘ರಂಗಕ್ಷೇತ್ರವನ್ನು ಬೆಳಗಿದ ಸಾಧಕರು’ ಎಂಬ ವಿಷಯದ ಬಗ್ಗೆ ಶ್ರೀ ಬಾಬು ಹಿರಣ್ಣಯ್ಯ ಇವರಿಂದ ಉಪನ್ಯಾಸ ಮತ್ತು ಘಂಟೆ 6 ಗಂಟೆಯಿಂದ ರಂಗಚರಿತ ತಂಡದಿಂದ ‘ಸ್ವಾತಂತ್ರ್ಯ ಕೇಸರಿ’ ಎಂಬ ನಾಟಕ ನಡೆಯಲಿದೆ.
ದಿನಾಂಕ 13-08-2023ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀ ಪ್ರಕಾಶ್ ಬೆಳವಾಡಿ ಇವರಿಂದ ‘ರಂಗಕ್ಷೇತ್ರದ ಸಮಕಾಲೀನ ಸವಾಲುಗಳು ಮತ್ತು ಪರಿಹಾರ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಘಂಟೆ 11.45ರಿಂದ ಬೆಂಗಳೂರಿನ ಪಿ.ಇ.ಎಸ್ ವಿಶ್ವವಿದ್ಯಾಲಯ ಪ್ರಸ್ತುತಪಡಿಸುವ ನಾಟಕ ‘ನಾಗರಿಕ ಪ್ರಜ್ಞೆ’, ಮಧ್ಯಾಹ್ನ ಘಂಟೆ 12.30ರಿಂದ ‘ರಂಗ ಸಜ್ಜಿಕೆ’ ಎಂಬ ವಿಷಯದ ಬಗ್ಗೆ ಶ್ರೀ ಅಭೀಷಕ್ ಅಯ್ಯಂಗಾರ್ ಇವರಿಂದ ಪ್ರಾತ್ಯಕ್ಷಿಕೆ, ಘಂಟೆ 2.೦೦ರಿಂದ ಡಾ.ಸುಷ್ಮಾ ಎಸ್.ವಿ ಇವರಿಂದ ‘ವಿದ್ಯಾರ್ಥಿಗಳಲ್ಲಿ ರಂಗಪ್ರಜ್ಞೆ – ಏಕೆ ಮತ್ತು ಹೇಗೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಘಂಟೆ 3.00ರಿಂದ ಬೆಂಗಳೂರಿನ ಬಸವನಗುಡಿಯ ಬಿ.ಎಂ.ಎಸ್. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನಾಟಕ ‘ಕೌಟುಂಬಿಕ ಮೌಲ್ಯ’, ಸಂಜೆ ಘಂಟೆ 4.15ಕ್ಕೆ ಸಮಾರೋಪ ಸಮಾರಂಭ ಮತ್ತು ಘಂಟೆ 6.00ರಿಂದ ಸಂಸ್ಕಾರ ಭಾರತೀ ರಂಗತಂಡ ‘ಆಚಾರ್ಯ ಚಾಣಕ್ಯ’ ಎಂಬ ನಾಟಕವನ್ನು ಪ್ರಸ್ತುತಪಡಿಸಲಿದೆ.
ಈ ಮೂರೂ ದಿನಗಳಲ್ಲಿ ನಾಟಕಗಳು, ಉಪನ್ಯಾಸಗಳು, ಪ್ರಾತ್ಯಕ್ಷಿಕೆಗಳು ಹಾಗೂ ಸಂವಾದ ಕಾರ್ಯಕ್ರಮಗಳು ಇರುತ್ತವೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು 16 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ.