ಅಹ್ಮದಾಬಾದ್ : ಪದ್ಮ ವಿಭೂಷಣ ಪುರಸ್ಕೃತ ಖ್ಯಾತ ಕಥಕ್ ನೃತ್ಯಗಾರ್ತಿ ಕುಮುದಿನಿ ಲಖೀಯಾ ಅಹಮದಾಬಾದ್‌ನ ತಮ್ಮ ನಿವಾಸದಲ್ಲಿ ದಿನಾಂಕ 12 ಏಪ್ರಿಲ್ 2025ರಂದು ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಕುಮುದಿನಿ ಅವರು ಸ್ಥಾಪಿಸಿದ್ದ ಕದಂಬ ಸೆಂಟರ್ ಫಾರ್ ಡಾನ್ಸ್ ಅಂಡ್ ಮ್ಯೂಸಿಕ್ ಇದರ ನಿರ್ವಾಹಕರು ಈ ಮಾಹಿತಿ ನೀಡಿದ್ದಾರೆ.
1960ರ ದಶಕದಲ್ಲಿ ಪ್ರಾರಂಭವಾದ ಕಥಕ್‌ನ ಏಕವ್ಯಕ್ತಿ ರೂಪದಿಂದ ದೂರ ಸರಿಯುವ ಮೂಲಕ ಅದನ್ನು ಸಮೂಹ ದೃಶ್ಯವಾಗಿ ಪರಿವರ್ತಿಸುವ ಮೂಲಕ ಮತ್ತು ಸಾಂಪ್ರದಾಯಿಕ ಕಥೆಗಳನ್ನು ತೆಗೆದುಹಾಕುವುದು ಮತ್ತು ಕಥಕ್ ಸಂಗ್ರಹಕ್ಕೆ ಸಮಕಾಲೀನ ಕಥಾಹಂದರವನ್ನು ಸೇರಿಸುವಂತಹ ಹೊಸತನವನ್ನು ಇವರು ಪರಿಚಯಿಸಿದ್ದರು.
ಇವರ ಸಾಧನೆಗೆ ಭಾರತ ಸರ್ಕಾರದಿಂದ ‘ಪದ್ಮಶ್ರೀ’, ‘ಪದ್ಮ ವಿಭೂಷಣ’, ಸಂಗೀತ ನಾಟಕ ಅಕಾಡೆಮಿಯಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ‘ಕಾಳಿದಾಸ್ ಸಮ್ಮಾನ್’, ಸಂಗೀತ ನಾಟಕ ಅಕಾಡೆಮಿಯಿಂದ ‘ಸಂಗೀತ ನಾಟಕ ಅಕಾಡೆಮಿ ಟ್ಯಾಗೋರ್ ರತ್ನ’, ಕೇರಳ ಸರ್ಕಾರದಿಂದ ‘ಗುರು ಗೋಪಿನಾಥ್ ದೇಸಿಯ ನಾಟ್ಯ ಪುರಸ್ಕಾರಂ’ ಮುಂತಾದ ಪುರಸ್ಕಾರಗಳು ಸಂದಿವೆ.
Subscribe to Updates
Get the latest creative news from FooBar about art, design and business.
Previous Articleಬ್ಯಾರಿ ಸಾಹಿತ್ಯ ಅಕಾಡಮಿಯಿಂದ ‘ಗೌರವ ಪ್ರಶಸ್ತಿ’ಗೆ ಅರ್ಜಿ ಆಹ್ವಾನ