ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ, ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಈ ಬಾರಿಯ ‘ಕಿಶೋರ ಯಕ್ಷಗಾನ ಸಂಭ್ರಮ -2023’ವು ಬ್ರಹ್ಮಾವರದ ಬಂಟರ ಸಭಾಭವನದ ಮುಂಭಾಗದಲ್ಲಿ ದಿನಾಂಕ 29-11-2023ರಂದು ಉದ್ಘಾಟನೆಗೊಂಡಿತು.
ಉಡುಪಿ ಶಾಸಕರೂ, ಯಕ್ಷಶಿಕ್ಷಣ ಟ್ರಸ್ಟ್ ಅಧ್ಯಕ್ಷರೂ ಆದ ಯಶ್ ಪಾಲ್ ಎ. ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭವನ್ನು ಡಾ. ಜಿ. ಶಂಕರ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಇರ್ಮಾಡಿ ತಿಮ್ಮಪ್ಪ ಹೆಗ್ಡೆ, ರಘುರಾಮ ಮಧ್ಯಸ್ಥ, ಬಿ.ಭುಜಂಗ ಶೆಟ್ಟಿ, ಬಿ.ಎನ್.ಶಂಕರ ಪೂಜಾರಿ, ಪ್ರತಾಪ್ ಹೆಗ್ಡೆ, ಬಿರ್ತಿ ರಾಜೇಶ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಧನಂಜಯ ಅಮೀನ್, ಜ್ಞಾನ ವಸಂತ ಶೆಟ್ಟಿ, ಎಂ.ಗಂಗಾಧರ ರಾವ್, ಶ್ರೀಮತಿ ಉಮಾ, ಕೇಶವ ಕುಂದರ್, ನಿತ್ಯಾನಂದ ಬಿ.ಆರ್. ಅಭ್ಯಾಗತರಾಗಿ ಭಾಗವಹಿಸಿದರು.
ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ ಮುರಲಿ ಕಡೆಕಾರ್ ಪ್ರಸ್ತಾವನೆಗೈದರು. ಗಣೇಶ್ ಬ್ರಹ್ಮಾವರ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸಚಿನ್ ಪೂಜಾರಿ ಧನ್ಯವಾದ ಸಲ್ಲಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ.ಶೆಟ್ಟಿ, ಬಿ.ಭುವನಪ್ರಸಾದ ಹೆಗ್ಡೆ, ನಟರಾಜ ಉಪಾಧ್ಯ, ನಾಗರಾಜ ಹೆಗ್ಡೆ, ಅಜಿತ್ ಕುಮಾರ್, ಅಶೋಕ್ ಎಂ., ಡಾ.ರಾಜೇಶ ನಾವುಡ ಉಪಸ್ಥಿತರಿದ್ದರು. ಬಳಿಕ ಬ್ರಹ್ಮಾವರ ಎಸ್.ಎಂ.ಎಸ್.ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ‘ಸೈಂಧವ ವಧೆ’ ಯಕ್ಷಗಾನ ಜರಗಿತು.