ಮಂಗಳೂರು : ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಎಸ್. ಡಿ. ಎಂ. ಕಾನೂನು ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ‘ನೀವೂ ಸಾಹಿತಿಗಳಾಗಬೇಕೆ?’ ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 04 ಏಪ್ರಿಲ್ 2025ರ ಶುಕ್ರವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿಲು ಆಗಮಿಸಿದ ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಿಕೆ ಡಾ. ಮೀನಾಕ್ಷಿ ರಾಮಚಂದ್ರ ಮಾತನಾಡಿ “ಗೀಚಿದ್ದೆಲ್ಲವೂ ಸಾಹಿತ್ಯವಾಗಲಾರದು. ಅನುಭವಗಳು ಮೂರ್ತ ರೂಪಗೊಂಡಾಗ ಸಾಹಿತ್ಯ ರಚನೆಯಗುತ್ತದೆ. ಸಾಹಿತಿಯಾಗಲು ಸಂವೇದನೆ ಅತೀ ಮುಖ್ಯ. ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು” ಎಂದರು. ಕ. ಸಾ. ಪ. ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಹ ಸಂಯೋಜಕರಾದ ಡಾ. ಡಿಂಪಲ್ ಮೇಸ್ತ, ಅಪೂರ್ವ ಶೆಟ್ಟಿ, ವಿದ್ಯಾರ್ಥಿ ಸಂಯೋಜಕ ತೇಜಸ್ ಗೋಪಾಲ ಪೂಜಾರಿ ಉಪಸ್ಥಿತರಿದ್ದರು. ದ. ಕ. ಜಿಲ್ಲಾ ಕ. ಸಾ. ಪ. ಸಂಘಟನಾ ಕಾಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜಕ ಪುಷ್ಪರಾಜ್ ಕೆ. ಸ್ವಾಗತಿಸಿ, ಕಾನೂನು ವಿದ್ಯಾರ್ಥಿಗಳಾದ ಸ್ವಾತಿ ಶೆಟ್ಟಿ ನಿರೂಪಿಸಿ, ಶಂಕರ್ ವಂದಿಸಿದರು.

